ಮುಂಬೈ: ಫ್ರೆಂಚ್ ಓಪನ್ ವೇಳೆ ಮಾನಸಿಕ ಆರೋಗ್ಯದ ಹಿತ ದೃಷ್ಟಿಯಿಂದ ಮಾಧ್ಯಮ ಗೋಷ್ಠಿ ಭಹಿಸ್ಕರಿಸಿ ದಂಡ ಕಟ್ಟಿದ್ದ ನವೋಮಿ ಒಸಾಕ, ತಮ್ಮ ನಿರ್ಧಾರಕ್ಕೆ ಬದ್ಧವಾಗಿ ಟೂರ್ನಿಯಿಂದಲೇ ಹೊರ ಬಂದಿದ್ದಾರೆ. ಆದರೆ ಇದಕ್ಕೆ ಸಹಾನುಭೂತಿ ತೋರಿರುವ ಭಾರತ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್, ಕ್ರಿಕೆಟಿಗರು ನವೋಮಿಯಂತಾಗಲೂ ಸಾಧ್ಯವಿಲ್ಲ, ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ಮಾಧ್ಯಮದ ಅಗತ್ಯವಿದೆ ಎಂದಿದ್ದಾರೆ.
ಇಂಗ್ಲೆಂಡ್ ಪ್ರವಾಸಕ್ಕೂ ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿದ ಅವರು, ನಾವು ಮಾಧ್ಯವನ್ನು ತಿರಸ್ಕಾರ ಮನೋಭಾವನೆಯಿಂದ ನೋಡುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.
ಕ್ವಾರಂಟೈನ್ನಲ್ಲಿರುವುದು ಪ್ರಸ್ತುತ ಎಂತಹವರಿಗೂ ಕಠಿಣ. ಆದರೆ ನಾವು ಟೂರ್ನಮೆಂಟ್ ಆಡುವುದಕ್ಕೆ ಅವಕಾಶ ಪಡೆದಿದ್ದೇವೆಂದರೆ ಆ ರೀತಿ ಯೋಚನೆ ಮಾಡಲು ನಾನು ಬಯಸುವುದಿಲ್ಲ ಎಂದು ಇಂಗ್ಲೆಂಡ್ ವಿಮಾನವೇರುವ 2 ಗಂಟೆ ಮುನ್ನ ನಡೆದ ಗೋಷ್ಠಿಯಲ್ಲಿ ಮಿಥಾಲಿ ತಿಳಿಸಿದ್ದಾರೆ.