ಕರ್ನಾಟಕ

karnataka

ETV Bharat / sports

Tushar Deshpande: ಬಾಲ್ಯದ ಗೆಳತಿ ನಭಾ ಗಡ್ಡಮ್ವಾರ್ ಜೊತೆ ಕ್ರಿಕೆಟಿಗ ತುಷಾರ್​ ದೇಶಪಾಂಡೆ ನಿಶ್ಚಿತಾರ್ಥ - ETV Bharath Kannada news

ಸಿಎಸ್​ಕೆ ತಂಡ ಬೌಲರ್​ ತುಷಾರ್​ ದೇಶಪಾಂಡೆ ಅವರು ತಮ್ಮ ಬಾಲ್ಯದ ಗೆಳತಿಯ ಜೊತೆಗೆ ಸೋಮವಾರ ನಿಶ್ಚಿತಾರ್ಥ ಮಾಡಿಕೊಂಡರು.

Etv Bharat
Etv Bharat

By

Published : Jun 13, 2023, 6:29 PM IST

Updated : Jun 13, 2023, 6:50 PM IST

ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವೇಗಿ ತುಷಾರ್ ದೇಶಪಾಂಡೆ ಸೋಮವಾರ (ಜೂನ್ 12) ತನ್ನ ಬಾಲ್ಯದ ಗೆಳತಿ ನಭಾ ಗಡ್ಡಮ್ವಾರ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕ್ರಿಕೆಟಿಗ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಖುಷಿ ಸುದ್ದಿಯನ್ನು ಪ್ರಕಟಿಸಿದ್ದಾರೆ.

ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಸಹ ಆಟಗಾರ ಶಿವಂ ದುಬೆ ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗವಹಿಸಿದ್ದರು. ತುಷಾರ್ ದೇಶಪಾಂಡೆಗೆ ಸಾಮಾಜಿಕ ಮಾಧ್ಯಮದಲ್ಲಿ ಅಭಿನಂದನಾ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ನಭಾ ತುಷಾರ್ ಅವರ ಶಾಲಾ ಸಹಪಾಠಿಯಾಗಿದ್ದರು. ಇದೀಗ ಈ ಜೋಡಿ ಮದುವೆಗೆ ಸಿದ್ಧರಾಗಿದ್ದಾರೆ.

"ಅವಳು ನನಗೆ ಶಾಲಾ ದಿನಗಳ ಕ್ರಶ್ ಆಗಿದ್ದು​ ಈಗ ಬಡ್ತಿ ಪಡೆದು Fiance ಆಗಿದ್ದಾಳೆ! #onelove #engaged #dreamscometrue," ತುಷಾರ್‌ ಎಂದು ತಮ್ಮ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಕ್ರಿಕೆಟಿಗರು ಕಾಮೆಂಟ್​ ಮಾಡಿದ್ದಾರೆ. "ಇಬ್ಬರಿಗೂ ಅಭಿನಂದನೆಗಳು" ಎಂದು ಸೂರ್ಯಕುಮಾರ್ ಯಾದವ್ ಶುಭಕೋರಿದ್ದಾರೆ.

ನಿಶ್ಚಿತಾರ್ಥದ ಬಗ್ಗೆ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ತುಷಾರ್

ಸಿಎಸ್‌ಕೆ ತಂಡದ ಸಹ ಆಟಗಾರ ರುತುರಾಜ್ ಗಾಯಕ್ವಾಡ್​ ವೈವಾಹಿಕ ಕ್ಲಬ್​ ಸ್ವಾಗತ ಎಂಬ ರೀತಿಯಲ್ಲಿ ಬರೆದಿದ್ದಾರೆ. "ಅಭಿನಂದನೆಗಳು bhauuuuuuu, ಕ್ಲಬ್​ಗೆ ಸ್ವಾಗತ" ಎಂದಿದ್ದಾರೆ. ರುತುರಾಜ್ ಗಾಯಕ್ವಾಡ್ ಅವರು ತಮ್ಮ ಕ್ರಿಕೆಟರ್ ಗೆಳತಿ ಉತ್ಕರ್ಷ ಪವಾರ್ ಅವರನ್ನು ಇತ್ತೀಚೆಗೆ ವಿವಾಹವಾಗಿದ್ದರು.

