ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿ ಎರಡನೇ ಆರ್ಟಿ-ಪಿಸಿಆರ್ ಟೆಸ್ಟ್ನಲ್ಲೂ ಪಾಸಿಟಿವ್ ಬಂದಿರುವ ಹಿನ್ನೆಲೆ ಮುಂದಿನ ಕೆಲವು ಐಪಿಎಲ್ ಪಂದ್ಯಗಳಿಂದ ಬಬಲ್ನಿಂದ ಹೊರ ಬಂದಿದ್ದಾರೆ. ಸಿಎಸ್ಕೆ ತಂಡದ ಬಸ್ ಕ್ಲೀನರ್ಗೂ ಕೂಡ ಪಾಸಿಟಿವ್ ಬಂದಿದೆ, ಆದರೆ, ಸಿಇಒ ಕಾಶಿ ವಿಶ್ವನಾಥ್ ನೆಗೆಟಿವ್ ವರದಿ ಪಡೆದಿದ್ದಾರೆ.
ಸಿಎಸ್ಕೆ ತಂಡದ ಎಲ್ಲ ಆಟಗಾರರಿಗೂ ನೆಗೆಟಿವ್ ವರದಿ ಬಂದಿದೆ. ಆದರೆ ಬಾಲಾಜಿ ಅವರಿಗೆ ಪಾಸಿಟಿವ್ ದೃಢಪಟ್ಟಿರುವುದು ಖಂಡಿತವಾಗಿಯೂ ಕಳವಳಕ್ಕೆ ಕಾರಣವಾಗಿದೆ. ಆದರೆ ಸಾಮಾನ್ಯವಾಗಿ, ಐದನೇ ಅಥವಾ ಆರನೇ ದಿನದಿಂದ ಬಹಳಷ್ಟು ಜನರಲ್ಲಿ ರೋಗಲಕ್ಷಣಗಳನ್ನು ಕಾಣಿಸಿಕೊಳ್ಳುತ್ತದೆ. ಇನ್ನು ದೆಹಲಿಯಲ್ಲಿ ಮುಂದಿನ ಎರಡು ಪಂದ್ಯಗಳು ಮುಂದುವರಿಯುವುದು ಸುರಕ್ಷಿತವೇ ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ "ಎಂದು ಬಿಸಿಸಿಐನ ಅನಾಮಧೇಯ ಅಧಿಕಾರಿಯೊಬ್ಬರು ಷರತ್ತುಗಳೊಂದಿಗೆ ಪಿಟಿಐಗೆ ತಿಳಿಸಿದ್ದಾರೆ.