ನವದೆಹಲಿ:ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಈಗಾಗಲೇ ಅನೇಕ ದಾಖಲೆ ನಿರ್ಮಾಣ ಮಾಡಿರುವ ಡೇವಿಡ್ ವಾರ್ನ್ ಇಂದಿನ ಪಂದ್ಯದಲ್ಲಿ ಹೊಸದಾಗಿ ಮೂರು ಹೊಸ ದಾಖಲೆಗಳನ್ನ ಬರೆದಿದ್ದಾರೆ. ವಿಶೇಷವಾಗಿ ಐಪಿಎಲ್ನಲ್ಲಿ 50 ಅರ್ಧಶತಕ ಗಳಿಕೆ ಮಾಡಿರುವ ಮೊದಲ ಪ್ಲೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ 50 ಅರ್ಧಶತಕ ಗಳಿಕೆ ಮಾಡಿರುವ ಮೊದಲ ಪ್ಲೇಯರ್ ಎಂಬ ದಾಖಲೆಗೆ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಪಾತ್ರರಾಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 50ರನ್ಗಳಿಕೆ ಮಾಡುತ್ತಿದ್ದಂತೆ ವಾರ್ನರ್ ಈ ಸಾಧನೆಗೆ ಪಾತ್ರರಾಗಿದ್ದಾರೆ.
ವಾರ್ನರ್ ದಾಖಲೆ ಇಂತಿವೆ
- ಐಪಿಎಲ್ನಲ್ಲಿ 50 ಅರ್ಧಶತಕ
- 200 ಸಿಕ್ಸರ್ ಸಿಡಿಸಿದ ಪ್ಲೇಯರ್
- ಟಿ-20 ಕ್ರಿಕೆಟ್ನಲ್ಲಿ 10 ಸಾವಿರ ರನ್ ಪೂರೈಕೆ
ಇದರ ಜತೆಗೆ ಟಿ-20 ಕ್ರಿಕೆಟ್ನಲ್ಲಿ 10 ಸಾವಿರ ರನ್ಗಳಿಕೆ ಮಾಡಿರುವ 4ನೇ ಪ್ಲೇಯರ್ ಆಗಿ ಹೊರಹೊಮ್ಮಿದ್ದಾರೆ. ಈಗಾಗಲೇ ವೆಸ್ಟ್ ಇಂಡೀಸ್ನ ಪೋಲಾರ್ಡ್ 10,370ರನ್, ಕ್ರಿಸ್ ಗೇಲ್ 13,296ರನ್ ಹಾಗೂ ಪಾಕ್ನ ಶೋಯೆಬ್ ಮಲಿಕ್ ಈ ಸಾಧನೆ ಮಾಡಿದ್ದಾರೆ. ಇದರ ಜತೆಗೆ ಐಪಿಎಲ್ನಲ್ಲಿ 200 ಸಿಕ್ಸರ್ ಸಿಡಿಸಿರುವ ಸಾಧನೆ ಸಹ ಮಾಡಿದ್ದಾರೆ. ಈಗಾಗಲೇ ಗೇಲ್(354 ಸಿಕ್ಸರ್), ಎಬಿಡಿ ವಿಲಿಯರ್ಸ್ (245), ರೋಹಿತ್ ಶರ್ಮಾ(222), ಎಂಎಸ್ ಧೋನಿ(217), ಪೋಲಾರ್ಡ್ ಹಾಗೂ ಸುರೇಶ್ ರೈನಾ (202)ಸಿಕ್ಸರ್ ಸಿಡಿಸಿದ್ದಾರೆ.
ಇದನ್ನೂ ಓದಿ: ವಾರ್ನರ್ - ಪಾಂಡೆ ಶತಕದ ಜೊತೆಯಾಟ.. ಚೆನ್ನೈ ಗೆಲುವಿಗೆ 172ರನ್ ರನ್ ಟಾರ್ಗೆಟ್
ಐಪಿಎಲ್ನಲ್ಲಿ ಶಿಖರ್ ಧವನ್ 43 ಅರ್ಧಶತಕ, ಎಬಿಡಿ 40, ವಿರಾಟ್ ಕೊಹ್ಲಿ 40, ರೋಹಿತ್ ಶರ್ಮಾ 40,ಸುರೇಶ್ ರೈನಾ 39, ಗಂಭೀರ್ 36, ಗೇಲ್ 31, ರಹಾನೆ 28,ಕೆಎಲ್ ರಾಜುಲ್ 24, ಉತ್ತಪ್ಪ 24, ಧೋನಿ 23, ವ್ಯಾಟ್ಸನ್ 21 ಅರ್ಧಶತಕ ಗಳಿಕೆ ಮಾಡಿದ್ದಾರೆ.