ಕರ್ನಾಟಕ

karnataka

ETV Bharat / sports

ICC World Cup 2023: ಇಂಗ್ಲೆಂಡ್​ ವಿರುದ್ಧದ ಅಭ್ಯಾಸ ಪಂದ್ಯಕ್ಕೆ ಮಳೆ ಅಡ್ಡಿ... ಅ.3ಕ್ಕೆ ಎರಡನೇ ಪಂದ್ಯ

ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯ ಬೇಕಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಅಭ್ಯಾಸ ಪಂದ್ಯ ಮಳೆ ಬಂದ ಕಾರಣ ಫಲಿತಾಂಶ ಕಾಣದೇ ರದ್ದಾಗಿದೆ.

Etv Bharat
Etv Bharat

By ETV Bharat Karnataka Team

Published : Sep 30, 2023, 7:46 PM IST

ಗುವಾಹಟಿ (ಅಸ್ಸೋಂ): ಇಲ್ಲಿನ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ಹಾಲಿ ಚಾಂಪಿಯನ್​ ಇಂಗ್ಲೆಂಡ್​ ನಡುವಿನ ಐಸಿಸಿ ಕ್ರಿಕೆಟ್ ವಿಶ್ವಕಪ್ ಅಭ್ಯಾಸ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಭಾರತ ಅಕ್ಟೋಬರ್​ 3 ರಂದು ತನ್ನ ಎರಡನೇ ಅಭ್ಯಾಸ ಪಂದ್ಯವನ್ನು ನೆದರ್​​​​​​ಲ್ಯಾಂಡ್​ ವಿರುದ್ಧ ಆಡಲಿದೆ.

ಟಾಸ್​ ಗೆದ್ದು ರೋಹಿತ್​ ಶರ್ಮಾ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದರು. ಆದರೆ, ಆಟಗಾರರು ಮೈದಾನಕ್ಕೆ ಬರುವಷ್ಟರಲ್ಲಿ ಆರಂಭವಾದ ಮಳೆ ಎಡೆಬಿಡದೇ ಸುರಿದಿದ್ದು, ಒಂದೂ ಬಾಲ್​ ಆಟದೇ ಪಂದ್ಯವನ್ನು ರದ್ದು ಮಾಡಬೇಕಾಯಿತು. ಅತ್ತ ಕೇರಳದ ತಿರುವನಂತಪುರಂ ಮೈದಾನದಲ್ಲಿ ಆಸ್ಟ್ರೇಲಿಯಾ ಮತ್ತು ನೆದರ್​ಲ್ಯಾಂಡ್​ ನಡುವಿನ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿದೆ.

ನಿನ್ನೆ (ಶುಕ್ರವಾರ) ಮೂರು ಅಭ್ಯಾಸ ಪಂದ್ಯಗಳು ನಡೆದಿವೆ. ಅಸ್ಸೋಂನ ಇದೇ ಮೈದಾನದಲ್ಲಿ ಶ್ರೀಲಂಕಾ ಬಾಂಗ್ಲಾವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಬಾಂಗ್ಲಾದೇಶ ಸಿಂಹಳೀಯರನ್ನು 7 ವಿಕೆಟ್​ಗಳಿಂದ ಮಣಿಸಿತ್ತು. ಕೇರಳದಲ್ಲಿ ಆಯೋಜನೆಗೊಂಡಿದ್ದ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ಪಂದ್ಯ ನಿನ್ನೆಯೂ ಮಳೆಗೆ ಆಹುತಿ ಆಗಿತ್ತು. ಹೈದರಾಬಾದ್​ನಲ್ಲಿ ನಡೆದ ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್​​​​ ನಡುವಣ ಪಂದ್ಯದಲ್ಲಿ ಕಿವೀಸ್​ 5 ವಿಕೆಟ್​ಗಳ ಗೆಲುವು ದಾಖಲಿಸಿತ್ತು.

