ಕರ್ನಾಟಕ

karnataka

By

Published : Jun 16, 2021, 9:23 PM IST

ETV Bharat / sports

ಗವರ್ನರ್​ ಭೇಟಿಯಾಗಿ ಕಾಶ್ಮೀರದಲ್ಲಿ ಕ್ರಿಕೆಟ್​ ಅಭಿವೃಧ್ದಿಯ ಬಗ್ಗೆ ಚರ್ಚಿಸಿದ ಕ್ರಿಕೆಟರ್​​ ಸುರೇಶ್ ರೈನಾ

ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ರಿಕೆಟ್​ ಸೇರಿದಂತೆ ಕ್ರೀಡೆಗಳನ್ನು ಅಭಿವೃದ್ಧಿ ಪಡಿಸಲು ತಾವೂ ಸಿದ್ಧಪಡಿಸಿಕೊಂಡಿರುವ ಭವಿಷ್ಯದ ಕಾರ್ಯತಂತ್ರದ ಬಗ್ಗೆ ಲೆಫ್ಟಿನೆಂಟ್ ಗವರ್ನರ್​ಗೆ ವಿವರಿಸಿದರು. ಈ ವೇಳೆ, ತಮ್ಮೆ ಕ್ರಿಕೆಟ್​ ಜೀವನ ಕುರಿತು ಹೊರತಂದಿರುವ 'ಬಿಲೀವ್​' ಪುಸ್ತಕವನ್ನು ಉಡುಗೊರೆಯಾಗಿ ಮನೋಜ್​ ಸಿನ್ಹಾ ಅವರಿಗೆ ನೀಡಿದರು.

ಕ್ರಿಕೆಟರ್​ ಸುರೇಶ್ ರೈನಾ
ಕ್ರಿಕೆಟರ್​ ಸುರೇಶ್ ರೈನಾ

ಶ್ರೀನಗರ(ಜಮ್ಮು ಕಾಶ್ಮೀರ): ಮಾಜಿ ಭಾರತ ತಂಡದ ಆಲ್​ರೌಂಡರ್​ ಸುರೇಶ್​ ರೈನಾ ಬುಧವಾರ ಜಮ್ಮು -ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್​ ಮನೋಜ್​ ಸಿನ್ಹಾ ಅವರನ್ನು ರಾಜಭವನದಲ್ಲಿ ಭೇಟಿಯಾಗಿದ್ದಾರೆ.

ಈ ಸಂದರ್ಭದಲ್ಲಿ ಕ್ರಿಕೆಟ್ ತಮ್ಮ ಅಕಾಡೆಮಿಯ ಕಾರ್ಯವೈಖರಿ ಮತ್ತು ಯುಟಿಯಲ್ಲಿ ಯುವ ಕ್ರೀಡಾ ಪ್ರತಿಭೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಬೆಳೆಸಲು ತಾವೂ ದತ್ತು ತೆಗೆದುಕೊಂಡಿರುವ ಶಾಲೆಗಳ ಬಗ್ಗೆ ರೈನಾ ಲೆಫ್ಟಿನೆಂಟ್ ಗವರ್ನರ್ ಅವರಿಗೆ ತಿಳಿಸಿದ್ದಾರೆ.

ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ರಿಕೆಟ್​ ಸೇರಿದಂತೆ ಕ್ರೀಡೆಗಳನ್ನು ಅಭಿವೃದ್ಧಿ ಪಡಿಸಲು ತಾವೂ ಸಿದ್ಧಪಡಿಸಿಕೊಂಡಿರುವ ಭವಿಷ್ಯದ ಕಾರ್ಯತಂತ್ರದ ಬಗ್ಗೆ ಲೆಫ್ಟಿನೆಂಟ್ ಗವರ್ನರ್​ಗೆ ವಿವರಿಸಿದರು. ಈ ವೇಳೆ, ತಮ್ಮೆ ಕ್ರಿಕೆಟ್​ ಜೀವನ ಕುರಿತು ಹೊರತಂದಿರುವ 'ಬಿಲೀವ್​' ಪುಸ್ತಕವನ್ನು ಉಡುಗೊರೆಯಾಗಿ ಮನೋಜ್​ ಸಿನ್ಹಾ ಅವರಿಗೆ ನೀಡಿದರು.

ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಕಾಶ್ಮೀರದಲ್ಲಿ ಕ್ರೀಡಾ ಸಂಸ್ಕೃತಿಗೆ ಉತ್ತೇಜನ ನೀಡುವಲ್ಲಿ ರೈನಾ ಪ್ರಯತ್ನವನ್ನು ಶ್ಲಾಘಿಸಿದರು. ಅಲ್ಲದೇ ಈ ಪ್ರಯತ್ನಕ್ಕೆ ತಮ್ಮ ಆಡಳಿತದಿಂದ ಎಲ್ಲ ರೀತಿಯ ಬೆಂಬಲ ನೀಡುವ ಭರವಸೆ ನೀಡಿದ್ದಾರೆಂದು ತಿಳಿದು ಬಂದಿದೆ.

ಇದನ್ನು ಓದಿ:ಈ ಕಾರಣದಿಂದ ಸೌತಾಂಪ್ಟನ್​ನಲ್ಲಿ ಅಶ್ವಿನ್-ಜಡೇಜಾ ಇಬ್ಬರೂ ಆಡ್ಬೇಕು : ಸುನೀಲ್ ಗವಾಸ್ಕರ್​

ABOUT THE AUTHOR

...view details