ನವದೆಹಲಿ: ಉಮೇಶ್ ಕುಮಾರ್ ತಿಲಕ್ ಯಾದವ್, ಇದು ಕ್ರಿಕೆಟರ್ ಉಮೇಶ್ ಯಾದವ್ ಅವರ ಸಂಪೂರ್ಣ ಹೆಸರು. 5 ಅಡಿ 10 ಇಂಚು ಎತ್ತರ ಇರುವ ಈ ಯುವಕ ಪೊಲೀಸ್ ಮತ್ತು ಸೈನ್ಯಕ್ಕೆ ಸೇರಲು ಬಯಸಿದ್ದ. ಆದರೆ ಅವರ ಆ ಆಸೆ ಈಡೇರಲೇ ಇಲ್ಲ. ಅಲ್ಲಿ ಅವರು ತಿರಸ್ಕರಿಸಲ್ಪಟ್ಟರು.
ಬೌಲರ್ ಉಮೇಶ್ ಯಾದವ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ: ಹೀಗಿದೆ ಅವರ ಕ್ರಿಕೆಟ್ ಜರ್ನಿ! ಅಲ್ಲಿಂದ ನಿರಾಶರಾಗಿ ಹೊರ ಬಂದ ಅವರು, ಕ್ರಿಕೆಟ್‌ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದರು. ವೇಗದ ಬೌಲರ್ ಆಗಿ ಭಾರತ ತಂಡದ ಎಲ್ಲಾ ಮೂರು ಸ್ವರೂಪಗಳನ್ನು ಆಡುವಲ್ಲಿ ಯಶಸ್ವಿಯಾದರು. ಇಂತಿಪ್ಪ ಉಮೇಶ್ ಯಾದವ್ಗೆ ಇಂದು ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ ಉಮೇಶ್ ಯಾದವ್ ಅವರಿಗೆ ಟ್ವೀಟ್ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿದೆ.
ಉಮೇಶ್ ಯಾದವ್ 28 ಮೇ 2010 ರಂದು ಜಿಂಬಾಬ್ವೆ ವಿರುದ್ಧ ಬುಲವಾಯೊದಲ್ಲಿ ತಮ್ಮ ಚೊಚ್ಚಲ ಏಕದಿನ ಪಂದ್ಯವನ್ನು ಆಡಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಅಡಿ ಇಟ್ಟರು. ಆದರೆ, ಅವರು ಟೆಸ್ಟ್ ಪಂದ್ಯ ಆಡಲು 6 ನವೆಂಬರ್ 2011 ರವರೆಗೆ ಕಾಯಬೇಕಾಯಿತು. ನಂತರ ಅವರು ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನ ಆಡುವ ಮೂಲಕ ಟೆಸ್ಟ್ ಕ್ರಿಕೆಟ್ಗೆ ಅಡಿ ಇಟ್ಟರು. ಆಗಸ್ಟ್ 2012 ರಲ್ಲಿ ಮೊದಲ T20 ಪಂದ್ಯವನ್ನೂ ಆಡಿದರು. 2010ರಲ್ಲಿಯೇ ಉಮೇಶ್ ಯಾದವ್ ಐಪಿಎಲ್‌ಗೆ ಕೂಡಾ ಆಯ್ಕೆಯಾಗಿದ್ದರು. ಡೆಲ್ಲಿ ಡೇರ್ ಡೆವಿಲ್ಸ್ ಪರ ಅವರು ಚೊಚ್ಚಲ ಐಪಿಎಲ್ ಆಡಿದ್ದಾರೆ.
ಬೌಲರ್ ಉಮೇಶ್ ಯಾದವ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ: ಹೀಗಿದೆ ಅವರ ಕ್ರಿಕೆಟ್ ಜರ್ನಿ!
ಭಾರತೀಯ ಕ್ರಿಕೆಟ್‌ನಲ್ಲಿ ವೇಗದ ಬೌಲರ್ ಆಗಿ ತಮ್ಮದೇ ಛಾಪು ಮೂಡಿಸಿರುವ ಉಮೇಶ್ ಯಾದವ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಉಮೇಶ್ ಯಾದವ್ ಅವರು 25 ಅಕ್ಟೋಬರ್ 1987 ರಂದು ನಾಗ್ಪುರದಲ್ಲಿ ಜನಿಸಿದರು. ಅವರು ಬಲಗೈ ವೇಗದ ಬೌಲರ್ ಮತ್ತು ಬಲಗೈ ಬ್ಯಾಟ್ಸ್‌ಮನ್.
ಉಮೇಶ್ ಯಾದವ್ ಟೆಸ್ಟ್ ವೃತ್ತಿಜೀವನದಲ್ಲಿ ಒಟ್ಟು 52 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 158 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಒಟ್ಟು ಮೂರು ಸಲ ಅವರು ಇನ್ನಿಂಗ್ಸ್‌ವೊಂದರಲ್ಲಿ 5 ವಿಕೆಟ್ ಮತ್ತು ಒಮ್ಮೆ 10 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಇನ್ನು 75 ಏಕದಿನ ಪಂದ್ಯಗಳನ್ನು ಆಡಿರುವ ಉಮೇಶ್ ಒಟ್ಟು 106 ವಿಕೆಟ್‌ಗಳನ್ನು ಪಡೆದಿದ್ದಾರೆ.
ಬೌಲರ್ ಉಮೇಶ್ ಯಾದವ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ: ಹೀಗಿದೆ ಅವರ ಕ್ರಿಕೆಟ್ ಜರ್ನಿ!
ಕೇವಲ 9 ಟಿ20 ಪಂದ್ಯಗಳಲ್ಲಿ ಆಡಿರುವ ಉಮೇಶ್ ಯಾದವ್ 12 ವಿಕೆಟ್ ಉರುಳಿಸಿದ್ದಾರೆ. ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಯಾದವ್ ಒಟ್ಟು 408 ರನ್ ಗಳಿಸಿದ್ದಾರೆ. ಆದರೆ ಏಕದಿನದಲ್ಲಿ ಅವರಿಗೆ ಹೆಚ್ಚು ಬ್ಯಾಟಿಂಗ್ ಅವಕಾಶ ಸಿಕ್ಕಿಲ್ಲ. ಕೇವಲ 79 ರನ್ ಗಳಿಸಲು ಶಕ್ತರಾಗಿದ್ದಾರೆ. ಅದೇ ಸಮಯದಲ್ಲಿ, ಅವರು ಟಿ-20 ಪಂದ್ಯಗಳಲ್ಲಿ ಕೇವಲ 22 ರನ್ ಗಳಿಸಿದ್ದಾರೆ.
ಇದನ್ನು ಓದಿ:ವಿರಾಟ್ ಅತ್ಯದ್ಭುತ ಆಟಕ್ಕೆ ನನ್ನ ಸೆಲ್ಯೂಟ್: ಕೊಹ್ಲಿ ಭುಜದ ಮೇಲೆ ಹೊತ್ತು ತಿರುಗಿದ ರೋಹಿತ್