ಇಸ್ಲಾಮಾಬಾದ್(ಪಾಕಿಸ್ತಾನ):ವಿಶ್ವಕಪ್ನಲ್ಲಿ ನಾವು ಭಾರತ ತಂಡದ ವಿರುದ್ಧ ಆಡುತ್ತಿದ್ದೇವೆ ಎಂದುಕೊಂಡೇ ಪ್ರತಿಯೊಂದು ತಂಡದ ವಿರುದ್ಧ ಆಟವಾಡುತ್ತೇವೆ ಎಂದು ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಹೇಳಿದ್ದಾರೆ.
ಖಾಸಗಿ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಸರ್ಫರಾಜ್ ನಾವು ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಒಂದು ಪಂದ್ಯ ಆಡುತ್ತೇವೆ. ಆದ್ರೆ ಇನ್ನುಳಿದ ತಂಡಗಳನ್ನೂ ನಾವು ಭಾರತ ಎಂದೇ ಪರಿಗಣಿಸಿ ಆಟವಾಡುತ್ತೇವೆ ಎಂದು ಹೇಳಿದ್ದಾರೆ.