ಕರ್ನಾಟಕ

karnataka

ETV Bharat / sports

ಕ್ರಿಕೆಟ್​​ ಲೋಕದ ಬ್ಯೂಟಿ ಕ್ವೀನ್​ ಸ್ಮೃತಿ ಮಂಧಾನಾಗೆ ಹುಟ್ಟುಹಬ್ಬದ ಸಂಭ್ರಮ.. - ಕ್ರಿಕೆಟ್​​ ಲೋಕದ ಬ್ಯೂಟಿ ಕ್ವೀನ್​ ಸ್ಮೃತಿ ಮಂದಾನ

ಭಾರತ ಮಹಿಳಾ ಕ್ರಿಕೆಟ್​ ತಂಡದ ತಾರೆ ಸ್ಮೃತಿ ಮಂಧಾನಾಗೆ ಇಂದು ಜನ್ಮದಿನದ ಸಂಭ್ರಮ. ನೆಚ್ಚಿನ ಆಟಗಾರ್ತಿಗೆ ಜಾಲತಾಣಗಳಲ್ಲಿ ಗಣ್ಯರು, ಅಭಿಮಾನಿಗಳು ಶುಭಾಶಯಗಳ ಸುರಿಮಳೆಗೈದಿದ್ದಾರೆ.

ಸ್ಮೃತಿ ಮಂದಾನ
ಸ್ಮೃತಿ ಮಂದಾನ

By

Published : Jul 18, 2021, 10:33 AM IST

Updated : Jul 18, 2021, 10:48 AM IST

ಹೈದರಾಬಾದ್: ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನಾ ಇಂದು 25ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 1996 ಜುಲೈ 18 ರಂದು ಮುಂಬೈನಲ್ಲಿ ಜನಿಸಿರುವ ಅವರು, 2013 (16 ವರ್ಷದವರಿದ್ದಾಗ) ರಲ್ಲಿ ಏಕದಿನ ಹಾಗೂ ಟಿ-20 ಪಂದ್ಯಗಳಿಗೆ ಪದಾರ್ಪಣೆ ಮಾಡುವ ಮೂಲಕ ಅತಿ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಭಾಜನರಾದರು.

ಕ್ರೀಡಾಂಗದಲ್ಲಿ ಸ್ಮೃತಿ ಮಂಧಾನಾ

ಅತ್ಯುತ್ತಮ ಎಡಗೈ ಬ್ಯಾಟ್ಸ್​ವುಮನ್ ಎನಿಸಿಕೊಂಡಿರುವ ಮಂಧಾನಾ, 2018ರ ಮಹಿಳಾ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಆಡಿದ 5 ಪಂದ್ಯಗಳಲ್ಲಿ 178 ರನ್ ಬಾರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ಸ್ಮೃತಿ ಮಂಧಾನಾ

59 ಏಕದಿನ ಪಂದ್ಯಗಳನ್ನಾಡಿರುವ ಇವರು 41.72ರ ಸರಾಸರಿಯಲ್ಲಿ 2,253 ರನ್ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಶತಕ ಹಾಗೂ 18 ಅರ್ಧ ಶತಕಗಳು ಸೇರಿವೆ. ಹಾಗೆಯೇ 81 ಟ್ವೆಂಟಿ-20 ಪಂದ್ಯಗಳಲ್ಲಿ 13 ಅರ್ಧ ಶತಕಗಳು ಸೇರಿದಂತೆ 1,901 ರನ್ ಗಳಿಸಿದ್ದಾರೆ. 3 ಟೆಸ್ಟ್ ಪಂದ್ಯಗಳನ್ನು ಆಡಿದ್ದು 2 ಅರ್ಧಶತಕ ಸಹಿತ 167 ರನ್ ಬಾರಿಸಿದ್ದಾರೆ.

ಸ್ಮೃತಿ ಮಂಧಾನಾ

ಟಿ-20 ಯಲ್ಲಿ 1,000 ರನ್ ಗಳಿಸಿದ ಎರಡನೇ ಅತಿ ವೇಗದ ಹಾಗೂ ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಸಿಡಿಸಿದ ಭಾರತದ ಪ್ರಥಮ ಆಟಗಾರ್ತಿ ಇವರಾಗಿದ್ದಾರೆ. ಗುಜರಾತ್ ವಿರುದ್ಧ ಮಹಾರಾಷ್ಟ್ರ ತಂಡದ ಸ್ಮೃತಿ 150 ಎಸೆತಗಳಲ್ಲಿ 224 ರನ್ ಗಳಿಸಿದ್ದರು. ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಮಂದಾನ ಅವರ ಆಟ ನೋಡಿ ತಮ್ಮ ವಿಶೇಷ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದ್ದರು.

ಗೆಳತಿಯೊಂದಿಗೆ ಸ್ಮೃತಿ ಮಂಧಾನಾ

2018 ರ ಟಿ-20 ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ 80 ರನ್​ಗಳ ಅಂತರದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿದರು. ಆ ಮ್ಯಾಚ್​ನಲ್ಲಿ ಪ್ಲೇಯರ್​ ಆಫ್​ ದಿ ಮ್ಯಾಚ್​ ಎಂಬ ಪ್ರಶಸ್ತಿ ಮಂಧಾನಾಗೆ ಲಭಿಸಿತ್ತು.

ಫೆಬ್ರವರಿ 2019ರಲ್ಲಿ ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಗೆ ಮಂಧಾನಾ ನಾಯಕಿಯಾಗಿ ಆಯ್ಕೆಯಾದರು. ಈ ಮೂಲಕ ಅತಿ ಚಿಕ್ಕ ವಯಸ್ಸಿನಲ್ಲಿ ನಾಯಕತ್ವ ವಹಿಸಿದ ಭಾರತದ ಮೊದಲ ಮಹಿಳಾ ಆಟಗಾರ್ತಿ ಇವರಾಗಿದ್ದಾರೆ. ಇಂದು ಅವರ ಹುಟ್ಟುಹಬ್ಬವಾಗಿರುವುದರಿಂದ ಕ್ರಿಕೆಟ್ ಲೋಕದ ಬ್ಯೂಟಿ ಕ್ವೀನ್ ಎಂದೇ ಫೇಮಸ್ ಆಗಿರುವ ಸ್ಮೃತಿ ಮಂಧಾನಾಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

Last Updated : Jul 18, 2021, 10:48 AM IST

ABOUT THE AUTHOR

...view details