ಋಷಿಕೇಶ(ಉತ್ತರಾಖಂಡ):ಬಾಂಗ್ಲಾದೇಶ ವಿರುದ್ಧದ ಸರಣಿಯಿಂದ ವಿಶ್ರಾಂತಿ ಪಡೆದಿರುವ ಭಾರತದ ಡ್ಯಾಶಿಂಗ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಕುಟುಂಬದ ಜೊತೆಗೆ ರಜೆಯ ದಿನಗಳನ್ನು ಕಳೆಯುತ್ತಿದ್ದಾರೆ.
ಉತ್ತರಾಖಂಡದ ಋಷಿಕೇಶದ ಸೊಬಗಿನ ತಾಣಗಳಿಗೆ ಪತ್ನಿ ದೇವಿಶಾ ಶೆಟ್ಟಿ ಜೊತೆಗೆ ಭೇಟಿ ನೀಡಿದ್ದಾರೆ. ತಮ್ಮ ಪತಿ ಸೂರ್ಯಕುಮಾರ್ ಯಾದವ್ ಜೊತೆಗೆ ಸುಮಧುರ ಕ್ಷಣಗಳನ್ನು ಕಳೆಯುತ್ತಿರುವ ಚಿತ್ರಗಳನ್ನು ದೇವಿಶಾ ಶೆಟ್ಟಿ ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಹರಿಯುವ ಗಂಗಾನದಿಯ ದಡದ ಮೇಲೆ, ಋಷಿಕೇಶದ ಸುಂದರ ಕಣಿವೆಗಳಲ್ಲಿ ಕುಳಿತು ಆಪ್ತ ಕ್ಷಣಗಳನ್ನು ಕಳೆಯುತ್ತಿರುವ ಸೂರ್ಯ ಕುಮಾರ್ ಯಾದವ್ ಮತ್ತು ದೇವಿಶಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಚಳಿಗಾಲದ ವೇಳೆ ಉತ್ತರಾಖಂಡಕ್ಕೆ ಸೆಲೆಬ್ರಿಟಿಗಳು ಭೇಟಿ ನೀಡುತ್ತಾರೆ.