ಕರ್ನಾಟಕ

karnataka

ETV Bharat / sports

ವಿಶ್ವಕಪ್​ ಕ್ರಿಕೆಟ್​​: ಟೀಮ್​ ಇಂಡಿಯಾ ಗೆಲುವಿನಲ್ಲಿ ಸಚಿನ್​ ದಾಖಲೆ ಮುರಿದ ವಿರಾಟ್​ - ETV Bharath Karnataka

ವಿಶ್ವಕಪ್​ನಲ್ಲಿ ಶ್ರೀಲಂಕಾ ವಿರುದ್ಧ ಭಾರತ ಗೆಲುವು ದಾಖಲಿಸಿದ ನಂತರ ವಿರಾಟ್​ ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ಅವರ ದಾಖಲೆ ಮುರಿದಿದ್ದಾರೆ. ಒಟ್ಟಾರೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಗೆಲುವಿನಲ್ಲಿ ವಿರಾಟ್​ ಪಾಲುದಾರಿಕೆ ಹೆಚ್ಚಾಗಿದೆ.

Virat Kohli
Virat Kohli

By ETV Bharat Karnataka Team

Published : Nov 3, 2023, 3:51 PM IST

ಮುಂಬೈ (ಮಹಾರಾಷ್ಟ್ರ): ಸ್ಟಾರ್ ಇಂಡಿಯಾ ಬ್ಯಾಟರ್, ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್​ ತೆಂಡೂಲ್ಕರ್ ಅವರ ಮತ್ತೊಂದು ದಾಖಲೆಯನ್ನು ಮುರಿದು ತಮ್ಮ ಕ್ಯಾಪ್‌ಗೆ ಮತ್ತೊಂದು ಗರಿಯನ್ನು ಸೇರಿಸಿಕೊಂಡಿದ್ದಾರೆ. ಗುರುವಾರ ಶ್ರೀಲಂಕಾ ವಿರುದ್ಧ ನಡೆದ ಐಸಿಸಿ ಏಕದಿನ ವಿಶ್ವಕಪ್‌ನ ಪಂದ್ಯದ ಗೆಲುವಿನ ನಂತರ ಕಿಂಗ್​ ಕೊಹ್ಲಿಗೆ ಈ ಗರಿ ಸಿಕ್ಕಿದೆ.

ಸಿಂಹಳೀಯರ ವಿರುದ್ಧದ ಗೆಲುವಿನೊಂದಿಗೆ ವಿರಾಟ್​ ಕೊಹ್ಲಿ ಎಲ್ಲ ಮಾದರಿಯ ಕ್ರಿಕೆಟ್​ನಿಂದ ಒಟ್ಟು 308 ಪಂದ್ಯಗಳ ಗೆಲುವಿನಲ್ಲಿ ಪಾಲುದಾರರಾಗಿದ್ದಾರೆ. ವಿಶ್ವಕಪ್​ ಲೆಕ್ಕಕ್ಕೆ ಬಂದರೆ 28 ಪಂದ್ಯಗಳ ಜಯದಲ್ಲಿ ವಿರಾಟ್​ ಇದ್ದಾರೆ. ಈ ಮೂಲಕ ಕ್ರಿಕೆಟ್​ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಮೀರಿಸಿದ್ದಾರೆ.

ಮುಂಬೈನ ವಾಂಖಡೆ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ 88 ರನ್ ಗಳಿಸಿ ಕ್ಯಾಚ್ ಕೊಟ್ಟು ಇನ್ನಿಂಗ್ಸ್​​ ಮುಗಿಸಿದರು, ಸಚಿನ್​ ತೆಂಡೂಲ್ಕರ್​ ತವರು ಮೈದಾನದಲ್ಲಿ ವಿರಾಟ್​ ಅವರ ದಾಖಲೆಯನ್ನು ಮುರಿಯುತ್ತಾರೆ ಎಂಬ ನಿರೀಕ್ಷೆ ಎಲ್ಲರಲ್ಲಿತ್ತು. ಆದರೆ, ಅದು ಈಡೇರಲಿಲ್ಲ. ನಡೆಯುತ್ತಿರುವ ವಿಶ್ವಕಪ್​​​ನಲ್ಲಿ ವಿರಾಟ್​ 3 ಬಾರಿ ಶತಕದ ಸಮೀಪದಲ್ಲಿ ವಿಕೆಟ್​ ಕಳೆದುಕೊಂಡಿದ್ದಾರೆ.

