ಕರ್ನಾಟಕ

karnataka

ETV Bharat / sports

ಬಾಂಗ್ಲಾಕ್ಕೆ ವಿಮಾನದಲ್ಲಿ ತೆರಳುತ್ತಿದ್ದ ಕ್ರಿಕೆಟಿಗ ಚಹಾರ್​ಗೆ ಕೆಟ್ಟ ಅನುಭವ - ಭಾರತ ಬಾಂಗ್ಲಾದೇಶ ಏಕದಿನ ಸರಣಿ

ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡವನ್ನು ಸೇರಲು ವೇಗಿ ದೀಪಕ್ ಚಹಾರ್ ನ್ಯೂಜಿಲ್ಯಾಂಡ್​​​ನಿಂದ ಮಲೇಷ್ಯಾ ಏರ್​​ಲೈನ್ಸ್ ವಿಮಾನದಲ್ಲಿ ಬಾಂಗ್ಲಾದೇಶಕ್ಕೆ ತೆರಳಿದ್ದಾರೆ.

deepak-chahar-disappointed-with-malaysia-airlines-was-flying-for-ind-vs-ban-odi-match
ಬಾಂಗ್ಲಾಕ್ಕೆ ವಿಮಾನದಲ್ಲಿ ತೆರಳುತ್ತಿದ್ದ ಕ್ರಿಕೆಟಿಗ ಚಹಾರ್​ಗೆ ಕೆಟ್ಟ ಅನುಭವ

By

Published : Dec 3, 2022, 5:18 PM IST

ನವದೆಹಲಿ: ಮಲೇಷ್ಯಾ ಏರ್​​ಲೈನ್ಸ್ ವಿರುದ್ಧ ಭಾರತದ ವೇಗದ ಬೌಲರ್ ದೀಪಕ್ ಚಹಾರ್ ಅಸಮಾಧಾನ ಹೊರ ಹಾಕಿದ್ದಾರೆ. ಮಲೇಷ್ಯಾ ಏರ್​​ಲೈನ್ಸ್​ನಲ್ಲಿ ಪ್ರಯಾಣ ಮಾಡಿದ ನನಗೆ ಕೆಟ್ಟ ಅನುಭವವಾಗಿದೆ ಎಂದು ಚಹಾರ್ ಗಂಭೀರ ಆರೋಪ ಮಾಡಿದ್ದಾರೆ.

ಭಾನುವಾರದಿಂದ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡವನ್ನು ಸೇರಲು ಚಹಾರ್ ನ್ಯೂಜಿಲ್ಯಾಂಡ್​ನಿಂದ ಮಲೇಷ್ಯಾ ಏರ್​​ಲೈನ್ಸ್ ವಿಮಾನದಲ್ಲಿ ಬಾಂಗ್ಲಾದೇಶಕ್ಕೆ ತೆರಳಿದ್ದಾರೆ. ಆದರೆ, ಬ್ಯುಸಿನೆಸ್ ಕ್ಲಾಸ್​ನಲ್ಲಿ ಪ್ರಯಾಣಿಸಿದರೂ ಊಟದ ವ್ಯವಸ್ಥೆ ಮಾಡಿಲ್ಲ ಎಂದು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಮಲೇಷ್ಯಾ ಏರ್​​ಲೈನ್ಸ್​ನಲ್ಲಿ ಪ್ರಯಾಣಿಸಿದ್ದು ನನಗೆ ಕೆಟ್ಟ ಅನುಭವವಾಗಿದೆ. ಮೊದಲಿಗೆ ನಮ್ಮ ಗಮನಕ್ಕೆ ತರದೆ ವಿಮಾನವನ್ನು ಬದಲಾಯಿಸಿದರು. ಬ್ಯುಸಿನೆಸ್ ಕ್ಲಾಸ್​ನಲ್ಲಿ ಬಂದಿದ್ದರೂ ಯಾವುದೇ ಊಟದ ವ್ಯವಸ್ಥೆ ಇರಲಿಲ್ಲ. ಈಗ ಕಳೆದ 24 ಗಂಟೆಗಳಿಂದ ನನ್ನ ಲಗೇಜ್​ಗಾಗಿ ಕಾಯುತ್ತಿದ್ದೇನೆ. ಆಲೋಚಿಸಿ ನಾವು ನಾಳೆ ಮೊದಲ ಏಕದಿನ ಪಂದ್ಯ ಆಡಬೇಕಿದೆ ಎಂದು ದೀಪಕ್ ಚಹಾರ್ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:ಬಾಂಗ್ಲಾ ವಿರುದ್ಧದ ಏಕದಿನ ಸರಣಿಯಿಂದ ಮೊಹಮ್ಮದ್ ಶಮಿ ಔಟ್​, ಉಮ್ರಾನ್​ ಮಲಿಕ್​ಗೆ ಅವಕಾಶ

