ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ 12ನೇ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಬ್ಯಾಟಿಂಗ್ ಸ್ವರ್ಗವಾಗಿರುವ ವಾಂಖೆಡೆಯಲ್ಲಿ ತಲಾ ಒಂದು ಗೆಲುವು ಮತ್ತು ಸೋಲು ಕಂಡಿರುವ ಡೆಲ್ಲಿ ಮತ್ತು ಪಂಜಾಬ್ ತಂಡಗಳು ತಮ್ಮ 2ನೇ ಗೆಲುವಿಗಾಗಿ ಸೆಣಸಾಡುತ್ತಿವೆ. ಡೆಲ್ಲಿ ತಂಡ ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಡೆಲ್ಲಿ ಅಗ್ರಕ್ರಮಾಂಕವನ್ನು ಬಲಪಡಿಸಿಕೊಳ್ಳಲು ಆಸೀಸ್ ಮಾಜಿ ನಾಯಕ ಸ್ಟೀವ್ ಸ್ಮಿತ್ ರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಟಾಮ್ ಕರ್ರನ್ ಹೊರಗುಳಿಯಲಿದ್ದಾರೆ.
ಪಂಜಾಬ್ ತಂಡ ಮುರುಗನ್ ಅಶ್ವಿನ್ ಬದಲಿಗೆ ಆಲ್ರೌಂಡರ್ ಜಲಜ್ ಸಕ್ಸೇನಾಗೆ ಅವಕಾಶ ನೀಡಿದೆ.
ಸಂಭವನೀಯ ಪಂಜಾಬ್ ಕಿಂಗ್ಸ್: ಕೆ.ಎಲ್.ರಾಹುಲ್ (ನಾಯಕ / ವಿಕೆಟ್ ಕೀಪರ್), ಮಾಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ಡೇವಿಡ್ ಮಲನ್ನಿ, ಕೋಲಸ್ ಪೂರನ್ (ವಿಕೆಟ್ ಕೀಪರ್), ಶಾರುಖ್ ಖಾನ್, ದೀಪಕ್ ಹೂಡಾ, ಜಲಜ್ ಸಕ್ಸೇನಾ, ಮೊಹಮ್ಮದ್ ಶಮಿ, ಅರ್ಷ್ದೀಪ್ ಸಿಂಗ್, ಜೇ ರಿಚರ್ಡ್ಸನ್, ರಿಲೆ ಮೆರೆಡಿತ್.
ಸಂಭವನೀಯ ಡೆಲ್ಲಿ ಕ್ಯಾಪಿಟಲ್ಸ್: ರಿಷಭ್ ಪಂತ್ (ನಾಯಕ / ವಿಕೆಟ್ ಕೀಪರ್), ಶಿಖರ್ ಧವನ್, ಪೃಥ್ವಿ ಶಾ ,ಸ್ಟೀವ್ ಸ್ಮಿತ್, ಕಗಿಸೊ ರಬಾಡ, ಆವೇಶ್ ಖಾನ್, ಮಾರ್ಕಸ್ ಸ್ಟೋನಿಸ್, ರವಿಚಂದ್ರನ್ ಅಶ್ವಿನ್, ಕ್ರಿಸ್ ವೋಕ್ಸ್. ಲುಕ್ಮನ್ ಮೆರಿವಾಲ