ಶಾರ್ಜಾ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 4 ವಿಕೆಟ್ಗಳ ರೋಚಕ ಜಯ ಸಾಧಿಸಿದೆ. ಈ ಜಯದ ಮೂಲಕ ಅಗ್ರ 2 ಸ್ಥಾನ ಪಡೆಯುವುದಕ್ಕೆ ಮತ್ತಷ್ಟು ಹತ್ತಿರವಾಗಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 129 ರನ್ಗಳಿಸಿತ್ತು. ಡೆಲ್ಲಿ ತಂಡ 19.1 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಪ್ಲೇ ಆಫ್ಗೆ ಪ್ರವೇಶಿಸಲು ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಮುಂಬೈ ತಂಡದ ಬ್ಯಾಟ್ಸ್ಮನ್ಗಳು ನೀರಸ ಪ್ರದರ್ಶನ ತೋರಿದರು. ಸೂರ್ಯಕುಮಾರ್ ಯಾದವ್ 26 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 2 ಬೌಂಡರಿ ಸೇರಿದಂತೆ 33 ರನ್ಗಳಿಸಿ ಟಾಪ್ ಸ್ಕೋರರ್ ಎನಿಸಿಕೊಂಡರು. ಇವರನ್ನು ಹೊರೆತುಪಡಿಸಿದರೆ ಮುಂಬೈ ತಂಡದ ಯಾವೊಬ್ಬ ಬ್ಯಾಟ್ಸ್ಮನ್ 20ರ ಗಡಿ ದಾಟಿಲಿಲ್ಲ.
ನಾಯಕ ರೋಹಿತ್(7), ಡಿಕಾಕ್(19), ಸೌರಭ್ ತಿವಾರಿ(15), ಪೊಲಾರ್ಡ್(6), ಹಾರ್ದಿಕ್ ಪಾಂಡ್ಯ(17),ಕೌಲ್ಟರ್ ನೈಲ್(1)ಜಯಂತ್ ಯಾದವ್(11) ಮತ್ತು ಕೃನಾಲ್ ಪಾಂಡ್ಯ ಅಜೇಯ 13 ರನ್ಗಳಿಸಿದರು.