ದೀಪಕ್ ಚಹಾರ್ ಟ್ವೀಟ್ ಬೆನ್ನಲ್ಲೇ ಮಲೇಷ್ಯಾ ಏರ್​​ಲೈನ್ಸ್ ಕೂಡ ಟ್ವೀಟ್​ ಮಾಡಿ ಪ್ರತಿಕ್ರಿಯಿಸಿದೆ. ನಿಮಗೆ ಈ ರೀತಿಯ ಅನುಭವ ಆಗಿದ್ದಕ್ಕೆ ಕ್ಷಮೆ ಕೋರುತ್ತೇವೆ. ವಿಮಾನಗಳ ಕಾರ್ಯಾಚರಣೆ, ಹವಾಮಾನ ಮತ್ತು ತಾಂತ್ರಿಕ ಕಾರಣಗಳಿಂದ ಈ ರೀತಿಯಾಗಿ ಆಗಿರಬಹುದು ಎಂದು ಮಲೇಷ್ಯಾ ಏರ್‌ಲೈನ್ಸ್ ಹೇಳಿದೆ. ಅಲ್ಲದೇ, ಈ ಬಗ್ಗೆ ದೂರು ನೀಡಲು ಚಹಾರ್​ ಅವರಿಗೆ ಮಲೇಷ್ಯಾ ಏರ್‌ಲೈನ್ಸ್ ಲಿಂಕ್ ಕಳುಹಿಸಿದೆ. ಆದರೆ, ಆ ಲಿಂಕ್ ತೆರೆಯುತ್ತಿಲ್ಲ ಎಂದು ಕ್ರಿಕೆಟಿಗ ಚಹಾರ್​ ಹೇಳಿದ್ದಾರೆ.

ನ್ಯೂಜಿಲ್ಯಾಂಡ್​ನಲ್ಲಿ ಏಕದಿನ ಸರಣಿಯ ಅಂತ್ಯದ ನಂತರ ದೀಪಕ್ ಚಹಾರ್, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಶಿಖರ್ ಧವನ್, ಶುಭಮನ್ ಗಿಲ್ ಮತ್ತು ವಾಷಿಂಗ್ಟನ್ ಸುಂದರ್ ಕ್ರೈಸ್ಟ್‌ಚರ್ಚ್‌ನಿಂದ ಕೌಲಾಲಂಪುರ್ ಮೂಲಕ ಢಾಕಾ ತಲುಪಿದ್ದಾರೆ.

ಸೂರ್ಯಕುಮಾರ್ ಯಾದವ್ ಮತ್ತು ಉಮ್ರಾನ್ ಮಲಿಕ್ ನೇರವಾಗಿ ಭಾರತವನ್ನು ಬಂದಿದ್ದಾರೆ. ಆದಾಗ್ಯೂ, ಗಾಯಗೊಂಡಿರುವ ಮೊಹಮ್ಮದ್ ಶಮಿ ಬದಲಿಗೆ ಮಲಿಕ್ ಅವರನ್ನು ಏಕದಿನ ತಂಡಕ್ಕೆ ಸೇರಿಸಿಕೊಂಡಿರುವುದರಿಂದ ಈಗ ಅವರು ಬಾಂಗ್ಲಾದೇಶ ಪ್ರವಾಸ ಮಾಡಬೇಕಾಗಿದೆ.

ಇದನ್ನೂ ಓದಿ:ಫಿಟ್ನೆಸ್‌ಗಾಗಿ ರೋಹಿತ್​ ಶರ್ಮಾ ಹೆಚ್ಚು ಶ್ರಮಿಸಬೇಕು: ಮಣಿಂದರ್ ಸಿಂಗ್

ABOUT THE AUTHOR

...view details