ಲಾರ್ಡ್ಸ್(ಇಂಗ್ಲೆಂಡ್):ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಭಾರತ - ಇಂಗ್ಲೆಂಡ್ ನಡುವೆ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಮೊದಲ ಇನ್ನಿಂಗ್ಸ್ನಲ್ಲಿ ಭಾರತ 356 ರನ್ಗಳಿಗೆ ಆಲೌಟ್ ಆಗಿದೆ. ಇದಕ್ಕೆ ಪ್ರತ್ಯುತ್ತರವಾಗಿ ಆತಿಥೇಯ ತಂಡ ಬ್ಯಾಟ್ ಮಾಡ್ತಿದ್ದು, ನಾಲ್ಕು ವಿಕೆಟ್ ಕಳೆದು ಕೊಂಡಿದೆ. ಇದರ ಮಧ್ಯೆ ಕ್ರಿಕೆಟ್ ಪ್ರೇಮಿಗಳು ಭಾರತೀಯ ಆಟಗಾರರೊಂದಿಗೆ ದುರ್ವರ್ತನೆ ತೋರಿರುವ ಘಟನೆ ನಡೆದಿದೆ.
ಟೀಂ ಇಂಡಿಯಾ ಆರಂಭಿಕ ಆಟಗಾರ ಕೆ.ಎಲ್ ರಾಹುಲ್ ಫೀಲ್ಡಿಂಗ್ ಮಾಡ್ತಿದ್ದ ಸ್ಥಳದಲ್ಲಿ ಕೆಲವರು ವಾಟರ್ ಬಾಟಲ್ ಎಸೆದು ಅತಿರೇಕದ ವರ್ತನೆ ತೋರಿದ್ದಾರೆ. ಇದರ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಬಾಟಲ್ ಎಸೆದಿರುವುದರಿಂದ ಆಕ್ರೋಶಗೊಂಡಿರುವ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಮರಳಿ ಎಸೆಯುವಂತೆ ರಾಹುಲ್ಗೆ ಸನ್ನೆ ಮಾಡಿದ್ದಾರೆ.