ಕರ್ನಾಟಕ

karnataka

ETV Bharat / sports

ಕ್ರಿಕೆಟ್ ವಿಶ್ವಕಪ್ 2023: 'ನರೇಂದ್ರ ಮೋದಿ ಸ್ಟೇಡಿಯಂ' ಹಲವಾರು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿ.. - ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂ

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣವನ್ನು ಮೊದಲು ಮೊಟೆರಾ ಎಂದು ಕರೆಯಲಾಗುತ್ತಿತ್ತು. ಈ ಕ್ರೀಡಾಂಗಣವು ಮೊದಲಿನಂತೆಯೇ ಈಗಲೂ ಸುಂದರ ಮತ್ತು ಭವ್ಯವಾಗಿದೆ. ಮೊಟೆರಾ ಶಾಖ ಮತ್ತು ಧೂಳಿಗೆ ಹೆಸರುವಾಸಿಯಾಗಿದೆ. ಈ ಭಾಗವು ಭಾರತದ ಅತ್ಯಂತ ಅನಾನುಕೂಲವಾದ ಪ್ರೆಸ್​ ಬಾಕ್ಸ್​ ಮೂಲ ಸ್ಥಾನವಾಗಿದೆ. ಮೊಟೆರಾಗೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳ ಅರಿತುಕೊಳ್ಳಲು ಮೀನಾಕ್ಷಿ ರಾವ್ ಅವರ ವರದಿಯನ್ನು ನೀವು ಓದಬೇಕು...

Cricket World Cup 2023
ಕ್ರಿಕೆಟ್ ವಿಶ್ವಕಪ್ 2023: 'ಮೊಟೆರಾ' ಈಗ 'ನರೇಂದ್ರ ಮೋದಿ ಸ್ಟೇಡಿಯಂ' ಹಲವಾರು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿ...

By ETV Bharat Karnataka Team

Published : Oct 5, 2023, 11:18 AM IST

ಅಹಮದಾಬಾದ್ (ಗುಜರಾತ್):ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂ ಅನ್ನು ಮೊಟೆರಾ ಸ್ಟೇಡಿಯಂ ಎಂದೂ ಕರೆಯಲಾಗುತ್ತದೆ. ಈ ಕ್ರೀಡಾಂಗಣದ ಮೊದಲ ಹೆಸರು ಮೊಟೆರಾ. ಇದು ಈಗ ವಿಶ್ವದ ಅತ್ಯಂತ ಆಕರ್ಷಕ ಕ್ರೀಡಾಂಗಣವಾಗಿದೆ. ಇದು 1,32,000 ಪ್ರೇಕ್ಷಕರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಇದು ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ. ಅಕ್ಟೋಬರ್ 14 ರಂದು ಇದೇ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ರೋಚಕ ಕಾದಾಟ ಕೂಡ ನಡೆಯಲಿದೆ. ಈ ಎರಡೂ ದೇಶಗಳ ಆಟಗಾರರ ನಡುವೆ ಮೈದಾನದಲ್ಲಿ ಸದಾ ಉದ್ವಿಗ್ನತೆ ಕಂಡುಬರುತ್ತಿದೆ. ಈ ಬಾರಿ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣ ಉಭಯ ತಂಡಗಳ ಉತ್ಸಾಹವನ್ನು ಹೆಚ್ಚಿಸಲಿದೆ. ಈ ಮೈದಾನದಲ್ಲಿ ಭಾರತದ ಜೊತೆಗೆ ಆಡಲು ಪಾಕಿಸ್ತಾನಕ್ಕೆ ಭಯ ಕಾಡುತ್ತಿದೆ. ಪಾಕಿಸ್ತಾನವು ಬಹಳ ಸಮಯದ ನಂತರ ಮೊದಲ ಬಾರಿಗೆ 1,32,000 ಪ್ರೇಕ್ಷಕರ ಧ್ವನಿಯನ್ನು ಒಟ್ಟಿಗೆ ಕೇಳುತ್ತದೆ.

