ಕೋಲ್ಕತ್ತಾ :ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಟಿ-20 ಪಂದ್ಯದ ವೇಳೆ ಹ್ಯಾಮ್ಸ್ಟ್ರಿಂಗ್ಗೆ ಒಳಗಾಗಿ ಮೈದಾನ ತೊರೆದಿದ್ದ ವೇಗಿ ದೀಪಕ್ ಚಾಹರ್ ಮುಂಬರುವ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಅಲಭ್ಯರಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಪವರ್ ಪ್ಲೇ ನಲ್ಲೇ 2 ವಿಕೆಟ್ ಉರುಳಿಸಿದ್ದ ದೀಪಕ್ ಬೌಲಿಂಗ್ ಮಾಡಲು ಓಡುತ್ತಿದ್ದಾಗ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಹಾಗಾಗಿ, ಗುರುವಾರದಿಂದ ಆರಂಭವಾಗಲಿರುವ ಸಿಂಹಳೀಯರ ವಿರುದ್ಧ 3 ಪಂದ್ಯಗಳ ಟಿ-20 ಸರಣಿಗೆ ಅನುಮಾನ ಎನ್ನಲಾಗುತ್ತಿದೆ. ಪಿಟಿಐ ವರದಿಯ ಪ್ರಕಾರ ದೀಪಕ್ ಚಹಾರ್ ಅವರ ಸ್ನಾಯು ಸೆಳೆತ ಯಾವ ಪ್ರಮಾಣದಲ್ಲಿದೆ ಎನ್ನುವುದನ್ನು ಬಿಸಿಸಿಐ ವೈದ್ಯಕೀಯ ತಂಡ ಕಂಡು ಹಿಡಿಯಲಾಗುತ್ತಿದೆ.