ಕರ್ನಾಟಕ

karnataka

ETV Bharat / sports

ನಾಳೆ ದೆಹಲಿಯಲ್ಲಿ ಭಾರತ-ಅಫ್ಘಾನಿಸ್ತಾನ ವಿಶ್ವಕಪ್‌ ಪಂದ್ಯ: ತವರು ಮೈದಾನದಲ್ಲಿ ಅಬ್ಬರಿಸ್ತಾರಾ ಕೊಹ್ಲಿ?

ಚೆನ್ನೈನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ ಭಾರತ ಇದೀಗ ದೆಹಲಿಯಲ್ಲಿ ಎರಡನೇ ಪಂದ್ಯದ ಜಯವನ್ನು ಎದುರು ನೋಡುತ್ತಿದೆ.

Virat Kohli
Virat Kohli

By ETV Bharat Karnataka Team

Published : Oct 10, 2023, 5:55 PM IST

ನವದೆಹಲಿ:ವಿರಾಟ್​ ಕೊಹ್ಲಿ ಈ ವರ್ಷ ಅದ್ಭುತ ಫಾರ್ಮ್​ನಲ್ಲಿದ್ದಾರೆ. ವಿಶ್ವಕಪ್‌ ಕ್ರಿಕೆಟ್‌ನ ಮೊದಲ ಪಂದ್ಯದಲ್ಲಿ ತಮ್ಮ ರನ್​ ಹಸಿವು ತೋರಿಸಿರುವ ಕೊಹ್ಲಿ​, ಎರಡನೇ ಪಂದ್ಯವನ್ನು ನಾಳೆ ತಮ್ಮ ತವರು ಮೈದಾನದಲ್ಲಿ ಆಡುತ್ತಿದ್ದಾರೆ. ತಾವು ಆಡಿ ಬೆಳೆದ ಮೈದಾನದಲ್ಲೇ ವಿಶ್ವಕಪ್​ನ ಪಂದ್ಯ ಆಡುತ್ತಿರುವುದು ಯಾವುದೇ ಆಟಗಾರನಿಗೂ ಸ್ಮರಣೀಯ ಅನುಭವ ನೀಡುತ್ತದೆ.

ಲೀಗ್​ ಹಂತದ ತನ್ನ ಎರಡನೇ ಪಂದ್ಯದಲ್ಲಿ ಭಾರತ ಅಫ್ಘಾನಿಸ್ತಾನವನ್ನು ದೆಹಲಿಯ ಅರುಣ್​ ಜೇಟ್ಲಿ ಮೈದಾನದಲ್ಲಿ ಎದುರಿಸಲಿದೆ. ಈ ಮೈದಾನದ ವಿಶೇಷತೆಗಳನ್ನು ಅರಿತಿರುವ ವಿರಾಟ್​ಗೆ ಹೆಚ್ಚು ಲಾಭವಾಗುವ ಸಾಧ್ಯತೆ ಇದೆ. ಹೀಗಾಗಿ ವಿರಾಟ್​​ ಬ್ಯಾಟಿಂಗ್ ​ಮೇಲೆ ಕ್ರಿಕೆಟ್​ ಅಭಿಮಾನಿಗಳಿಗೂ ಸಾಕಷ್ಟು ನಿರೀಕ್ಷೆ ಇದೆ. ಈ ಕುರಿತು ವಿರಾಟ್ ಕೊಹ್ಲಿ- ಕೆ.ಎಲ್‌.ರಾಹುಲ್​ ಸಂಭಾಷಣೆಯ ವಿಡಿಯೋವನ್ನು ಬಿಸಿಸಿಐ ಎಕ್ಸ್​ ಆ್ಯಪ್​ನಲ್ಲಿ ಹಂಚಿಕೊಂಡಿದೆ.

ಭಾರತ ತಂಡದ ಅನುಭವಿ ಸ್ಟಾರ್​ ಆಟಗಾರರಾದ ವಿರಾಟ್​ ಕೊಹ್ಲಿ ಮತ್ತು ಕೆ.ಎಲ್.ರಾಹುಲ್​ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 165 ರನ್‌ಗಳ​ ಜೊತೆಯಾಟವಾಡಿ ಪಂದ್ಯದ ಗೆಲುವಿಗೆ ಕಾರಣರಾಗಿದ್ದರು. ವಿರಾಟ್​ 85 ಮತ್ತು ರಾಹುಲ್​ 97 ರನ್​ಗಳ ಅಮೋಘ ಇನ್ನಿಂಗ್ಸ್​ 2 ರನ್‌ಗೆ 3 ವಿಕೆಟ್​ ಕಳೆದುಕೊಂಡಿದ್ದ ಭಾರತಕ್ಕೆ ಆಸರೆಯಾಗಿತ್ತು.

ನಾಳಿನ ಪಂದ್ಯದಲ್ಲಿ ಭಾರತ ಯಾವುದೇ ಬದಲಾವಣೆ ಇಲ್ಲದೇ ಕಣಕ್ಕಿಳಿಯುವ ಸಾಧ್ಯತೆ ಇದೆ. ಆರಂಭಿಕ ಶುಭ್‌ಮನ್​ ಗಿಲ್​ ಜ್ವರದಿಂದ ಬಳಲುತ್ತಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಬಿಸಿಸಿಐ ಪ್ರಕಟಣೆಯ ಪ್ರಕಾರ, ಅವರು ನಾಳಿನ ಪಂದ್ಯದಲ್ಲಿ ಆಡುವುದಿಲ್ಲ. ಹೀಗಾಗಿ ಆರಂಭಿಕರಾಗಿ ಇಶಾನ್​ ಕಿಶನ್​ ಮುಂದುವರೆಯಲಿದ್ದಾರೆ.

ಬೌಲಿಂಗ್​ ವಿಭಾಗದಲ್ಲಿ ಒಬ್ಬ ಸ್ಪಿನ್ನರ್​ಗೆ ಕೊಕ್​ ಸಿಗಬಹುದು. ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣ ಸಂಪೂರ್ಣ ಸ್ಪಿನ್‌ ಸ್ನೇಹಿ ಆಗಿದ್ದರಿಂದ ಮೂವರು ಸ್ಪಿನ್ನರ್​ಗಳು ಮೈದಾನಕ್ಕಿಳಿದಿದ್ದರು. ದೆಹಲಿಯಲ್ಲಿ ಶಾರ್ದೂಲ್​ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಈ ಹಿಂದೆ ನಾಯಕ ರೋಹಿತ್​ ಶರ್ಮಾ ಆಡುವ 11 ಬಳಗದ ಆಯ್ಕೆ ಬಗ್ಗೆ ಮಾತನಾಡುವಾಗ ಪಿಚ್​ ಆಧರಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದಿದ್ದರು.

ಇದನ್ನೂ ಓದಿ:ICC Cricket World Cup 2023: ಕೆಎಲ್​ ರಾಹುಲ್​ಗೆ ಗಾಯವೇ ವರವಾಯ್ತೆ?.. ಕಮ್​ಬ್ಯಾಕ್​ ಬಳಿಕ ರೊಚ್ಚಿಗೇಳುತ್ತಿರುವ ಕನ್ನಡಿಗ​!

ABOUT THE AUTHOR

...view details