ಈ ಮೈದಾನದಲ್ಲಿ 1,32,000 ಪ್ರೇಕ್ಷಕರನ್ನು ನಿಭಾಯಿಸುವುದು ಮತ್ತು ಪೊಲೀಸ್ ಇಲಾಖೆಯಿಂದ ಭದ್ರತಾ ವ್ಯವಸ್ಥೆಗಳನ್ನು ಮಾಡುವುದು ದೊಡ್ಡ ವಿಷಯವಾಗಿದೆ. ಮೈದಾನದಲ್ಲಿ ಭಾರತ - ಭಾರತ ಘೋಷಣೆಗಳು ವಿಶ್ವಕಪ್‌ ಉತ್ಸಾಹವನ್ನು ತೋರಿಸುತ್ತಿವೆ. ಈ ಮೈದಾನದ ಎಲ್ಲ ಪಂದ್ಯಗಳು ರೋಚಕತೆ ಮತ್ತು ಉತ್ಸಾಹದಿಂದ ಕೂಡಿರುತ್ತವೆ. ಹಾಗಾಗಿ ಈ ಮೈದಾನ ಹಲವು ದಾಖಲೆಗಳಿಗೆ ಸಾಕ್ಷಿಯಾಗಲಿದೆ. ಆಟಗಾರರು ಕೂಡ ನೂತನ ದಾಖಲೆ ಬರೆಯುವ ಸಾಧ್ಯತೆಗಳು ಹೆಚ್ಚಿವೆ.

ಮೊಟೆರಾ ಕ್ರೀಡಾಂಗಣಕ್ಕೆ ಸಂಬಂಧಿಸಿದ ಗಮನಸೆಳೆಯುವ ವಿಷಯಗಳು:

