ಮುಂಬೈ:ಟೀಂ ಇಂಡಿಯಾ,ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟರ್ ರಾಬಿನ್ ಉತ್ತಪ್ಪ ಪತ್ನಿ ಶೀತಲ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ರಾಬಿನ್ ಉತ್ತಪ್ಪ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದ್ದು, ಇನ್ಸ್ಟಾಗ್ರಾಮ್ನಲ್ಲಿ ಖುದ್ದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ಪತ್ನಿ, ಹಾಗೂ ಮುದ್ದಾದ ನವಜಾತ ಹೆಣ್ಣು ಮಗುವಿನ ಫೋಟೋ ಇನ್ಸ್ಟಾಗ್ರಾಮ್ನಲ್ಲಿ ಉತ್ತಪ್ಪ ಹಂಚಿಕೊಂಡಿದ್ದಾರೆ. ಇದಕ್ಕೆ ಕ್ರಿಕೆಟರ್ ಕೆಎಲ್ ರಾಹುಲ್, ಪಿಯೂಷ್ ಚಾವ್ಲಾ, ಇರ್ಫಾನ್ ಪಠಾಣ್ ಸೇರಿದಂತೆ ಅನೇಕ ಕ್ರಿಕೆಟರ್ಸ್ ಅಭಿನಂದನೆ ಸಲ್ಲಿಸಿದ್ದಾರೆ. 'ಹೃದಯ ತುಂಬಿ ಬಂದಿದೆ. ನಾವಿಂದು ನಮ್ಮ ಕುಟುಂಬಕ್ಕೆ ಹೊಸ ದೇವತೆಯನ್ನ ಪರಿಚಯಿಸುತ್ತಿದ್ದೇವೆ. ಹೊಸ ಮಗುವಿಗೆ 'ಟ್ರಿನಿಟಿ ಥಿಯಾ' ಎಂದು ನಾಮಕರಣ ಮಾಡಲಾಗಿದೆ. ಜಗತ್ತಿಗೆ ಬರಲು ನಮ್ಮನ್ನು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ನಾವು ಕೃತಜ್ಞರಾಗಿದ್ದೇವೆ' ಎಂದು ಬರೆದುಕೊಂಡಿದ್ದಾರೆ. ರಾಬಿನ್ ಉತ್ತಪ್ಪ ಪತ್ನಿ ಶೀತಲ್ 2017ರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು.