ಕರ್ನಾಟಕ

karnataka

ETV Bharat / sports

'ಶ್ರೀವಲ್ಲಿ' ಕನ್ನಡ ಹಾಡಿಗೆ ಡೇವಿಡ್ ವಾರ್ನರ್​ ಹೆಜ್ಜೆ.. ಕ್ರಿಕೆಟರ್​​ ಹುಕ್​​ ಸ್ಟೆಪ್​ಗೆ ಅಲ್ಲು ಫಿದಾ! - ಡೇವಿಡ್​ ವಾರ್ನರ್ ಪುಷ್ಪಾ

ಕನ್ನಡ, ತೆಲುಗು, ಹಿಂದಿ ಹಾಡುಗಳಿಗೆ ಈಗಾಗಲೇ ಹೆಜ್ಜೆ ಹಾಕಿ ಎಲ್ಲರ ಮನ ಗೆದ್ದಿರುವ ಡೇವಿಡ್​ ವಾರ್ನರ್, ಇದೀಗ ಶ್ರೀವಲ್ಲಿ ಸಾಂಗ್​ಗೂ ಹುಕ್​​ ಡ್ಯಾನ್ಸ್​ ಮಾಡಿದ್ದಾರೆ..

Crickter David warner pulls off Srivalli hooks step
Crickter David warner pulls off Srivalli hooks step

By

Published : Jan 21, 2022, 7:23 PM IST

ಹೈದರಾಬಾದ್​ :ಕಳೆದ ಕೆಲ ದಿನಗಳ ಹಿಂದೆ ಬಿಡುಗಡೆಯಾಗಿರುವ ಅಲ್ಲು ಅರ್ಜುನ್ ನಟನೆಯ ಪುಪ್ಪಾ ಚಿತ್ರ ಸಿನಿಮಾ ಚಿತ್ರರಂಗದಲ್ಲಿ ಇನ್ನಿಲ್ಲದಂತೆ ಸದ್ದು ಮಾಡಿದ್ದು, ಅದರಲ್ಲಿನ ಕೆಲ ಹಾಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ.

ಪ್ರಮುಖವಾಗಿ ಊ ಅಂಟಾವಾ, ಶ್ರೀವಲ್ಲಿ ಹಾಡು ತುಂಬಾ ಫೇಮಸ್​​ ಆಗಿವೆ. ಪ್ರಮುಖವಾಗಿ ಶ್ರೀವಲ್ಲಿ ಸಾಂಗ್​ನಲ್ಲಿ ಪುಷ್ಪಾ ಮಾಡಿರುವ ಹುಕ್ ಡ್ಯಾನ್ಸ್‌ಗೆ ಎಲ್ಲರೂ ಫಿದಾ ಆಗಿದ್ದು, ಇದೀಗ ಅನೇಕರು ಅದೇ ರೀತಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದಕ್ಕೆ ನಟ ಅಲ್ಲು ಅರ್ಜುನ್ ಕೂಡ ಫಿದಾ ಆಗಿದ್ದು, ಕಮೆಂಟ್ ಮಾಡಿದ್ದಾರೆ.

ಆಸ್ಟ್ರೇಲಿಯಾದ ಸ್ಫೋಟಕ ಆಟಗಾರ ಡೇವಿಡ್ ವಾರ್ನರ್ ಕೂಡ ಪುಷ್ಪಾ ಚಿತ್ರದ ಶ್ರೀವಲ್ಲಿ ಹಾಡಿನ ಕನ್ನಡ ವರ್ಷನ್​ಗೆ ಹುಕ್​​​​ ಸ್ಟೆಪ್ ಹಾಕಿದ್ದಾರೆ. ಇದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಪೋಸ್ಟ್ ಮಾಡಿರುವ ಕೆಲ ಗಂಟೆಗಳಲ್ಲಿ ಲಕ್ಷಾಂತರ ಜನರಿಂದ ವೀಕ್ಷಣೆಗೊಳಪಟ್ಟಿದ್ದು, ಅನೇಕರು ಲೈಕ್ಸ್​ ಮಾಡಿದ್ದಾರೆ.

ಇದನ್ನೂ ಓದಿರಿ:IND vs SA 2nd ODI; ಪಂತ್​​-ಕೆಎಲ್​ ಫಿಫ್ಟಿ: ಹರಿಣಗಳ ಗೆಲುವಿಗೆ 288ರನ್​ ಟಾರ್ಗೆಟ್ ನೀಡಿದ ಭಾರತ

ಈ ಹಿಂದೆ ಕೂಡ ಅನೇಕ ಹಿಂದಿ ಹಾಡು ಹಾಗೂ ಡೈಲಾಗ್​ಗಳ ಮೂಲಕ ಭಾರತೀಯರ ಮನ ಗೆದ್ದಿರುವ ಡೇವಿಡ್ ವಾರ್ನರ್​, ಇದೀಗ ಮತ್ತೊಮ್ಮೆ ಎಲ್ಲರ ಮನಸು ಗೆದ್ದಿದ್ದಾರೆ.

ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡದ ಭಾಗವಾಗಿದ್ದ ವಾರ್ನರ್ ಈ ಸಲ ಆರ್​ಸಿಬಿ ಸೇರಿಕೊಳ್ಳಲಿದ್ದಾರೆಂಬ ಮಾತು ಕೇಳಿ ಬರಲು ಶುರುವಾಗಿದೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details