  • ಈ ಮೈದಾನವನ್ನು 'ಸರ್ದಾರ್ ಪಟೇಲ್ ಕ್ರೀಡಾಂಗಣ' ಎಂದು ಕರೆಯಲಾಗುತ್ತಿತ್ತು. ನಂತರ ಮಾರ್ಚ್ 7, 1987 ರಂದು, ಬಿಸಿಲಿನ ಬೇಗೆ ಮಧ್ಯೆಯೇ ಸುನಿಲ್ ಗವಾಸ್ಕರ್ 10,000 ಟೆಸ್ಟ್ ರನ್​ಗಳ ಗಡಿಯನ್ನು ದಾಟಿದ್ದರು. ಗವಾಸ್ಕರ್ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಈ ಸಾಧನೆಯನ್ನು ಇದುವರೆಗೆ ಯಾವ ಶ್ರೇಷ್ಠ ಆಟಗಾರನೂ ಮುರಿಯಲು ಸಾಧ್ಯವಾಗಿಲ್ಲ. ಸರ್ ಡಾನ್ ಬ್ರಾಡ್ಮನ್ ಕೂಡ ಈ ದಾಖಲೆಯ ಹತ್ತಿರ ಬರಲು ಸಾಧ್ಯವಾಗಲಿಲ್ಲ.
  • ಇದೇ ಮೈದಾನದಲ್ಲಿ ಸುನಿಲ್ ಗವಾಸ್ಕರ್ ಅವರು ತಮ್ಮ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸ್ಫೋಟಕ ಇನ್ನಿಂಗ್ಸ್ ಆಡಿದರು. ಅವರು 395 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿದರು.
  • ಕಪಿಲ್ ದೇವ್ 1994 ರಲ್ಲಿ ಮೊಟೆರಾ ಮೈದಾನದಲ್ಲಿ ಸರ್ ರಿಚರ್ಡ್ ಹ್ಯಾಡ್ಲಿ ಅವರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ದಾಖಲೆಯನ್ನು ಮುರಿದಿದ್ದರು. ಅವರು 432ನೇ ವಿಕೆಟ್ ಪಡೆದುಕೊಂಡಿದ್ದರು. ಈ ಸಂದರ್ಭದಲ್ಲಿ ಪ್ರೇಕ್ಷಕರು 432 ಬಲೂನ್‌ಗಳನ್ನು ಆಕಾಶಕ್ಕೆ ಹಾರಿಸಿ ಸಂಭ್ರಮಿಸಿದ್ದರು. ಈ ಪಂದ್ಯ ಶ್ರೀಲಂಕಾ ವಿರುದ್ಧ ನಡೆದಿದ್ದು, ಶ್ರೀಲಂಕಾದ ಜನರು ಕೂಡ ಸಡಗರದಿಂದ ಕುಣಿದು ಕುಪ್ಪಳಿಸಿದ್ದರು.
  • 1983ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಈ ಕ್ರೀಡಾಂಗಣದ ಉದ್ಘಾಟನಾ ಪಂದ್ಯದಲ್ಲಿ ಕಪಿಲ್ ದೇವ್ ಕೇವಲ 83 ರನ್ ನೀಡಿ 9 ವಿಕೆಟ್ ಪಡೆದಿದ್ದರು.
  • ಮೊಟೆರಾದಲ್ಲಿ ಬಿಸಿಲಿನ ತಾಪ ಹೆಚ್ಚಿರುತ್ತದೆ. ದಟ್ಟವಾದ ಧೂಳಿನೊಂದಿಗೆ ಸೂರ್ಯನು ನೇರವಾಗಿ ನಿಮ್ಮ ತಲೆಯನ್ನು ಸುಡುವಂತಹ ಶಾಖ ಇಲ್ಲಿರುತ್ತದೆ. ಯಾವ ಸಮಯದಲ್ಲೂ ಇಲ್ಲಿ ಹವಾಮಾನ ಬದಲಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇಲ್ಲಿ ಶಾಖದ ಹೊಡೆತದ ಅಪಾಯವೂ ಇದೆ. ಇದನ್ನು ತಪ್ಪಿಸಲು ಟೋಪಿ ಧರಿಸಲು ಸಲಹೆ ನೀಡಲಾಗುತ್ತದೆ.
  • ಈ ಮೈದಾನವು ವಿಶ್ವದ ಅತಿದೊಡ್ಡ ಕ್ರೀಡಾಂಗಣವಾಗಲು 2015 ರಿಂದ 2020 ರವರೆಗೆ 5 ವರ್ಷಗಳನ್ನು ತೆಗೆದುಕೊಂಡಿತು. ಈ ಕ್ರೀಡಾಂಗಣವನ್ನು ನವೀಕರಿಸಲು ಅಂದಾಜು 800 ಕೋಟಿ ರೂ. ವೆಚ್ಚವಾಗಿದೆ. ಈಗ ಈ ಕ್ರೀಡಾಂಗಣವು ವಿಶ್ವ ದರ್ಜೆಯ ಸೌಲಭ್ಯಗಳನ್ನು ಹೊಂದಿದೆ. ಇದರಲ್ಲಿ ಕ್ಲಬ್ ಪ್ರದೇಶ, ರೆಸ್ಟೊರೆಂಟ್ ಮತ್ತು ಸ್ಟ್ಯಾಂಡ್‌ಗಳ ವಿಸ್ತರಣೆ ಕಾರ್ಯವನ್ನು ದೊಡ್ಡ ಮಟ್ಟದಲ್ಲಿ ನಡೆಸಲಾಯಿತು. ಈ ಮೊಟೆರಾ ಕ್ರೀಡಾಂಗಣವನ್ನು ಈಗ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಿಂದ ಕರೆಯಲಾಗುತ್ತದೆ.
  • ಈ ಮೈದಾನದಲ್ಲಿ ಕಳೆದ ವರ್ಷ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನ ಫೈನಲ್ ಪಂದ್ಯ ನಡೆದಿತ್ತು. 2011ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಸೆಮಿಫೈನಲ್‌ನಲ್ಲಿ ಆಡಿದ್ದು ಇಲ್ಲಿಯೇ.
  • ಪ್ರಸಕ್ತ ವರ್ಷ ಈ ಕ್ರೀಡಾಂಗಣ ಮುಂಬೈನ ವಾಂಖೆಡೆ ಸ್ಟೇಡಿಯಂನಿಂದ ವಿಶ್ವಕಪ್ ಫೈನಲ್‌ನ ವೈಭವವನ್ನು ಕಸಿದುಕೊಂಡಿದೆ. ಇದರೊಂದಿಗೆ ಈಡನ್ ಗಾರ್ಡನ್ ಗಿಂತಲೂ ದೊಡ್ಡದು ಎಂಬ ಖ್ಯಾತಿಯನ್ನೂ ಪಡೆದುಕೊಂಡಿದೆ. ಮೊಟೆರಾ ಕ್ರೀಡಾಂಗಣವು ಗಮನಸೆಳೆಯುವ ವಿಷಯಗಳಿಗೆ ಖ್ಯಾತಿ ಗಳಿಸಿದೆ.

ಇದನ್ನೂ ಓದಿ:ಏಷ್ಯನ್ ಗೇಮ್ಸ್ 2023: ತೈವಾನ್ ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟ ಭಾರತದ ಮಹಿಳಾ ಆರ್ಚರಿ ತಂಡ: ಬಿಲ್ಲುಗಾರಿಕೆಯಲ್ಲಿ ದೇಶಕ್ಕೆ ಐದನೇ ಪದಕ...

ABOUT THE AUTHOR

...view details