ಕರಾಚಿ, ಪಾಕಿಸ್ತಾನ: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಮಿಸ್ಬಾ-ಉಲ್-ಹಕ್ ಅವರು ಭಾರತದಲ್ಲಿ ನಡೆಯಲಿರುವ Cricket World Cup ಗೆ ತಮ್ಮ ದೇಶದ ತಂಡವನ್ನು ಸ್ಪರ್ಧಿಸಲು ಅವಕಾಶ ಮಾಡಿಕೊಡಿ.. ಇಲ್ಲವಾದಲ್ಲಿ ಇದು ಸಾಂಪ್ರದಾಯಿಕ ಎದುರಾಳಿ ಭಾರತ ವಿರುದ್ಧ ಪಂದ್ಯ ವೀಕ್ಷಿಸುವ ಅಭಿಮಾನಿಗಳಿಗೆ ಅನ್ಯಾಯವಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಮಾರಂಭವೊಂದರಲ್ಲಿ ಮಾತನಾಡಿದ 49 ವರ್ಷದ ಮಾಜಿ ಕೋಚ್ ಮಿಸ್ಬಾ ಉಲ್ ಹಕ್, ಉಭಯ ದೇಶಗಳು ಇತರ ಕ್ರೀಡೆಗಳಲ್ಲಿ ಪರಸ್ಪರ ಎದುರಿಸಬಹುದಾದಾಗ ಕ್ರಿಕೆಟ್‌ನಲ್ಲಿ ಏಕೆ ಎದುರಾಗಬಾರದು?.. ರಾಜಕೀಯ ಸಂಬಂಧಗಳೊಂದಿಗೆ ಕ್ರಿಕೆಟ್ ಅನ್ನು ಏಕೆ ಜೋಡಿಸುತ್ತೀರಾ?.. ತಮ್ಮ ತಂಡಗಳು ಪರಸ್ಪರರ ವಿರುದ್ಧ ಆಡುವುದನ್ನು ವೀಕ್ಷಿಸುವ ಅವಕಾಶವನ್ನು ಜನರಿಂದ ಕಸಿದುಕೊಳ್ಳುವುದು ಅನ್ಯಾಯವಾಗುತ್ತದೆ ಎಂದು ಮಿಸ್ಬಾ ಉಲ್ ಹಕ್ ಆಕ್ರೋಶ ವ್ಯಕ್ತಪಡಿಸಿದರು.
ಮಾತು ಮುಂದುವರಿಸಿದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 11 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ಮಾಜಿ ಬ್ಯಾಟ್ಸ್‌ಮನ್, ಪಾಕಿಸ್ತಾನ ಮತ್ತು ಭಾರತೀಯ ಕ್ರಿಕೆಟ್ ಅನ್ನು ತುಂಬಾ ಪ್ರೀತಿಸುವ ಅಭಿಮಾನಿಗಳಿಗೆ ಇದು ದೊಡ್ಡ ಅನ್ಯಾಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ಮತ್ತು ಬಿಸಿಸಿಐ (ಭಾರತೀಯ ಕ್ರಿಕೆಟ್ ಮಂಡಳಿ) ಉಭಯ ದೇಶಗಳ ನಡುವಿನ ಸಂಬಂಧ ಹಳಸಿರುವ ಕಾರಣ ಈ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ರಾಷ್ಟ್ರೀಯ ತಂಡದ ಭಾಗವಹಿಸುವಿಕೆ ಸರ್ಕಾರದ ಅನುಮೋದನೆಗೆ ಒಳಪಟ್ಟಿರುತ್ತದೆ.
ಭಾರತವು ಪಾಕಿಸ್ತಾನದಲ್ಲಿ ಏಷ್ಯಾ ಕಪ್ ಪಂದ್ಯಗಳನ್ನು ಆಡಲು ನಿರಾಕರಿಸಿದ ನಂತರ, ಕಾಂಟಿನೆಂಟಲ್ ಪಂದ್ಯಾವಳಿಯನ್ನು 'ಹೈಬ್ರಿಡ್' ಆಧಾರದ ಮೇಲೆ ಆಯೋಜಿಸಲಾಗುತ್ತಿದೆ. ಆಗಸ್ಟ್ 31 ರಿಂದ ಸೆಪ್ಟೆಂಬರ್ 17 ರವರೆಗೆ ನಡೆಯಲಿರುವ ಪಂದ್ಯಾವಳಿಯಲ್ಲಿ ಪಾಕಿಸ್ತಾನದಲ್ಲಿ ನಾಲ್ಕು ಪಂದ್ಯಗಳು ಮತ್ತು ಶ್ರೀಲಂಕಾದ ತಟಸ್ಥ ಸ್ಥಳಗಳಲ್ಲಿ ಒಂಬತ್ತು ಪಂದ್ಯಗಳು ನಡೆಯಲಿವೆ.