ಕರ್ನಾಟಕ

karnataka

ETV Bharat / sports

38 ವರ್ಷದ ಕ್ರಿಶ್ವಿಯನ್ ಸೇರಿದಂತೆ ಮುಂದಿನ ಸರಣಿಗಳಿಗೆ 29 ಸದಸ್ಯರ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ - ಬೆನ್ ಮೆಕ್​ಡರ್ಮೊಟ್

ಮೆಕ್​ಡರ್ಮೊಟ್​ ಮತ್ತು ಕ್ರಿಶ್ಚಿಯನ್​ ಪ್ರಸ್ತುತ ಕ್ರಮವಾಗಿ ಡರ್ಬಿಶೈರ್ ಮತ್ತು ನಾಟಿಂಗ್​ಹ್ಯಾಮ್​ಶೈರ್ ಪರವಾಗಿ ಕೌಂಟಿ ಕ್ರಿಕೆಟ್​ ಆಡುತ್ತಿದ್ದು, ಈ ವಾರ ತವರಿಗೆ ವಾಪಾಸಾಗಲಿದ್ದಾರೆ. ಅವರು ವಿದೇಶಿ ಪ್ರವಾಸ ಕೈಗೊಳ್ಳುವ ಮುನ್ನ 2 ವಾರಗಳ ಕ್ವಾರಂಟೈನ್​ಗೆ ಒಳಗಾಗಬೇಕಿದೆ.

ಕ್ರಿಕೆಟ್ ಆಸ್ಟ್ರೇಲಿಯಾ
ಕ್ರಿಕೆಟ್ ಆಸ್ಟ್ರೇಲಿಯಾ

By

Published : Jun 8, 2021, 3:20 PM IST

ಮೆಲ್ಬೋರ್ನ್ ​: ಮುಂಬರುವ ವಿಂಡೀಸ್ ಮತ್ತು ಬಾಂಗ್ಲಾದೇಶ ಪ್ರವಾಸಕ್ಕಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಪ್ರಾಥಮಿಕ ತಂಡವನ್ನು ಪ್ರಕಟಿಸಿದೆ. 38 ವರ್ಷದ ಡೇನಿಯಲ್ ಕ್ರಿಶ್ಚಿಯನ್, ಕ್ಯಾಮರೋನ್ ಗ್ರೀನ್, ಆಶ್ಟನ್ ಟರ್ನರ್​, ವೆಸ್​ ಅಗರ್​ ಮತ್ತು ನಥನ್ ಎಲ್ಲಿಸ್​ ಅವರಿಗೆ ಅವಕಾಶ ನೀಡಿದೆ.

ಪುರುಷರ ಪ್ರವಾಸಗಳು ಜೈವಿಕ ಭದ್ರತಾ ವ್ಯವಸ್ಥೆಗಳು(ಬಯೋ ಬಬಲ್) ಮತ್ತು ಸರ್ಕಾರದ ಸಂಬಂಧಿತ ಅನುಮೋದನೆಗಳ ಒಪ್ಪಂದಕ್ಕೆ ಒಳಪಟ್ಟಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ದೃಢಪಡಿಸಿದೆ. ಮೆಕ್​ಡರ್ಮೊಟ್​ ಮತ್ತು ಕ್ರಿಶ್ಚಿಯನ್​ ಪ್ರಸ್ತುತ ಕ್ರಮವಾಗಿ ಡರ್ಬಿಶೈರ್ ಮತ್ತು ನಾಟಿಂಗ್​ಹ್ಯಾಮ್​ಶೈರ್ ಪರ ಕೌಂಟಿ ಕ್ರಿಕೆಟ್​ ಆಡುತ್ತಿದ್ದಾರೆ. ಈ ವಾರ ತವರಿಗೆ ವಾಪಸಾಗಲಿದ್ದಾರೆ. ಅವರು ವಿದೇಶಿ ಪ್ರವಾಸ ಕೈಗೊಳ್ಳುವ ಮುನ್ನ 2 ವಾರಗಳ ಕಾಲ ಕ್ವಾರಂಟೈನ್​ಗೆ ಒಳಗಾಗಬೇಕಿದೆ.

ಪ್ರಸ್ತುತ 29 ಸದಸ್ಯರ ತಂಡವನ್ನು ಘೋಷಿಸಲಾಗಿದೆ. ಮುಂದಿನ ವಾರ 23 ಸದಸ್ಯರ ತಂಡವನ್ನು ಕ್ರಿಕೆಟ್​ ಆಸ್ಟ್ರೇಲಿಯಾ ರಾಷ್ಟ್ರೀಯ ಆಯ್ಕೆ ಸಮಿತಿ ಆಯ್ಕೆ ಮಾಡಲಿದೆ. ಜೂನ್ 28ರಂದು ವೆಸ್ಟ್​ ಇಂಡೀಸ್ ಪ್ರವಾಸವನ್ನು ಕೈಗೊಳ್ಳಲಿದೆ.

ಆಸ್ಟ್ರೇಲಿಯಾ ತಂಡ : ಆರನ್ ಫಿಂಚ್ (ನಾಯಕ), ಆಶ್ಟನ್​ ಅಗರ್, ವೆಸ್ ಅಗರ್, ಜೇಸನ್ ಬೆಹ್ರೆಂಡಾರ್ಫ್, ಅಲೆಕ್ಸ್ ಕ್ಯಾರಿ, ಡೇನಿಯಲ್ ಕ್ರಿಶ್ಚಿಯನ್, ಪ್ಯಾಟ್ ಕಮ್ಮಿನ್ಸ್, ನಥನ್ ಎಲ್ಲಿಸ್, ಕ್ಯಾಮರೋನ್ ಗ್ರೀನ್ ಗ್ರೀನ್, ಜೋಶ್ ಹೆಜಲ್‌ವುಡ್, ಮೊಯಿಸಸ್ ಹೆನ್ರಿಕ್ಸ್, ಮಿಚೆಲ್ ಮಾರ್ಷ್, ಗ್ಲೇನ್ ಮ್ಯಾಕ್ಸ್‌ವೆಲ್, ಬೆನ್ ಮೆಕ್‌ಡರ್ಮೊಟ್, ರಿಲೆ ಮೆರೆಡಿತ್ , ಜೋಶ್ ಫಿಲಿಪ್ಪೆ, ಜೇ ರಿಚರ್ಡ್ಸನ್, ಕೇನ್ ರಿಚರ್ಡ್ಸನ್, ತನ್ವೀರ್ ಸಂಘ, ಡಿ'ಆರ್ಸಿ ಶಾರ್ಟ್, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಮಿಚೆಲ್ ಸ್ವೆಪ್ಸನ್, ಆಶ್ಟನ್ ಟರ್ನರ್, ಆಂಡ್ರ್ಯೂ ಟೈ, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆಡಮ್ ಜಂಪಾ

ಇದನ್ನು ಓದಿ:ಮಂಜ್ರೇಕರ್​ಗೆ 'ಅಪರಿಚಿತ' ಸಿನಿಮಾ ಡೈಲಾಗ್​​​ ಮೂಲಕ ಟಾಂಗ್​ ಕೊಟ್ಟ ಅಶ್ವಿನ್​​

ABOUT THE AUTHOR

...view details