ಆಸೀಸ್ ತಂಡದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುತ್ತಾರೆ. ಇನ್ಸ್ಟಾಗ್ರಾಮ್ನಲ್ಲಿ ಆಗಾಗ ರೀಲ್ಸ್ಗಳನ್ನು ಪೋಸ್ಟ್ ಮಾಡುತ್ತಾರೆ. ಭಾರತ ಸಿನಿಮಾ ರಂಗದ ಮೇಲೆ ಇವರಿಗೆ ವಿಶೇಷ ಆಸಕ್ತಿ ಇದೆ. ಟಿಕ್ಟಾಕ್ ಆ್ಯಪ್ ಪ್ರಚಲಿತದಲ್ಲಿದ್ದಾಗ ಅನೇಕ ಸಿನಿಮಾ ಹಾಡುಗಳಿಗೆ ನೃತ್ಯ ಮಾಡಿ ತಮ್ಮ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿದ್ದರು.
ಈಗ ಹೊಸ ರೀತಿಯ ವಿಡಿಯೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಭಾರತೀಯ ಇತ್ತೀಚಿನ ಸಿನಿಮಾಗಳ ತುಣುಕುಗಳಿಗೆ ತಮ್ಮ ಮುಖವನ್ನು ಮಾರ್ಫ್ ಮಾಡಿರುವ ವಿಡಿಯೋ ಇದು. ಕೆಲದಿನಗಳ ಹಿಂದೆ ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾದ ಟ್ರೇಲರ್ ಬಿಡುಗಡೆ ಆದಾಗ ಶಾರುಖ್ ಮುಖಕ್ಕೆ ತಮ್ಮ ಮುಖ ಮಾರ್ಫ್ ಮಾಡಿ ವಿಡಿಯೋ ಮಾಡಿದ್ದರು.
ಇದಕ್ಕೂ ಮೊದಲು ತೆಲುಕಿಗ ಪುಷ್ಪ ದಿ ರೈಸ್ ಸಿನಿಮಾದ ನಟ ವಿಜಯ್ ದೇವರಕೊಂಡ ಪಾತ್ರಕ್ಕೆ ಇದೇ ರೀತಿಯ ವಿಡಿಯೋ ಮಾಡಿದ್ದರು. ಈಗ ತಮಿಳು ಚಲನಚಿತ್ರ ನಿರ್ಮಾಪಕ ಎಸ್.ಶಂಕರ್ ಅವರ ಐ ಸಿನಿಮಾದ ಫೈಟ್ ಸೀಕ್ವೆಲ್ಗೆ ಮುಖವಾಗಿದ್ದಾರೆ. ವಿಡಿಯೋ ಹಂಚಿಕೊಂಡು, "ನನ್ನ ಇಷ್ಟದ ಸಿನಿಮಾಗಳಲ್ಲಿ ಇದೂ ಒಂದು. ಸಿನಿಮಾ ಗುರುತಿಸಿ" ಎಂದು ಬರೆದಿದ್ದಾರೆ."
ಇದಕ್ಕೆ ಕ್ರಿಕೆಟ್, ಸಿನಿಮಾ ಅಭಿಮಾನಿಗಳು ಪ್ರತಿಕ್ರಿಯಿಸುತ್ತಿದ್ದಾರೆ. 5 ಲಕ್ಷಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. 14 ಸಾವಿರ ಕಮೆಂಟ್ಗಳು ಬಂದಿವೆ. ಒಳ್ಳೆಯ ಸಿನಿಮಾ ನೋಡಿ ಒಮ್ಮೆ ಎಂದು ಹಲವಾರು ಅಭಿಮಾನಿಗಳು ಬರೆದಿದ್ದಾರೆ. ನಟ ವಿಕ್ರಮ್ ಅಭಿನಯದ ಐ ಸಿನಿಮಾ 2015ರಲ್ಲಿ ಬಿಡುಗಡೆಯಾಗಿ ಉತ್ತಮ ವಿಮರ್ಶೆ ಗಳಿಸಿದೆ. ಚಿತ್ರಕ್ಕೆ ಐಮ್ಡಿಬಿ 7.4ರ ರೇಟಿಂಗ್ ನೀಡಿದೆ. ಪಿಲ್ಮ್ ಫೇರ್ ಅವಾರ್ಡ್ಗೂ ಪಾತ್ರವಾಗಿತ್ತು.