ಚೆನ್ನೈ (ತಮಿಳುನಾಡು):ಭಾರತ ಆಸ್ಟ್ರೇಲಿಯಾ ತಂಡವನ್ನು ಆರು ವಿಕೆಟ್‌ಗಳಿಂದ ಪರಾಜಯಗೊಳಿಸಿದೆ. ಪಂದ್ಯದ ಬಳಿಕ ಮಾತನಾಡಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ತಂಡದ ಗೆಲುವಿಗೆ ಹರ್ಷ ವ್ಯಕ್ತಪಡಿಸಿದರು. ವಿಭಿನ್ನ ಪರಿಸ್ಥಿತಿಗಳಲ್ಲಿ ಉತ್ತಮವಾಗಿ ಆಡುವುದು ತಮ್ಮ ತಂಡದ ಮುಂದೆ ಇರುವ ದೊಡ್ಡ ಸವಾಲು ಎಂದರು. ಯಾವ ಅಂಗಳದಲ್ಲಿ ಆಟ ನಡೆಯುತ್ತೆ ಎನ್ನುವುದರ ಮೇಲೆ ತಂಡದ ಸಂಯೋಜನೆಯಲ್ಲಿ ಬದಲಾವಣೆಗಳಾಗಬಹುದು ಎಂಬ ಸುಳಿವನ್ನೂ ಇದೇ ವೇಳೆ ಅವರು ನೀಡಿದರು.
"ನಾವು ವಿಭಿನ್ನ ಪರಿಸ್ಥಿತಿಗಳಲ್ಲಿ ಆಡುವ ಕಾರಣ ಅದು ಮುಂದೆ ಸಾಗುವ ಹಾದಿ ದೊಡ್ಡ ಸವಾಲಿನಿಂದ ಕೂಡಿರಲಿದೆ . ಕೆಲವು ಸಂದರ್ಭಗಳಲ್ಲಿ ಸಂಯೋಜನೆಗಳನ್ನು ಬದಲಾಯಿಸಬೇಕಾಗಬಹುದು ಮತ್ತು ತಂಡವಾಗಿ ನಾವು ಆ ಕೆಲಸ ಮಾಡಲು ನಾವು ಸಿದ್ಧರಿದ್ದೇವೆ" ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಶೂನ್ಯಕ್ಕೆ ಔಟ್ ಆದ ರೋಹಿತ್ ಶರ್ಮಾ ತಂಡದ ಫೀಲ್ಡಿಂಗ್ ಬಗ್ಗೆ ವಿಶೇಷವಾಗಿ ಸಂತಸ ವ್ಯಕ್ತಪಡಿಸಿದರು. ವಿಶೇಷವಾಗಿ ಫೀಲ್ಡಿಂಗ್ ಬಗ್ಗೆ ಅವರು ಗುಣಗಾನ ಮಾಡಿದರು. ’’ ಫೀಲ್ಡಿಂಗ್ನಲ್ಲಿ ನಾವು ನಿಜವಾಗಿಯೂ ಉತ್ತಮ ಪ್ರಯತ್ನವನ್ನು ಮಾಡಿದ್ದೇವೆ‘‘ ಎಂದರು.
ಭಾರತ ತಂಡ ಅಗ್ರ ಕ್ರಮಾಂಕದ ಮೂವರು ಆಟಗಾರರನ್ನು ಶೂನ್ಯಕ್ಕೆ ಕಳೆದುಕೊಂಡಿತ್ತು. ಕೇವಲ 2 ರನ್ಗೆ ಮೂರು ಮಹತ್ವದ ವಿಕೆಟ್ಗಳನ್ನು ಆಸೀಸ್ ಆಟಗಾರರು ಪಡೆದುಕೊಂಡಿದ್ದರು. ಈ ಸಮಯದಲ್ಲಿ ನಾವು ಆತಂಕಕ್ಕೆ ಒಳಗಾಗಿದ್ದೆವು. ಇಂತಹ ಸಂಕಷ್ಟದ ಸಮಯದಲ್ಲಿ ನೆರವಾಗಿದ್ದು ವಿರಾಟ್ ಹಾಗೂ ರಾಹುಲ್ ಎಂದು ರೋಹಿತ್ ನೆನಪಿಸಿಕೊಂಡರು. ವಿರಾಟ್ ಮತ್ತು ಕೆಎಲ್ ಗೆ ಹ್ಯಾಟ್ಸ್ ಆಫ್ ಎಂದ ಮುಂಬೈಕರ್, ಅವರು ಮ್ಯಾಚ್ ವಿನ್ನಿಂಗ್ ಜೊತೆಯಾಟ ನೀಡಿದ್ದು, ಅದಕ್ಕಾಗಿ ಅವರು ಕ್ರೀಸ್ಗೆ ಅಂಟಿಕೊಂಡು ನಿಂತ ಬಗೆಯನ್ನು ಹೊಗಳಿದರು.