ಹೈದರಾಬಾದ್: ಐಪಿಎಲ್ ಕೊರೊನಾಗೆ ಬಲಿಯಾಗಿದೆ, ವಿದೇಶಿ ಆಟಗಾರರು ತವರಿಗೆ ಮರಳುವುದು ಹೇಗೆ ಎನ್ನುವ ಆತಂಕದಲ್ಲಿದ್ದಾರೆ. ಈ ಮಧ್ಯೆ ಆಸ್ಟ್ರೇಲಿಯಾ ಸರ್ಕಾರ ಮೇ 15ರೊಳಗೆ ಬಂದರೆ ಜೈಲಿಗೆ ಕಳಿಸುತ್ತೇವೆಂದು ಘೋಷಿಸಿದೆ. ಇಂತಹ ಸಂದರ್ಭದಲ್ಲಿ ವಾರ್ನರ್ ಮಗಳು ಇವಿ ಬರೆದಿರುವ ಪತ್ರವೊಂದು ನೆಟ್ಟಿಗರ ಮನ ಮುಟ್ಟಿದೆ.
ಇತ್ತ ಐಪಿಎಲ್ ನಡೆಯುತ್ತಿಲ್ಲ , ಭಾರತದಲ್ಲಿ ಕೊರೊನಾ ಏರುಗತಿ ನೋಡಿದ ಆಸ್ಟ್ರೇಲಿಯನ್ನರಿಗೆ ಇಲ್ಲಿರಲು ಆತಂಕವಿದೆ. ಮೇ 15ರ ತನಕ ಸ್ವದೇಶಕ್ಕೂ ಹೋಗುವ ಹಾಗಿಲ್ಲ. ಇದೀಗ ಬಾಯಿಗೆ ಬಿಸಿ ತುಪ್ಪ ಹಾಕಿಕೊಂಡು ನುಂಗಲೂ ಆಗದೆ, ಉಗಿಯಲೂ ಆಗದಿರುವಂತೆ ಸ್ಥಿತಿಯಲ್ಲಿ ಆಸ್ಟ್ರೇಲಿಯಾದ ಕ್ರಿಕೆಟಿಗರಿದ್ದಾರೆ.
ಎಲ್ಲ ಕ್ರಿಕೆಟಿಗರು ತವರಿಗೆ ಮರಳುವುದನ್ನೇ ಕಾಯುತ್ತಿದ್ದಾರೆ, ಹಾಗೆಯೇ ಅವರ ಕುಟುಂಬಸ್ಥರೂ ಕೂಡ ಕ್ರಿಕೆಟಿಗರನ್ನು ನೋಡುವ ತವಕದಲ್ಲಿದ್ದಾರೆ. ವಾರ್ನರ್ ತಮ್ಮ ಎರಡನೇ ಮಗಳು ಇವಿ ಬರೆದಿರುವ ಒಂದು ಪತ್ರವನ್ನು ತಮ್ಮ ಇನ್ಸ್ಟಾ ಖಾತೆಯಲ್ಲಿ ಫೋಟೋವೊಂದವನ್ನು ಶೇರ್ ಮಾಡಿಕೊಂಡಿದ್ದಾರೆ.