ಮುಂಬೈ:ಬೌಲರ್ಗಳ ಸಂಘಟಿತ ದಾಳಿಯ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ಕೇವಲ 115 ರನ್ಗಳಿಗೆ ಪಂಜಾಬ್ ಕಿಂಗ್ಸ್ ತಂಡವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ.
ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ರಿಷಭ್ ಪಂತ್ ಪಂಜಾಬ್ ಕಿಂಗ್ಸ್ಗೆ ಬ್ಯಾಟಿಂಗ್ ಆಹ್ವಾನ ನೀಡಿದರು. ನಾಯಕನ ನಿರ್ಣಯಕ್ಕೆ ತಕ್ಕಂತೆ ಬೌಲಿಂಗ್ ಮಾಡಿದ ಡೆಲ್ಲಿ ಬೌಲರ್ಗಳು ಕೇವಲ 7 ಓವರ್ಗಳ ಒಳಗೆ ತಂಡದ ಅಗ್ರಕ್ರಮಾಂಕದ ಸ್ಟಾರ್ ಟ್ಯಾಟರ್ಗಳನ್ನು ಪೆವಿಲಿಯನ್ಗಟ್ಟಿದರು.
ನಾಯಕ ಮಯಾಂಕ್ ಅಗರ್ವಾಲ್ 24, ಶಿಖರ್ ಧವನ್ 9, ಬೈರ್ಸ್ಟೋವ್ 9 ಮತ್ತು ಲಿಯಾಮ್ ಲಿವಿಂಗ್ಸ್ಟೋನ್ ಕೇವಲ 2 ರನ್ಗಳಸಿ ವಿಕೆಟ್ ಒಪ್ಪಿಸಿದರು. 54 ರನ್ಗಳಾಗುವಷ್ಟರಲ್ಲಿ ತಂಡದ ಸ್ಟಾರ್ ಬ್ಯಾಟರ್ಗಳನ್ನು ಕಳೆದುಕೊಂಡ ಪಂಜಾಬ್ ತಂಡ100ರ ಗಡಿ ದಾಟುವುದು ಅನುಮಾನ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಜಿತೇಶ್ ಶರ್ಮಾ 32 ರನ್ಗಳಿಸಿ ತಂಡವನ್ನು ಕುಸಿತದಿಂದ ಪಾರು ಮಾಡಿದರು.
13ನೇ ಓವರ್ನಲ್ಲಿ ಜಿತೇಶ್ ಶರ್ಮಾ ಅಕ್ಷರ್ ಪಟೇಲ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಇವರ ವಿಕೆಟ್ ಬೀಳುತ್ತಿದ್ದಂತೆ ಪಂಜಾಬ್ ಮತ್ತೊಮ್ಮೆ ಕುಸಿತ ಕಂಡು, ಕೇವಲ 7 ರನ್ ಅಂತರದಲ್ಲಿ ರಬಾಡ(2), ನೇಥನ್ ಎಲ್ಲಿಸ್(0)ಶಾರುಖ್ ಖಾನ್ (12) ವಿಕೆಟ್ ಕಳೆದುಕೊಂಡಿತು. ಕೊನೆಯಲ್ಲಿ ರಾಹುಲ್ ಚಾಹರ್ 12 ರನ್ ಮತ್ತು ಅರ್ಶ್ದೀಪ್ 9 ರನ್ಗಳಿಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ಪರ ಅಕ್ಷರ್ ಪಟೇಲ್ 10ಕ್ಕೆ2 , ಲಲಿತ್ ಯಾದವ್ 11ಕ್ಕೆ 2, ಕುಲ್ದೀಪ್ ಯಾದವ್ 24ಕ್ಕೆ2, ಖಲೀಲ್ ಅಹ್ಮದ್ 21ಕ್ಕೆ2 ಮತ್ತು ರೆಹಮಾನ್ 28ಕ್ಕೆ1 ವಿಕೆಟ್ ಪಡೆದು ಅದ್ಭುತ ಪ್ರದರ್ಶನ ತೋರಿದರು.