ವಿರಾಟ್​ ಭಾರತದ 28 ವಿಶ್ವಕಪ್ ಪಂದ್ಯಗಳ ವಿಜಯಗಳಲ್ಲಿ ತಂಡದ ಭಾಗವಾಗಿದ್ದು, ಮೂರು ಶತಕಗಳು ಮತ್ತು ಒಂಬತ್ತು ಅರ್ಧಶತಕ ಗಳಿಸಿದ್ದಾರೆ. ಕೊಹ್ಲಿ 54.51 ಸರಾಸರಿಯಲ್ಲಿ 1472 ಗಳಿಸಿದ್ದಾರೆ. ಸಚಿನ್ 65.91 ರ ಸರಾಸರಿಯಲ್ಲಿ 1516 ರನ್ ಗಳಿಸಿದ್ದು, ಮೂರು ಶತಕ, 12 ಅರ್ಧಶತಕ ಇದೆ. ಕುತೂಹಲಕಾರಿಯಾಗಿ, ಸಚಿನ್​ ತೆಂಡೂಲ್ಕರ್ 45 ಪಂದ್ಯಗಳಲ್ಲಿ ಆಡಿದ್ದರೆ, ವಿರಾಟ್ ಕೊಹ್ಲಿ ವಿಶ್ವಕಪ್‌ನಲ್ಲಿ 33 ಪಂದ್ಯಗಳನ್ನು ಆಡಿದ್ದಾರೆ.

ರಾಷ್ಟ್ರೀಯ ತಂಡಕ್ಕಾಗಿ 514 ಅಂತಾರಾಷ್ಟ್ರೀಯ ಪಂದ್ಯಗಳ ಭಾಗವಾಗಿರುವ ಕೊಹ್ಲಿ 308 ಗೆಲುವಿನಲ್ಲಿ ತಂಡದ ಪಾಲುದಾರರಾಗಿದ್ದರು, 66.13ರ ಸರಾಸರಿಯಲ್ಲಿ 17,063 ರನ್ ಗಳಿಸಿದ್ದಾರೆ. ಅವರು 75 ಇನ್ನಿಂಗ್ಸ್‌ಗಳಲ್ಲಿ ಅಜೇಯರಾಗಿ 54 ಶತಕ ಮತ್ತು 84 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಮತ್ತೊಂದೆಡೆ, ದಿಗ್ಗಜ ಸಚಿನ್​ ತೆಂಡೂಲ್ಕರ್ ಭಾರತ ಗೆದ್ದ 307 ಪಂದ್ಯಗಳಿಂದ 58.20 ಸರಾಸರಿಯಲ್ಲಿ 53 ಶತಕಗಳು ಮತ್ತು 83 ಅರ್ಧಶತಕಗಳು ಸೇರಿದಂತೆ 17,113 ರನ್ ಗಳಿಸಿದ್ದಾರೆ. ಸಚಿನ್​ ಒಟ್ಟು 664 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.( ಟೆಸ್ಟ್​,ಒಡಿಐ, ಟಿ-20 ಪಂದ್ಯಗಳ ಗೆಲುವಿನ ಒಟ್ಟಾರೆ ಲೆಕ್ಕಾಚಾರ)

ಪಂದ್ಯದಲ್ಲಿ:ಗುರುವಾರ ನಡೆದ ಭಾರತ-ಶ್ರೀಲಂಕಾ ಮುಖಾಮುಖಿಯಲ್ಲಿ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶ್ರೀಲಂಕಾವನ್ನು 55 ರನ್‌ಗೆ ಕಟ್ಟಿಹಾಕಿದರು. ಸತತ ಏಳನೇ ಗೆಲುವು ದಾಖಲಿಸಿದ ಭಾರತ ನಡೆಯುತ್ತಿರುವ ಐಸಿಸಿ ಈವೆಂಟ್‌ನಲ್ಲಿ ಪಾಯಿಂಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿತು. ಇದಕ್ಕೂ ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ವಾಂಖೆಡೆ ಸ್ಟೇಡಿಯಂನಲ್ಲಿ 8 ವಿಕೆಟ್​ ಕಳೆದುಕೊಂಡು 357 ರನ್​ ಕಲೆಹಾಕಿತ್ತು. ಭಾರತದ ಪರ ಆರಂಭಿಕ ಆಟಗಾರ ಶುಭಮನ್ ಗಿಲ್ 92 ಎಸೆತಗಳಲ್ಲಿ 92 ರನ್ ಗಳಿಸಿದರೆ, ವಿರಾಟ್ ಕೊಹ್ಲಿ (94 ಎಸೆತಗಳಲ್ಲಿ 88) ಮತ್ತು ಶ್ರೇಯಸ್ ಅಯ್ಯರ್ (56 ಎಸೆತಗಳಲ್ಲಿ 82) ಅರ್ಧಶತಕಗಳನ್ನು ಗಳಿಸಿ ಲಂಕಾಗೆ ಬೃಹತ್​ ಮೊತ್ತದ ಗುರಿ ನೀಡಲು ಕಾರಣರಾದರು.

ಇದನ್ನೂ ಓದಿ:ತಂಡಕ್ಕಾಗಿ ಆಡುವ ಸಮಯ, ವೈಯಕ್ತಿಕ ಪ್ರದರ್ಶನಕ್ಕಾಗಿ ಅಲ್ಲ: ಶ್ರೇಯಸ್​ ಅಯ್ಯರ್‌

ABOUT THE AUTHOR

...view details