ಮುಂಬೈ: ಭಾರತ ತಂಡದ ವೇಗದ ಬೌಲರ್ಗಳಾದ ಸಿದ್ಧಾರ್ಥ್ ಕೌಲ್ ಮತ್ತು ದೀಪಕ್ ಚಹರ್ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದು, ಆದಷ್ಟು ಬೇಗ ನೀವೂ ಪಡೆದುಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇಂದು ಕೋವಿಡ್ ಲಸಿಕೆಯ ನನ್ನ ಮೊದಲ ಡೋಸ್ ಪಡೆದುಕೊಂಡಿದ್ದೇನೆ. ನೀವೂ ಆದಷ್ಟು ಬೇಗ ಲಸಿಕೆಯನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ. ನಮ್ಮ ಆರೋಗ್ಯ ಕಾಪಾಡುವುದಕ್ಕೆ ಶ್ರಮಿಸುತ್ತಿರುವ ಪೊಲೀಸ್, ವೈದ್ಯರು ಮತ್ತು ಎಲ್ಲಾ ಮುಂಚೂಣಿ ಸೇವಕರಿಗೆ ಧನ್ಯವಾದ ಅರ್ಪಿಸುತ್ತೇನೆ. ಈ ಬಿಕ್ಕಟ್ಟಿನಿಂದ ಶೀಘ್ರದಲ್ಲೇ ಸುಧಾರಿಸುತ್ತೇವೆಂದು ಭರವಸೆಯಿದೆ ಎಂದು ದೀಪಕ್ ಚಹರ್ ಟ್ವೀಟ್ ಮಾಡಿದ್ದಾರೆ.