2023ರ ವಿಶ್ವಕಪ್​ನ ಉದ್ಘಾಟನಾ ಪಂದ್ಯ ಅಕ್ಟೋಬರ್​ 5 ರಂದು ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮತ್ತು ರನ್ನರ್​ ಅಪ್​ ನ್ಯೂಜಿಲ್ಯಾಂಡ್​ ​ ನಡುವೆ ಈ ಮ್ಯಾಚ್​ ಆಡಿಸಲಾಗುವುದು. ಭಾರತ ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾದ ವಿರುದ್ಧ ಅಕ್ಟೋಬರ್​ 8 ರಂದು ಚೆನ್ನೈನ ಎಮ್​ ಚಿದಂಬರಂ ಕ್ರೀಡಾಂಗಣದಲ್ಲಿ ಆಡಲಿದೆ.

ಭಾರತಕ್ಕೆ ವಿಶ್ವಕಪ್​ ಗೆಲ್ಲುವ ವಿಶ್ವಾಸ: ಇತ್ತಿಚೆಗೆ ನಡೆದ ಏಷ್ಯಾಕಪ್​ನಲ್ಲಿ ಭಾರತ ಟ್ರೋಫಿ ಜಯಿಸಿದೆ​ ಮತ್ತು ಆಸ್ಟ್ರೇಲಿಯಾ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ 2-1ರಿಂದ ವಶ ಪಡಿಸಿಕೊಂಡಿದೆ. ವಿಶ್ವಕಪ್​ಗೂ ಮುನ್ನ ಭಾರತದ ಸ್ಟಾರ್​ ಆಟಗಾರರು ಫಾರ್ಮ್​ಗೆ ಮರಳಿದ್ದು, ಅಲ್ಲದೇ ತಂಡದ ಮಧ್ಯಮ ಕ್ರಮಾಂಕವೂ ಸುಧಾರಿಸಿದೆ.

ಏಷ್ಯಾಕಪ್​ನಲ್ಲಿ ಕೆಎಲ್​ ರಾಹುಲ್​, ವಿರಾಟ್​ ಕೊಹ್ಲಿ ಶತಕ ಗಳಿಸಿದರೆ, ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಶುಭಮನ್​ ಗಿಲ್​, ಶ್ರೇಯಸ್​ ಅಯ್ಯರ್​ ಶತಕ ಮಾಡಿದ್ದರು. ಬೌಲಿಂಗ್​ ವಿಭಾಗಕ್ಕೆ ಜಸ್ಪ್ರೀತ್​ ಬುಮ್ರಾ ಕಮ್​ಬ್ಯಾಕ್​ ಆಗಿದ್ದಾರೆ. ಅಲ್ಲದೇ ಸಿರಾಜ್​ ಮತ್ತು ಶಮಿ ಉತ್ತಮ ಪ್ರದರ್ಶನ ನೀಡುತ್ತಿರುವುದು ತಂಡಕ್ಕೆ ಪ್ಲೆಸ್​ ಆಗಿದೆ. ಆರಂಭಿಕರಾಗಿ ಗಿಲ್​ ಮತ್ತು ರೋಹಿತ್​ ಶರ್ಮಾ ಉತ್ತಮ ಪಾಲುದಾರಿಗೆ ಮಾಡುತ್ತಿದ್ದಾರೆ. ಹೀಗಾಗಿ ತಂಡದ ಮೇಲೆ ವಿಶ್ವಾಸ ಹೆಚ್ಚಾಗಿದ್ದು, 2013ರ ನಂತರ ಐಸಿಸಿ ಟ್ರೋಫಿ ಗೆಲ್ಲುವ ಭರವಸೆ ವ್ಯಕ್ತವಾಗಿದೆ.

ಇದನ್ನೂ ಓದಿ:ICC World Cup 2023: 2011 ಕಪ್​ ವಿಜೇತ ತಂಡದಲ್ಲಿ ವಿರಾಟ್​, ಅಶ್ವಿನ್​.. ಇವರ ವಿಶ್ವಕಪ್​ ಪಯಣ ಹೀಗಿದೆ!

ABOUT THE AUTHOR

...view details