ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಶಿಖರ್ ಧವನ್ ಬಾಲಿವುಡ್ಗೆ ಎಂಟ್ರಿ ಕೊಡ್ತಿದ್ದಾರೆ. ಶೀಘ್ರದಲ್ಲೇ ಅವರು ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜನಪ್ರಿಯ ನಾಯಕಿಯರಾದ ಸೋನಾಕ್ಷಿ ಸಿನ್ಹಾ ಮತ್ತು ಹುಮಾ ಖುರೇಷಿ ಅಭಿನಯದ 'ಡಬಲ್ ಎಕ್ಸ್‌ಎಲ್' ಸಿನಿಮಾದಲ್ಲಿ ಧವನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಫೊಟೋದಲ್ಲಿ ಹುಮಾ ಜೊತೆ ಧವನ್ ಡ್ಯಾನ್ಸ್ ಮಾಡುತ್ತಿದ್ದಾರೆ. ಈ ಫೋಟೋವನ್ನು ಹುಮಾ ರಿಟ್ವೀಟ್ ಮಾಡಿದ್ದಾರೆ.
ಧವನ್ ಇತ್ತೀಚೆಗಷ್ಟೇ ಮಾಧ್ಯಮ ಸಂಸ್ಥೆಯೊಂದಿಗೆ ತಮ್ಮ ಚೊಚ್ಚಲ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ‘ದೇಶಕ್ಕಾಗಿ ಆಡುವ ನನ್ನಂತಹ ಅಥ್ಲೀಟ್‌ನ ಬದುಕು ಎಂದಿಗೂ ಖಾಲಿ ಸಮಯ ಸಿಗುವುದಿಲ್ಲ. ಅಂತಹ ಸಂದರ್ಭಗಳಲ್ಲಿಯೂ ನಾನು ವಿಶ್ರಾಂತಿ ಪಡೆಯುತ್ತೇನೆ ಮತ್ತು ಆಗಾಗ ಒಳ್ಳೆಯ ಚಲನಚಿತ್ರಗಳನ್ನು ನೋಡುತ್ತೇನೆ.
ಈ ಚಿತ್ರಕ್ಕೆ ಅವಕಾಶ ಸಿಗುವ ಮೊದಲೇ ಕಥೆ ಕೇಳಿದ್ದೆ. ಇದು ನನ್ನ ಹೃದಯ ಮುಟ್ಟಿತು. ಈ ಚಿತ್ರ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತದೆ. ನಾವು ಏನೇ ಆಗಿರಲಿ.. ನಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಬಹುದು ಎಂಬ ಆತ್ಮವಿಶ್ವಾಸ ನಮ್ಮಲ್ಲಿ ತುಂಬುತ್ತದೆ’ ಎಂದು ಧವನ್ ವಿವರಿಸಿದರು.