ಕರ್ನಾಟಕ

karnataka

ETV Bharat / sports

ದೀಪಕ್ ಚಾಹರ್​ಗೆ ಒಲಿದ ಜಾಕ್​ಪಾಟ್​.. 2022ರ ಐಪಿಎಲ್​​ ಹರಾಜಿನಲ್ಲಿ ಕೋಟಿ ವೀರರಾದ ಬೌಲರ್​ಗಳ ಪಟ್ಟಿ

ಭಾರತ ತಂಡದಲ್ಲಿ ಆಲ್​ರೌಂಡರ್​ ಆಗಿ ಮಿಂಚುತ್ತಿರುವ ದೀಪಕ್​ರನ್ನು ಚೆನ್ನೈ ಸೂಪರ್​ ಕಿಂಗ್ಸ್​ ರಾಜಸ್ಥಾನ್ ರಾಯಲ್ಸ್​ ಜೊತೆಗೆ ಭಾರಿ ಹೋರಾಟ ನಡೆಸಿ ದಾಖಲೆಯ ಬೆಲೆಗೆ ಖರೀದಿಸಿತು. 2022ರ ಹರಾಜಿನಲ್ಲಿ ಬೌಲರ್​ ಒಬ್ಬ ಪಡೆದ ಅತ್ಯಂತ ಗರಿಷ್ಠ ಮೊತ್ತ ಇದಾಗಿದೆ.

Deepak Chahar becomes highest pick of CSK at 14 Crore in IPL 2022 Auction
ದೀಪಕ್ ಚಾಹರ್​ಗೆ 14 ಕೋಟಿ

By

Published : Feb 12, 2022, 6:37 PM IST

Updated : Feb 12, 2022, 7:42 PM IST

ಬೆಂಗಳೂರು:ಭಾರತ ತಂಡದ ವೇಗದ ಬೌಲರ್​ ದೀಪಕ್​ ಚಾಹರ್​ ಅವರನ್ನು ಬರೋಬ್ಬರಿ 14 ಕೋಟಿ ರೂಪಾಯಿ ನೀಡಿ ಖರೀದಿಸಿದೆ.

ಭಾರತ ತಂಡದಲ್ಲಿ ಆಲ್​ರೌಂಡರ್​ ಆಗಿ ಮಿಂಚುತ್ತಿರುವ ದೀಪಕ್​ರನ್ನು ಚೆನ್ನೈ ಸೂಪರ್​ ಕಿಂಗ್ಸ್​ ರಾಜಸ್ಥಾನ್ ರಾಯಲ್ಸ್​ ಜೊತೆಗೆ ಭಾರಿ ಹೋರಾಟ ನಡೆಸಿ ದಾಖಲೆಯ ಬೆಲೆಗೆ ಖರೀದಿಸಿತು. 2022ರ ಹರಾಜಿನಲ್ಲಿ ಬೌಲರ್​ ಒಬ್ಬ ಪಡೆದ ಅತ್ಯಂತ ಗರಿಷ್ಠ ಮೊತ್ತ ಇದಾಗಿದೆ.

ದಕ್ಷಿಣ ಆಫ್ರಿಕಾದ ಬೌಲರ್​ ಕಗಿಸೊ ರಬಾಡರನ್ನು 9.25 ಕೋಟಿ ರೂ. ನೀಡಿ ಪಂಜಾಬ್​ ಕಿಂಗ್ಸ್​ ಖರೀದಿಸಿದೆ. ಒಟ್ಟಾರೆ ಚಾಹರ್​ ಇಂದಿನ ಹರಾಜಿನಲ್ಲಿ ಗರಿಷ್ಠ ಮೊತ್ತಕ್ಕೆ ಬಿಕರಿಯಾದ ಬೌಲರ್​ ಎನಿಸಿಕೊಂಡರು.

ಇದನ್ನೂ ಓದಿ:2022ರ ಐಪಿಎಲ್​ನಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಇಶಾನ್ ಕಿಶನ್​

ಆದರೆ ಅಫ್ಘಾನಿಸ್ತಾನದ ಸ್ಪಿನ್ನರ್​ ರಶೀದ್ ಖಾನ್​ ಅವರನ್ನು ಗುಜರಾತ್ ಟೈಟನ್ಸ್​ 15 ಕೋಟಿ ನೀಡಿ ರಿಟೈನ್ ಮಾಡಿಕೊಂಡಿದ್ದು, ದುಬಾರಿ ಬೌಲರ್​ ಎನಿಸಿಕೊಂಡಿದ್ದಾರೆ. ಬುಮ್ರಾ 12 ಕೋಟಿ ರೂ. ಪಡೆದಿದ್ದಾರೆ.

ಗರಿಷ್ಠ ಬೆಲೆ ಪಡೆದ ವೇಗದ ಬೌಲರ್​ಗಳು:

  1. ದೀಪಕ್ ಚಾಹರ್​ - 14 ಕೋಟಿ ರೂ.
  2. ಶಾರ್ದೂಲ್ - 10.07 ಕೋಟಿ
  3. ಪ್ರಸಿಧ್ ಕೃಷ್ಣ - 10 ಕೋಟಿ
  4. ಲಾಕಿ ಫರ್ಗ್ಯಸನ್ -​ 10 ಕೋಟಿ
  5. ಕಗಿಸೋ ರಬಾಡ - 9.25 ಕೋಟಿ
  6. ಟ್ರೆಂಟ್​ ಬೌಲ್ಟ್ -​ 8 ಕೋಟಿ
  7. ಜೋಶ್ ಹೇಜಲ್​ವುಡ್ -​ 7.75 ಕೋಟಿ
  8. ಮಾರ್ಕ್ ​ವುಡ್​ - 7.5 ಕೋಟಿ
  9. ಮೊಹಮ್ಮದ್ ಶಮಿ - 6.25 ಕೋಟಿ
Last Updated : Feb 12, 2022, 7:42 PM IST

ABOUT THE AUTHOR

...view details