ನಭಾ ಗಡ್ಡಮ್ವಾರ್ ಚಿತ್ರಕಲಾವಿದೆ. ಅವರ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಅವರು ಹಂಚಿಕೊಂಡಿರುವ ಹಳೆಯ ಫೋಟೋಗಳಿವೆ. ಇದು ಬಿಟ್ಟು ಅವರ ಇತರ ಆಸಕ್ತಿಗಳ ಬಗ್ಗೆ ಮಾಹಿತಿ ಇಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 2023 ರ ಆವೃತ್ತಿಯಲ್ಲಿ ಅಂತಿಮವಾಗಿ ಚಾಂಪಿಯನ್ ಸಿಎಸ್‌ಕೆಗಾಗಿ ತುಷಾರ್ ದೇಶಪಾಂಡೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಅವರು ಹಳದಿ ಜರ್ಸಿಯಲ್ಲಿ ಬಹುತೇಕ ಎಲ್ಲ ಪಂದ್ಯಗಳನ್ನು ಆಡಿದ್ದಾರೆ.

ತುಷಾರ್​ ದೇಶಪಾಂಡೆ ಅಂತಾರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿಲ್ಲ. ತುಷಾರ್ 2016ರಲ್ಲಿ ಎಫ್‌ಸಿ ಪಾದಾರ್ಪಣೆ ಮಾಡಿದರು ಮತ್ತು ದೇಶೀಯ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಮುಂಬೈ ಮೂಲದ ಆಟಗಾರ ಮೊದಲು ಡೆಲ್ಲಿ ಕ್ಯಾಪಿಟಲ್ಸ್​ ಪ್ರತಿನಿಧಿಸಿದರು. 2020ರಲ್ಲಿ ಅವರು ಡಿಸಿ ತಂಡವನ್ನು ಸೇರಿಕೊಂಡ ಅವರು 5 ಪಂದ್ಯಗಳನ್ನು ಆಡಿದ್ದರು. ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ಮುಂಬೈ ಹುಡುಗ ತುಷಾರ್ ದೇಶಪಾಂಡೆ ಅವರನ್ನು ಚೆನ್ನೈ ಸೂಪರ್​ ಕಿಂಗ್ಸ್​ ಮೂಲ ಬೆಲೆ 20 ಲಕ್ಷಕ್ಕೆ ಆಯ್ಕೆ ಮಾಡಿದೆ. 2022ರಲ್ಲಿ ಚೆನ್ನೈನಲ್ಲಿ ಕೇಲವ ಎರಡು ಪಂದ್ಯಗಳನ್ನು ತುಷಾರ್​ ಆಡಿದ್ದಾರೆ.

2023 ಭರ್ಜರಿ ಪ್ರದರ್ಶನ:28 ವರ್ಷದ ತುಷಾರ್​ ಈ ವರ್ಷ ಚೆನ್ನೈ ಸೂಪರ್​ ಕಿಂಗ್ಸ್​ ತಂಡದಲ್ಲಿ ಎಲ್ಲ ಪಂದ್ಯಗಳನ್ನು ಆಡಿದ್ದಾರೆ. 16 ಪಂದ್ಯದಲ್ಲಿ 564 ರನ್‌​ ಬಿಟ್ಟುಕೊಟ್ಟಿದ್ದು 21 ವಿಕೆಟ್​ ಪಡೆದು 26.86ರ ಸರಾಸರಿಯಲ್ಲಿ ಬೌಲಿಂಗ್​ ಮಾಡಿದ್ದಾರೆ.

ಇದನ್ನೂ ಓದಿ:Sourav Ganguly: ವಿರಾಟ್​ ಕೊಹ್ಲಿ ಟೆಸ್ಟ್​ ನಾಯಕತ್ವ ಯಾಕೆ ಬಿಟ್ರು ಎಂಬುದೇ ಪ್ರಶ್ನೆ: ಸೌರವ್ ಗಂಗೂಲಿ

Last Updated : Jun 13, 2023, 6:50 PM IST

ABOUT THE AUTHOR

...view details