ಕರ್ನಾಟಕ

karnataka

ETV Bharat / sports

ಅಮೀರ್​ ವಿರುದ್ಧ ಅತಿದೊಡ್ಡ ಆರೋಪ ಮಾಡಿದ ಕನೇರಿಯಾ.. ಪಾಕ್​ ಕ್ರಿಕೆಟ್​​ನಲ್ಲಿ ಸುಂಟರಗಾಳಿ? - ಮೊಹಮ್ಮದ್ ಅಮೀರ್ ವಿರುದ್ಧ ವಾಗ್ದಳಿ

ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮೇಲೆ ಮೊಹಮ್ಮದ್​ ಅಮೀರ್​​ ಬ್ಲ್ಯಾಕ್​ ಮೇಲ್ ಯತ್ನ ನಡೆಸುತ್ತಿದ್ದಾರೆ ಎಂದು ಪಾಕ್​ನ ಮಾಜಿ ಕ್ರಿಕೆಟರ್​ ದಾನೀಶ್​​ ಕನೇರಿಯಾ ಹೇಳಿಕೊಂಡಿದ್ದಾರೆ.

Danish Kaneria
Danish Kaneria

By

Published : May 17, 2021, 9:09 PM IST

ಕರಾಚಿ:ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಲೆಗ್​ ಸ್ಪಿನ್ನರ್​​ ದಾನೀಶ್​ ಕನೇರಿಯಾ ಮಾಜಿ ವೇಗದ ಬೌಲರ್ ಮೊಹಮ್ಮದ್​​ ಅಮೀರ್​​ ವಿರುದ್ಧ ಅತಿದೊಡ್ಡ ಆರೋಪ ಮಾಡಿದ್ದು, ಇದು ಪಾಕ್​​ ಕ್ರಿಕೆಟ್ ಮಂಡಳಿಯಲ್ಲಿ ಸುಂಟರಗಾಳಿ ಎಬ್ಬಿಸುವ ಸಾಧ್ಯತೆ ಇದೆ.

ಟ್ವಿಟರ್​ನಲ್ಲಿ ಆರೋಪ ಮಾಡಿರುವ ಕನೇರಿಯಾ, ಮಾಜಿ ವೇಗದ ಬೌಲರ್ ಮೊಹಮ್ಮದ್​ ಅಮೀರ್​ ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನ ಬ್ಲ್ಯಾಕ್​ ಮೇಲ್ ಮಾಡಲು ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಕಳೆದ ವರ್ಷ ದಿಢೀರ್ ಆಗಿ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಪಡೆದುಕೊಂಡಿರುವ ಮೊಹಮ್ಮದ್​ ಅಮೀರ್​, ಪಾಕ್​ ಕ್ರಿಕೆಟ್​ ಮಂಡಳಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಆದರೆ ಇದನ್ನ ಅಲ್ಲಗೆಳೆದಿರುವ ಕನೇರಿಯಾ ಇದೊಂದು ಬ್ಲ್ಯಾಕ್​ ಮೇಲ್​ ತಂತ್ರವಾಗಿದೆ ಎಂದಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಮೊಹಮ್ಮದ್​ ಅಮೀರ್​​​, ತಮಗೆ ಕ್ರಿಕೆಟ್ ಮಂಡಳಿ ಅವಮಾನ ಮಾಡಿದ್ದು, ಗೌರವ ನೀಡುತ್ತಿಲ್ಲ. ಹೀಗಾಗಿ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು.

ಮೊಹಮ್ಮದ್ ಅಮೀರ್​​

ಇದನ್ನೂ ಓದಿ: ಎಲ್ಲರಿಗೂ ಒಂದು ನ್ಯಾಯ, ನನಗೆ ಮಾತ್ರ ಬೇರೆ ಏಕೆ ? ಪಿಸಿಬಿ ನಡವಳಿಕೆ ವಿರುದ್ಧ ಕನೇರಿಯಾ ಆಕ್ರೋಶ

ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಸಂಪೂರ್ಣ ಸ್ವಾತಂತ್ರ್ಯವಿದೆ. ಆದರೆ, ಮೊಹಮ್ಮದ್​ ಅಮೀರ್​ ಇದೇ ತಂತ್ರಗಾರಿಕೆ ಮೂಲಕ ಪಾಕ್ ಕ್ರಿಕೆಟ್ ಮಂಡಳಿಯನ್ನ ಬ್ಲ್ಯಾಕ್​ ಮೇಲ್​ ಮಾಡ್ತಿದ್ದು, ತಂಡಕ್ಕೆ ಕಮ್​ಬ್ಯಾಕ್ ಮಾಡುವ ಇರಾದೆ ಅವರಿಗೆ ಇದೆ ಎಂದಿದ್ದಾರೆ. ಇದರ ಜತೆಗೆ ಅವರು ಇಂಗ್ಲೆಂಡ್​ನ ಪೌರತ್ವ ತೆಗೆದುಕೊಂಡು ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಆಡುವ ಇರಾದೆ ಇಟ್ಟುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮಿಸ್ಬಾ ಮತ್ತು ಸಹಚರರು ತಂಡ ಬಿಟ್ಟರೆ ಮತ್ತೆ ಪಾಕ್ ಪರ ಆಡುವೆ; ಮೊಹಮ್ಮದ್ ಅಮೀರ್​

ಮ್ಯಾಚ್​ ಫಿಕ್ಸಿಂಗ್​ನಲ್ಲಿ ಭಾಗಿಯಾಗಿದ್ದ ಮೊಹಮ್ಮದ್​ ಅಮೀರ್ ತದನಂತರ ಪಾಕ್​ ಕ್ರಿಕೆಟ್ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ್ದರು. ಅನೇಕ ಲೀಗ್​ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ವೇಗದ ಬೌಲರ್​ ಕಳೆದ ವರ್ಷ ಕ್ರಿಕೆಟ್​ನಿಂದ ನಿವೃತ್ತಿ ಪಡೆದುಕೊಂಡು, ವಿದೇಶಿ ಲೀಗ್​ಗಳಲ್ಲಿ ಮಾತ್ರ ಭಾಗಿಯಾಗುತ್ತಿದ್ದಾರೆ. ಈ ಹಿಂದೆ ಕೂಡ ಕನೇರಿಯಾ ಪಾಕ್​ ಕ್ರಿಕೆಟ್ ಮಂಡಳಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅನಿಲ್​ ದಲ್ಪತ್​ ನಂತರ ಪಾಕಿಸ್ತಾನ ಪರ ಆಡಿದ ಎರಡನೇ ಹಿಂದೂ ಆಟಗಾರನಾಗಿದ್ದ ಕನೇರಿಯಾ 2012ರಲ್ಲಿ ಮ್ಯಾಚ್​ ಫಿಕ್ಸಿಂಗ್​ನಲ್ಲಿ ಸಿಲುಕಿ ಅಜೀವ ನಿಷೇಧಕ್ಕೊಳಗಾಗಿದ್ದಾರೆ

ABOUT THE AUTHOR

...view details