ವಡೋದರಾ:ಕಳೆದ ಅನೇಕ ವರ್ಷಗಳಿಂದ ಬರೋಡಾ ತಂಡದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದ ಆಲ್ರೌಂಡರ್ ದೀಪಕ್ ಹೂಡಾ ಇದೀಗ ರಾಜಸ್ಥಾನ ತಂಡ ಸೇರಿಕೊಂಡಿದ್ದಾರೆ. ಕಳೆದ ಜನವರಿ ತಿಂಗಳಲ್ಲಿ ನಡೆದಿದ್ದ ಸೈಯದ್ ಮುಷ್ತಾಕ್ ಅಲಿ ಟಿ-20 ಟೂರ್ನಿ ವೇಳೆ ಬರೋಡಾ ತಂಡದ ಕ್ಯಾಪ್ಟನ್ ಕೃನಾಲ್ ಪಾಂಡ್ಯಾ ಹಾಗೂ ದೀಪಕ್ ಹೂಡಾ ನಡುವೆ ಜಗಳವಾಗಿತ್ತು. ಹೀಗಾಗಿ ಟೂರ್ನಿಯಿಂದ ಅವರು ಹೊರಗುಳಿದಿದ್ದರು.
ಇದೇ ವಿಚಾರಕ್ಕಾಗಿ ದೀಪಕ್ ಹೂಡಾ ಅವರನ್ನ ಬರೋಡಾ ಕ್ರಿಕೆಟ್ ಅಸೋಸಿಯೇಷನ್ ಅಮಾನತುಗೊಳಿಸಿ ಆದೇಶ ಹೊರಡಿಸಿತು. ಈಗಾಗಲೇ ಅವರಿಗೆ ಬರೋಡಾ ಕ್ರಿಕೆಟ್ ಸಂಸ್ಥೆ ನಿರಾಕ್ಷೇಪಣ ಪತ್ರ ನೀಡಿದ್ದು, ಇದರ ಬೆನ್ನಲ್ಲೇ ರಾಜಸ್ಥಾನ ತಂಡ ಸೇರಿಕೊಂಡಿದ್ದಾರೆ.
ಇದನ್ನೂ ಓದಿರಿ: ಮುಂದಿನ ಆರು ತಿಂಗಳಲ್ಲಿ ಮಾಧ್ಯಮದ ಮೇಲೆ ನಿಯಂತ್ರಣ: ಅಣ್ಣಾಮಲೈ ವಿವಾದಿತ ಹೇಳಿಕೆ