ಕರ್ನಾಟಕ

karnataka

ETV Bharat / sports

ಪತ್ನಿ ಜೊತೆ ಕೋವಿಡ್​ ಲಸಿಕೆಯ ಮೊದಲ ಡೋಸ್ ಪಡೆದ ರವೀಂದ್ರ ಜಡೇಜಾ - ಕೋವಿಡ್​ ಲಸಿಕೆಯ ಮೊದಲ ಡೋಸ್ ಪಡೆದ ರವಿಂದ್ರ ಜಡೇಜಾ

ಭಾರತ ಕ್ರಿಕೆಟ್‌ ತಂಡದ ಆಲ್‌ರೌಂಡರ್​ ರವೀಂದ್ರ ಜಡೇಜಾ ತಮ್ಮ ಪತ್ನಿ ರಿವಾಬಾ ಅವರೊಂದಿಗೆ ರಾಜ್‌ಕೋಟ್‌ನಲ್ಲಿ ಕೋವಿಡ್​ ಲಸಿಕೆಯ ಮೊದಲ ಡೋಸ್ ಪಡೆದುಕೊಂಡರು.

ಪತ್ನಿ ಜೊತೆ ಕೋವಿಡ್​ ಲಸಿಕೆಯ ಮೊದಲ ಡೋಸ್ ಪಡೆದ ರವಿಂದ್ರ ಜಡೇಜಾ
ಪತ್ನಿ ಜೊತೆ ಕೋವಿಡ್​ ಲಸಿಕೆಯ ಮೊದಲ ಡೋಸ್ ಪಡೆದ ರವಿಂದ್ರ ಜಡೇಜಾ

By

Published : May 14, 2021, 12:31 PM IST

ರಾಜ್‌ಕೋಟ್‌: ಭಾರತ ಕ್ರಿಕೆಟ್‌ ತಂಡದ ಆಲ್‌ರೌಂಡರ್​ ರವೀಂದ್ರ ಜಡೇಜಾ ಅವರು ತಮ್ಮ ಪತ್ನಿ ರಿವಾಬಾ ಜೊತೆ ಕೋವಿಡ್​ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ.

ಇಂಗ್ಲೆಂಡ್​ನಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ಪಂದ್ಯ ಹಾಗೂ ಇಂಗ್ಲೆಂಡ್‌ ವಿರುದ್ಧದ 5 ಪಂದ್ಯಗಳ ಟೆಸ್ಟ್​ ಸರಣಿಗೆ ಟೀಂ​ ಇಂಡಿಯಾಗೆ ಆಯ್ಕೆಯಾಗಿರುವ ಜಡೇಜಾ ವ್ಯಾಕ್ಸಿನ್ ಪಡೆದರು.

ಜಡೇಜಾಗಿಂತ ಮುಂಚೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರ, ವೇಗಿಗಳಾದ ಉಮೇಶ್ ಯಾದವ್, ಇಶಾಂತ್ ಶರ್ಮಾ, ದೀಪಕ್ ಚಹರ್, ಜಸ್ಪ್ರೀತ್ ಬುಮ್ರಾ ಹಾಗು ಪಂತ್ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಕೋವಿಡ್​ ಲಸಿಕೆಯ ಮೊದಲ ಡೋಸ್​​ ಪಡೆದ​ ರಿಷಭ್ ಪಂತ್

For All Latest Updates

TAGGED:

ABOUT THE AUTHOR

...view details