ಮುಂಬೈ: ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಟ್ವಿಟರ್ ಖಾತೆಯಿಂದ ಸಂಬಂಧವಿಲ್ಲದ ಕೆಲವು ಟ್ವೀಟ್‌ಗಳು ಒಂದರ ಹಿಂದೊಂದರಂತೆ ಬರುತ್ತಿವೆ. ಇದರಿಂದ ಅವರ ಅಭಿಮಾನಿಗಳು, ಟ್ವಿಟರ್ ಖಾತೆಯನ್ನು ಯಾರಾದರೂ ಹ್ಯಾಕ್ ಮಾಡಿರಬಹುದೇ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಕೆಲವು ಸಮಯ ಅಂತರದಲ್ಲಿ ರೋಹಿತ್ ಖಾತೆಯಿಂದ ಏನೋನೋ ಟ್ವೀಟ್ ಬರುತ್ತಿರುವುದೇ ಅಭಿಮಾನಿಗಳ ಅನುಮಾನಕ್ಕೆ ಕಾರಣ. ರೋಹಿತ್ ಸದಾ ಐಫೋನ್ನಿಂದ ಟ್ವೀಟ್ ಮಾಡುತ್ತಾರೆ, ಆದರೆ ಇಂದು ಟ್ವಿಟರ್ ಡೆಕ್ನಿಂದ ಟ್ವೀಟ್ ಮಾಡಿರುವುದು ವಿಶೇಷವಾಗಿದೆ.
ಆ ಟ್ವೀಟ್‌ಗಳು ಇವೇ ನೋಡಿ...
- ಕ್ರಿಕೆಟ್ ಬಾಲ್ಗಳನ್ನು ತಿನ್ನಬಹುದು, ನಿಜ ಅಲ್ಲವೇ?
- ನಿಮಗೆ ಗೊತ್ತೆ? ನಮ್ಮ ಕುರಿತು ಬಂದಂತಹ ಊಹಾಪೋಹಾಗಳಿಂದ ಅತ್ಯುತ್ತಮವಾದ ಬಾಕ್ಸಿಂಗ್ ಬ್ಯಾಗ್ ಮಾಡಬಹುದು.
- ನನಗೆ ಕಾಯಿನ್ ಟಾಸ್ ಎಂದರೆ ಬಹಳ ಇಷ್ಟ, ಪ್ರತ್ಯೇಕವಾಗಿ ಅದು ನನಗೆ ಅನುಕೂಲವಾದಾಗ...