ಆಸ್ಟ್ರೇಲಿಯಾ: ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆಸೀಸ್ ತಂಡದ ವೇಗಿ ಜೇ ರಿಚರ್ಡ್ಸನ್ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
22 ವರ್ಷದ ವೇಗಿ ಜೇ ರಿಚರ್ಡ್ಸನ್ ಕಳೆದ ಮಾರ್ಚ್ನಲ್ಲಿ ಪಾಕಿಸ್ತಾನದ ವಿರುದ್ಧದ ಏಕದಿನ ಪಂದ್ಯದ ವೇಳೆ ಭುಜದ ನೋವಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ, ಇಲ್ಲಿಯವರೆಗೂ ಸಂಪೂರ್ಣ ಗುಣಮುಖರಾಗದ ಹಿನ್ನೆಲೆಯಲ್ಲಿ ವಿಶ್ವಕಪ್ ಟೂರ್ನಿಯಿಂದ ಅವರನ್ನು ಕೈಬಿಡಲಾಗಿದೆ.
ಈ ಬಗ್ಗೆ ಮಾತನಾಡಿರುವ ಆಸ್ಟ್ರೇಲಿಯಾ ತಂಡದ ಫಿಸಿಯೋಥೆರಪಿಸ್ಟ್ ಡೇವಿಡ್ ಬೀಕ್ಲೆ, ನಿಜಕ್ಕೂ ಇದು ಆಸ್ಟ್ರೇಲಿಯಾ ತಂಡ ಮತ್ತು ಜೇ ರಿಚರ್ಡ್ಸನ್‌ಗೆ ನಿರಾಶಾದಾಯಕ ಸುದ್ದಿ. ಜೇಗೆ ಈ ಮೊದಲಿನಂತೆ ವೇಗವಾಗಿ ಬೌಲ್ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಆಯ್ಕೆದಾರರೊಂದಿಗೆ ಮಾತನಾಡಿ ಜೇ ಅವರನ್ನ ಕೈಬಿಡಲು ತೀರ್ಮಾನಿಸಲಾಯಿತು ಎಂದರು.
ಕೇನ್ ರಿಚರ್ಡ್ಸನ್‌ಗೆ ಅವಕಾಶ:
ಜೇ ರಿಚರ್ಡ್ಸನ್ ಸ್ಥಾನ ತುಂಬುವುದಕ್ಕೆ ಕೇನ್ ರಿಚರ್ಡ್ಸನ್‌ಗೆ ಆಸೀಸ್ ಟೀಂ ಸೆಲೆಕ್ಟರ್ಸ್ ಮಣೆ ಹಾಕಿದ್ದು, ಕೇನ್ ವಿಶ್ವಕಪ್ ಸರಣಿಗಾಗಿ ಇಂಗ್ಲೆಂಡ್ಗೆ ಹಾರಲು ಅವಕಾಶ ಪಡೆದುಕೊಂಡಿದ್ದಾರೆ.