ಹೈದರಾಬಾದ್: ಟೀಂ ಇಂಡಿಯಾ ಹಾಗೂ ವಿಶ್ವ ಕ್ರಿಕೆಟ್ ಕಂಡಿರುವ ಅತ್ಯಂತ ಯಶಸ್ವಿ ಕ್ರಿಕೆಟಿಗರಲ್ಲಿ ಇರ್ಫಾನ್ ಪಠಾಣ್ ಕೂಡ ಒಬ್ಬರು. ಕೇವಲ 19 ವರ್ಷದವರಿದ್ದಾಗಲೇ ಟೀಂ ಇಂಡಿಯಾ ಪರ ಪದಾರ್ಪಣೆ ಮಾಡಿರುವ ಈ ಆಟಗಾರ, ತಂಡದ ಪರ ಅನೇಕ ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿ, ಜಯದ ಕಾಣಿಕೆ ನೀಡಿದ್ದಾರೆ.
ಸಹೋದರ ಯೂಸೂಫ್ ಪಠಾಣ್ ಜೊತೆ ಇರ್ಫಾನ್ 2007ರ ಐಸಿಸಿ ಟಿ-20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಪ್ರಶಸ್ತಿ ಗೆಲ್ಲುವಲ್ಲಿ ಇರ್ಫಾನ್ ಪಠಾಣ್ ಮಹತ್ವದ ಪಾತ್ರ ನಿರ್ವಹಿಸಿದ್ದು, ಮಾರಕ ಬೌಲಿಂಗ್ನಿಂದ ಎದುರಾಳಿ ತಂಡದ ವಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ 36 ವರ್ಷದ ಇರ್ಫಾನ್ ಟೀಂ ಇಂಡಿಯಾ ಪರ 29 ಟೆಸ್ಟ್ ಪಂದ್ಯ, 120 ಏಕದಿನ ಹಾಗೂ 24 ಟಿ-20 ಪಂದ್ಯಗಳನ್ನಾಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲೂ ಗಮನ ಸೆಳೆದಿರುವ ಈ ಪ್ಲೇಯರ್ ಒಟ್ಟು 103 ಪಂದ್ಯಗಳನ್ನಾಡಿದ್ದಾರೆ. ಟೀಂ ಇಂಡಿಯಾ ಪರ ಆರಂಭದಲ್ಲಿ ವೇಗದ ಬೌಲರ್ ಆಗಿ ಸೇರಿಕೊಂಡಿದ್ದ ಈ ಆಟಗಾರ ತದನಂತರದಲ್ಲಿ ಬ್ಯಾಟಿಂಗ್ನಲ್ಲೂ ಗಮನ ಸೆಳೆದಿದ್ದರು.
ಇದನ್ನೂ ಓದಿರಿ:ಟಿ-20 ವಿಶ್ವಕಪ್: ನ್ಯೂಜಿಲ್ಯಾಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿ, ಸೇಡು ತೀರಿಸಿಕೊಂಡ ಪಾಕ್
ಭಾರತ 2007ರ T20 ವಿಶ್ವಕಪ್ ಗೆಲ್ಲುವಲ್ಲಿ ಇವರ ಫೈನಲ್ ಪಂದ್ಯದಲ್ಲಿ ನೀಡಿದ ಪಂದ್ಯಶ್ರೇಷ್ಠ ಬೌಲಿಂಗ್ ಪ್ರದರ್ಶನ ಕೂಡ ಕಾರಣವಾಗಿದೆ. 2006ರಲ್ಲಿ ಪಾಕಿಸ್ತಾನದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮೊದಲ ಓವರ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಏಕೈಕ ಕ್ರಿಕೆಟಿಗ ಎನಿಸಿಕೊಂಡಿರುವ ಈ ಪ್ಲೇಯರ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇದೀಗ ನಟನಾ ವೃತ್ತಿಗೂ ಲಗ್ಗೆ ಹಾಕಿರುವ ಈ ಆಟಗಾರನಿಗೆ ಯಶಸ್ಸು ಸಿಗಲಿ ಎಂಬುದು ನಮ್ಮ ಆಶಯ.