ಕರ್ನಾಟಕ

karnataka

ETV Bharat / sports

ಅಹರ್ನಿಶಿ ಟೆಸ್ಟ್​ : ಆಸೀಸ್ ಮಹಿಳೆಯರಿಗೆ 272 ರನ್​ಗಳ ಟಾರ್ಗೆಟ್​ ನೀಡಿದ ಭಾರತ

ಭಾರತದ ಪರ ಪೂಜಾ ವಸ್ತ್ರಾಕರ್​ 49ಕ್ಕೆ3, ಜೂಲನ್ ಗೋಸ್ವಾಮಿ 33ಕ್ಕೆ2, ಮೇಘನಾ ಸಿಂಗ್ 54ಕ್ಕೆ2 ಮತ್ತು ದೀಪ್ತಿ ಶರ್ಮಾ 36ಕ್ಕೆ 2 ವಿಕೆಟ್​ ಒಪ್ಪಿಸಿದರು. ಇನ್ನು, 136 ರನ್​ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ 135 ರನ್​ಗಳಿಸಿ ಡಿಕ್ಲೇರ್​ ಘೋಷಿಸಿಕೊಂಡಿತು..

By

Published : Oct 3, 2021, 4:46 PM IST

Day and night test: Indian women set 272 target to Australia
ಆಸ್ಟ್ರೇಲಿಯಾ ಮಹಿಳೆಯರಿಗೆ 272 ರನ್​ಗಳ ಟಾರ್ಗೆಟ್​ ನೀಡಿದ ಭಾರತ

ಕ್ವೀನ್ಸ್​ಲ್ಯಾಂಡ್ : ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಅಹರ್ನಿಶಿ ಟೆಸ್ಟ್​ ಪಂದ್ಯದಲ್ಲಿ ಭಾರತ ಮಹಿಳಾ ತಂಡ ತನ್ನ 2ನೇ ಇನ್ನಿಂಗ್ಸ್​ನಲ್ಲಿ 135 ರನ್​ಗಳಿಸಿ ಡಿಕ್ಲೇರ್​ ಘೋಷಿಸಿಕೊಂಡು, ಆಸೀಸ್ ಮಹಿಳೆಯರಿಗೆ 272 ರನ್​ಗಳ ಟಾರ್ಗೆಟ್​ ನೀಡಿದೆ.

ಮೂರನೇ ದಿನ 4 ವಿಕೆಟ್​ ಕಳೆದುಕೊಂಡು 143 ರನ್​ಗಳಿಸಿದ್ದ ಆಸ್ಟ್ರೇಲಿಯಾ ಇಂದು 9 ವಿಕೆಟ್​ ನಷ್ಟಕ್ಕೆ 241ರನ್​ಗಳಿಸಿದ್ದ ವೇಳೆ ಡಿಕ್ಲೇರ್ ಘೋಷಿಸಿಕೊಂಡಿತು. ಎಲಿಸ್​ ಪೆರ್ರಿ 68, ಆಶ್ಲೇ ಗಾರ್ಡ್ನರ್​ 51 ರನ್, ಅಲಿಸ್ಸಾ ಹೀಲಿ 28, ಮೆಗ್‌ ಲ್ಯಾನಿಂಗ್ 38, ತಹಿಲಾ ಮೆಕ್​ಗ್ರಾತ್​ 28 ರನ್​ಗಳಿಸಿದರು.

ಭಾರತದ ಪರ ಪೂಜಾ ವಸ್ತ್ರಾಕರ್​ 49ಕ್ಕೆ3, ಜೂಲನ್ ಗೋಸ್ವಾಮಿ 33ಕ್ಕೆ2, ಮೇಘನಾ ಸಿಂಗ್ 54ಕ್ಕೆ2 ಮತ್ತು ದೀಪ್ತಿ ಶರ್ಮಾ 36ಕ್ಕೆ 2 ವಿಕೆಟ್​ ಒಪ್ಪಿಸಿದರು. ಇನ್ನು, 136 ರನ್​ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ 135 ರನ್​ಗಳಿಸಿ ಡಿಕ್ಲೇರ್​ ಘೋಷಿಸಿಕೊಂಡಿತು.

ಶೆಫಾಲಿ ವರ್ಮಾ 52, ಸ್ಮೃತಿ ಮಂದಾನ 31 ಮತ್ತು ಪೂನಮ್ ರಾವತ್​ ಅಜೇಯ 42 ರನ್​ಗಳಿಸಿದರು. ಇದೀಗ 272 ರನ್​ಗಳ ಗುರಿ ಬೆನ್ನಟ್ಟಿರುವ ಆಸ್ಟ್ರೇಲಿಯಾ ಮಹಿಳೆಯರು 11 ಓವರ್​ಗಳಲ್ಲಿ 2 ವಿಕೆಟ್​ ಕಳೆದುಕೊಂಡು 30 ರನ್​ಗಳಿಸಿದ್ದಾರೆ.

ಇದನ್ನು ಓದಿ:ಕೆಕೆಆರ್​ ಪ್ಲೇ ಆಫ್​ ಕನಸಿಗೆ ಭಂಗ ತರುವುದೇ ಸನ್​ರೈಸರ್ಸ್​ ಹೈದರಾಬಾದ್​?

ABOUT THE AUTHOR

...view details