ಕರ್ನಾಟಕ

karnataka

ETV Bharat / sports

ಹಾರ್ದಿಕ್ ಪಾಂಡ್ಯಾ ಕೈಯಲ್ಲಿ 5 ಕೋಟಿ ರೂ. ಮೌಲ್ಯದ ವಾಚ್​​.. ಅಂತಹದ್ದು ಏನಿದೆ ಅದರಲ್ಲಿ!? - 5 ಕೋಟಿ ರೂ. ಮೌಲ್ಯದ ವಾಚ್ ಖರೀದಿಸಿದ ಪಾಂಡ್ಯಾ

ಟೀಂ ಇಂಡಿಯಾ ಸ್ಟಾರ್​ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯಾ ಸದ್ಯ 5 ಕೋಟಿ ರೂಪಾಯಿ ಬೆಲೆಬಾಳುವ ವಾಚ್​ ಖರೀದಿ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

Hardik Pandya
Hardik Pandya

By

Published : Aug 26, 2021, 6:38 PM IST

ಹೈದರಾಬಾದ್​: ಟೀಂ ಇಂಡಿಯಾ ಆಲ್​ರೌಂಡರ್​ ಹಾಗೂ ಮುಂಬೈ ಇಂಡಿಯನ್ಸ್​​ ತಂಡದ ಪ್ಲೇಯರ್​ ಹಾರ್ದಿಕ್ ಪಾಂಡ್ಯಾ ಸದ್ಯ 14ನೇ ಆವೃತ್ತಿ ಐಪಿಎಲ್​​ನ ಉಳಿದ ಪಂದ್ಯಗಳಲ್ಲಿ ಭಾಗಿಯಾಗಲು ಯುಎಇಗೆ ತೆರಳಿದ್ದಾರೆ. ಇದರ ಬೆನ್ನಲ್ಲೇ ಅವರು ಕೈಯಲ್ಲಿ ಹಾಕಿಕೊಂಡಿರುವ ವಾಚ್​ ಎಲ್ಲರ ಕೇಂದ್ರ ಬಿಂದುವಾಗಿದೆ.

ಯುಎಇಯಲ್ಲಿ ತಂಡ ಸೇರಿಕೊಂಡ ಪಾಂಡ್ಯಾ ಬ್ರದರ್ಸ್​​

ಲಕ್ಸುರಿ ಬ್ರಾಂಡ್​ಗಳ ಖರೀದಿ ಮೂಲಕವೇ ಗಮನ ಸೆಳೆಯುವ ಹಾರ್ದಿಕ್ ಪಾಂಡ್ಯಾ ಸದ್ಯ 5 ಕೋಟಿ ರೂ. ನೀಡಿ ವಾಚ್​ ಖರೀದಿ ಮಾಡಿದ್ದು, ಎಲ್ಲರ ಗಮನ ಸೆಳೆದಿದೆ.

ಮಗನೊಂದಿಗೆ ಕ್ರಿಕೆಟರ್ ಹಾರ್ದಿಕ್​

ಪಟೇಕ್​ ಫಿಲಿಪ್ ನಾಟಿಲಸ್​​ ಪ್ಲಾಟಿ ನಂ 5711 ಎಂಬ ಬ್ರಾಂಡ್​​ನ ವಾಚ್​ ಇದಾಗಿದ್ದು, ಇದರ ಸುತ್ತಲೂ 32 ಅಪರೂಪದ ಪಚ್ಚೆ ಕಲ್ಲುಗಳಿವೆ. ಈ ವಾಚ್​ ಸಂಪೂರ್ಣವಾಗಿ ಪ್ಲಾಟಿನಂನಿಂದ ತಯಾರಾಗಿದೆ. ಅದೇ ಕಾರಣಕ್ಕಾಗಿ ಇದರ ಬೆಲೆ 5 ಕೋಟಿ ರೂಪಾಯಿ ಎನ್ನಲಾಗುತ್ತಿದೆ. ವಿಶ್ವದ ದುಬಾರಿ ವಾಚ್​ಗಳಲ್ಲಿ 5,711 ನಾಟಿಲಸ್​ ಕೂಡ ಒಂದಾಗಿದ್ದು, ಇದರ ಬಗ್ಗೆ ಪಾಂಡ್ಯಾ ಖುದ್ದಾಗಿ ಇನ್​​ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಮುಂಬೈ ಇಂಡಿಯನ್ಸ್​ ಪ್ಲೇಯರ್ ಪಾಂಡ್ಯಾ

ಇದನ್ನೂ ಓದಿರಿ: ನನ್ನ ಹೆಸರು ಬಳಸಿಕೊಂಡು ವಿವಾದ ಸೃಷ್ಟಿಸಬೇಡಿ: ನದೀಮ್ ವಿರುದ್ಧದ ನೆಟ್ಟಿಗರ ಟೀಕೆಗೆ ನೀರಜ್​ ಬೇಸರ

ಐಷಾರಾಮಿ ಜೀವನ ನಡೆಸುವ ಹಾರ್ದಿಕ್​ ಪಾಂಡ್ಯಾ ಬಳಿ ಈಗಾಗಲೇ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಫ್ಲಾಟ್​, ಕಾರುಗಳಿವೆ ಎನ್ನಲಾಗಿದೆ.

ಕುಟುಂಬದೊಂದಿಗೆ ಹಾರ್ದಿಕ್ ಪಾಂಡ್ಯಾ

ABOUT THE AUTHOR

...view details