ಕರ್ನಾಟಕ

karnataka

ETV Bharat / sports

ಮೂಲ ಬೆಲೆಗಿಂತಲೂ 22 ಪಟ್ಟು ಅಧಿಕ ಮೊತ್ತಕ್ಕೆ ಬಿಕರಿಯಾದ ಅನ್​​ಕ್ಯಾಪ್ಡ್​​ ಶಾರುಖ್ ಖಾನ್​! - ಪಂಜಾಬ್ ತಂಡಕ್ಕೆ ಶಾರುಖ್ ಖಾನ್​

ಇಂಡಿಯನ್​ ಪ್ರೀಮಿಯರ್ ಹರಾಜು ಪ್ರಕ್ರಿಯೆಯಲ್ಲಿ ಕೆಲ ದೇಶಿ ಪ್ರತಿಭೆಗಳಿಗೆ ವಿವಿಧ ಪ್ರಾಂಚೈಸಿ ಮಣೆ ಹಾಕಿದ್ದು, ತಮಿಳುನಾಡು ಕ್ರಿಕೆಟ್​ನಲ್ಲಿ ಮಿಂಚು ಹರಿಸಿರುವ ಶಾರುಖ್​ ಖಾನ್​ಗೆ ಪಂಜಾಬ್​ ಕಿಂಗ್ಸ್ ಮತ್ತೊಮ್ಮೆ ಮಣೆ ಹಾಕಿದೆ.

cricketer Shahrukh Khan sold for Punjab Kings
cricketer Shahrukh Khan sold for Punjab Kings

By

Published : Feb 12, 2022, 11:17 PM IST

ಬೆಂಗಳೂರು:ಇಂಡಿಯನ್​ ಪ್ರೀಮಿಯರ್ ಲೀಗ್​​ನ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಈ ಸಲ ಕೆಲವೊಂದು ದೇಶಿ ಪ್ರತಿಭೆಗಳಿಗೆ ಇನ್ನಿಲ್ಲದ ಬೇಡಿಕೆ ಕೇಳಿ ಬಂದಿದೆ. ಪ್ರಸಕ್ತ ಋತುವಿನ ದೇಶಿ ಕ್ರಿಕೆಟ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ತಮಿಳುನಾಡಿನ ಶಾರುಖ್​ ಖಾನ್ ಖರೀದಿ ಮಾಡಲು ಫ್ರಾಂಚೈಸಿಗಳು ಮುಗಿಬಿದ್ದು, ದಾಖಲೆಯ 9 ಕೋಟಿ ರೂ. ನೀಡಿ ಖರೀದಿ ಮಾಡಿವೆ.

ಕರ್ನಾಟಕ ವಿರುದ್ಧ ನಡೆದಿದ್ದ ಸೈಯದ್ ಮುಷ್ತಾಕ್​ ಅಲಿ ಟೂರ್ನಿಯ ಫೈನಲ್ ಪಂದ್ಯದ ಕೊನೆಯ ಎಸೆತದಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿ ತಮಿಳುನಾಡು ತಂಡಕ್ಕೆ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಶಾರುಖ್ ಖಾನ್​​ ಪಂಜಾಬ್ ಪಾಲಾಗಿದ್ದಾರೆ.

ದಾಖಲೆಯ 9 ಕೋಟಿ ರೂ. ಬೆಲೆಗೆ ಶಾರುಖ್ ಖಾನ್​ ಬಿಕರಿ

ಇದನ್ನೂ ಓದಿರಿ:ರಾಮನಗರ್​ ವಿಕೆಟ್​ ಕೀಪರ್​ಗೆ RCB ಮಣೆ: ₹3.40 ಕೋಟಿ ನೀಡಿ ಅನುಜ್​​​ ರಾವತ್​ ಖರೀದಿಸಿದ ಬೆಂಗಳೂರು!

ಇಂಡಿಯನ್ ಪ್ರೀಮಿಯರ್ ಲೀಗ್​ ಹರಾಜು ಪ್ರಕ್ರಿಯೆಯಲ್ಲಿ ತಮಿಳುನಾಡಿನ ಸ್ಫೋಟಕ ಬ್ಯಾಟ್ಸಮನ್​​ ಶಾರೂಖ್ ಖಾನ್​ ಮೂಲ ಬೆಲೆ 40 ಲಕ್ಷ ರೂ. ಘೋಷಣೆ ಮಾಡಿಕೊಂಡಿದ್ದರು. ಹರಾಜು ಪ್ರಕ್ರಿಯೆಯಲ್ಲಿ ಈ ಯಂಗ್ ಪ್ಲೇಯರ್ ಖರೀದಿ ಮಾಡಲು ಅನೇಕ ಫ್ರಾಂಚೈಸಿಗಳು ಪೈಪೋಟಿ ನಡೆಸಿದ್ದವು. ಪ್ರಮುಖವಾಗಿ ಚೈನ್ನೈ ಸೂಪರ್ ಕಿಂಗ್ಸ್​, ಪಂಜಾಬ್​ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಕಂಡು ಬಂದಿತು. ಆದರೆ, ಕೊನೆಯದಾಗಿ ಈ ಪ್ಲೇಯರ್​ಗೆ ಪಂಜಾಬ್​ 9 ಕೋಟಿ ರೂ. ನೀಡಿ ಖರೀದಿ ಮಾಡಿದೆ. ಕಳೆದ ವರ್ಷದ ಹರಾಜು ಪ್ರಕ್ರಿಯೆಯಲ್ಲೂ ಈ ಪ್ಲೇಯರ್​​ಗೆ ಪಂಜಾಬ್​ 5.25 ಕೋಟಿ ರೂ. ನೀಡಿತ್ತು. ಕಳೆದ ವರ್ಷದ ಹರಾಜು ಪ್ರಕ್ರಿಯೆಯಲ್ಲಿ ಈ ಪ್ಲೇಯರ್ ತಮ್ಮ ಮೂಲ ಬೆಲೆ 20 ಲಕ್ಷ ರೂ. ಘೋಷಣೆ ಮಾಡಿಕೊಂಡಿದ್ದರು.

ದೇಶಿ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಶಾರುಖ್ ಖಾನ್​, ಮಧ್ಯಮ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟಿಂಗ್​ ಪ್ರದರ್ಶನ ಆಡುವ ಸಾಮರ್ಥ್ಯ ಹೊಂದಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಏಕದಿನ ತಂಡಕ್ಕಾಗಿ ಘೋಷಣೆಯಾದ ಪ್ಲೇಯರ್ಸ್​ಗಳಲ್ಲಿ ಕೋವಿಡ್ ಕಾಣಿಸಿಕೊಂಡಿದ್ದ ಕಾರಣ ಈ ಪ್ಲೇಯರ್​ ಹೆಚ್ಚುವರಿಯಾಗಿ ತಂಡ ಸೇರಿಕೊಂಡಿದ್ದರು.

ABOUT THE AUTHOR

...view details