ಭಾರತ ಪ್ರವಾಸದಲ್ಲಿರುವ ದಕ್ಷಿಣ ಆಫ್ರಿಕಾ ತಂಡದ ಕಿಲ್ಲರ್ ಬ್ಯಾಟ್ಸ್ಮನ್ ಡೇವಿಡ್ ಮಿಲ್ಲರ್ ಅವರ ಪುಟ್ಟ ಅಭಿಮಾನಿಯೊಬ್ಬರು ಮಾರಕ ಕ್ಯಾನ್ಸರ್ನಿಂದ ಅಸುನೀಗಿದ್ದಾರೆ. ಇದಕ್ಕೆ ಆಫ್ರಿಕಾ ಬ್ಯಾಟರ್ ತೀವ್ರ ಸಂತಾಪ ಸೂಚಿಸಿದ್ದು, ಮರುಕಪಟ್ಟಿದ್ದಾರೆ.
ಪುಟ್ಟ ಅಭಿಮಾನಿಯ ಸಾವಿಗೆ ಮರುಗಿದ ದಕ್ಷಿಣ ಆಫ್ರಿಕಾ ಕ್ರಿಕೆಟರ್ ಡೇವಿಡ್ ಮಿಲ್ಲರ್ - ದಕ್ಷಿಣ ಆಫ್ರಿಕಾ ಏಕದಿನ ಸರಣಿ
ಭಾರತ ಪ್ರವಾಸದಲ್ಲಿರುವ ದಕ್ಷಿಣ ಆಫ್ರಿಕಾ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಅನುಭವಿಸಿದೆ. ಈ ನಡುವೆ ತಂಡದ ಆಟಗಾರ ಡೇವಿಡ್ ಮಿಲ್ಲರ್ ಅಭಿಮಾನಿ ಕ್ಯಾನ್ಸರ್ಗೆ ತುತ್ತಾಗಿ ಇಹಲೋಕ ತ್ಯಜಿಸಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅಭಿಮಾನಿಯೊಂದಿಗಿನ ಫೋಟೋಗಳುಳ್ಳ ವಿಡಿಯೋ ಹಂಚಿಕೊಂಡಿರುವ ಮಿಲ್ಲರ್, 'ನನ್ನ ಪುಟ್ಟ ರಾಕ್‌ಸ್ಟಾರ್. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ. ನಾನು ಯಾವಾಗಲೂ ನಿನ್ನನ್ನು ಪ್ರೀತಿಸುತ್ತೇನೆ. ನೀನು ಬದುಕಿದ ದಿನಗಳು ಎಂತಹ ಕಷ್ಟಕರವಾಗಿದ್ದವು ಎಂದು ನಾನು ಬಲ್ಲೆ. ನಿನ್ನ ಜೀವನೋತ್ಸಾಹವನ್ನು ಕಂಡಿದ್ದೇನೆ. ನೋವಿನಲ್ಲೂ ನಗು, ಸಕಾರಾತ್ಮಕ ಯೋಚನೆ ನಿನ್ನ ಮುಖದ ಮೇಲಿತ್ತು. ನಿನ್ನೊಂದಿಗೆ ಕಳೆದ ದಿನಗಳು ಅವಿಸ್ಮರಣೀಯ. ನಿನ್ನನ್ನು ನಾನು ಎಂದಿಗೂ ಪ್ರೀತಿಸುವೆ' ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಟಿ20 ವಿಶ್ವಕಪ್: ಬೂಮ್ರಾ ಬದಲಿ ಆಟಗಾರನ ಘೋಷಣೆಗೆ ಇಂದೇ ಕೊನೆ ದಿನ