ಹೈದರಾಬಾದ್: ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರ ಕ್ರಿಕೆಟ್ ಹಬ್ಬವು ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು ನ್ಯೂಜಿಲ್ಯಾಂಡ್ ವಿರುದ್ಧ ಮೊದಲ ಪಂದ್ಯವನ್ನು ಆಡಲಿದೆ. ನವೆಂಬರ್ 19 ರಂದು ಶ್ರೀಲಂಕಾ ಟ್ರೋಫಿ ಎತ್ತುವ ನೆಚ್ಚಿನ ತಂಡವಾಗದಿದ್ದರೂ, ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ 1996ರಲ್ಲಿ ವಿಶ್ವಕಪ್ ಗೆದ್ದಾಗ ಮಾಜಿ ನಾಯಕ ಅರ್ಜುನ ರಣತುಂಗ ಮತ್ತು ಅವರ ತಂಡವು ಸಾಧಿಸಿದ ಸಾಧನೆಯನ್ನು ಅನುಕರಿಸಲು ಖಂಡಿತವಾಗಿಯೂ ಎದುರು ನೋಡುತ್ತದೆ.
ಅಕ್ಟೋಬರ್ 7 ರಂದು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಅಭಿಯಾನ ಪ್ರಾರಂಭಿಸಲಿರುವ ಶ್ರೀಲಂಕಾ ತಂಡದ ಸಾಮರ್ಥ್ಯ, ದೌರ್ಬಲ್ಯಗಳು, ಅವಕಾಶಗಳು ಮತ್ತು ಸವಾಲುಗಳನ್ನು ಗಮನಿಸುವುದಾದರೆ, ಅಭ್ಯಾಸ ಪಂದ್ಯಗಳಲ್ಲಿ ಶ್ರೀಲಂಕಾ ನಿರಾಶಾದಾಯಕ ಪ್ರದರ್ಶನ ತೋರಿದೆ. ಬಾಂಗ್ಲಾದೇಶದಿಂದ ಏಳು ವಿಕೆಟ್‌ಗಳಿಂದ ಸೋತಿದ್ದಾರೆ. ನಂತರ ಮಂಗಳವಾರ ಅಫ್ಘಾನಿಸ್ತಾನದ ವಿರುದ್ಧವೂ ಸೋತಿದ್ದಾರೆ.
ಶ್ರೀಲಂಕಾ ತಂಡ ಸಾಮರ್ಥ್ಯ:
ಅನುಭವಿ ಕೋರ್:ಶ್ರೀಲಂಕಾ ತಂಡವು ತಂಡಕ್ಕೆ ಸ್ಥಿರತೆ ಮತ್ತು ನಾಯಕತ್ವ ತೋರುವ ಅನುಭವಿ ಆಟಗಾರರಾದ ದಸುನ್ ಶನಕ, ಕುಸಾಲ್ ಮೆಂಡಿಸ್ ಮತ್ತು ದಿಮುತ್ ಕರುಣಾರತ್ನೆ ಅವರನ್ನು ಒಳಗೊಂಡಿದೆ. ಉಪಖಂಡದ ತಂಡವಾಗಿರುವುದರಿಂದ ಅವರು ಸ್ಪಿನ್ ವಿರುದ್ಧ ಉತ್ತಮವಾಗಿ ಆಡುವ ಸಾಮರ್ಥ್ಯ ಹೊಂದಿದ್ದಾರೆ. ಮತ್ತು ಭಾರತದಲ್ಲಿನ ಟ್ರ್ಯಾಕ್‌ಗಳು ಸಾಮಾನ್ಯವಾಗಿ ಸ್ಪಿನ್ನರ್‌ಗಳಿಗೆ ಸಹಾಯ ಮಾಡುತ್ತವೆ. ಕುಸಲ್ ಮೆಡಿಸ್ 112 ಇನ್ನಿಂಗ್ಸ್‌ಗಳಲ್ಲಿ 32.1 ಸರಾಸರಿಯಲ್ಲಿ ಎರಡು ಶತಕ ಮತ್ತು 25 ಅರ್ಧ ಶತಕಗಳೊಂದಿಗೆ 3,215 ರನ್ ಗಳಿಸಿದ್ದಾರೆ. ದಿಮುತ್ ಕರ್ಣರತ್ನೆ ಏಕದಿನದಲ್ಲಿ ಉತ್ತಮ ದಾಖಲೆ ಹೊಂದಿರುವ ಉತ್ತಮ ಆಟಗಾರ. ಅವರು 44 ಪಂದ್ಯಗಳಲ್ಲಿ 1,301 ರನ್ ಗಳಿಸಿ ಶತಕ ಮತ್ತು 11 ಅರ್ಧ ಶತಕಗಳನ್ನು ಗಳಿಸಿದ್ದಾರೆ.
ಪ್ರತಿಭಾವಂತ ಆಟಗಾರರು:ತಂಡವು ಭರವಸೆಯ ಯುವ ಪ್ರತಿಭಾವಂತರಾದ ಪಾತುಮ್ ನಿಸ್ಸಾಂಕ ಮತ್ತು ಚರಿತ್ ಅಸಲಂಕ ಅವರಂತಹ ಆಟಗಾರರನ್ನು ಹೊಂದಿದೆ. ಅವರು ತಾಜಾ ಶಕ್ತಿ ಮತ್ತು ಉತ್ಸಾಹವನ್ನು ನೀಡಬಲ್ಲರು. ಪಾತುಮ್ ನಿಸಂಕಾ ಅವರು 41 ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಮೂರು ಶತಕಗಳು ಮತ್ತು 9 ಅರ್ಧಶತಕಗಳೊಂದಿಗೆ 37 ರ ಸರಾಸರಿಯಲ್ಲಿ 1,396 ರನ್ ಗಳಿಸಿದ್ದಾರೆ. ಏಷ್ಯಾ ಕಪ್ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಚರಿತ್ ಅಸಲಂಕಾ ಭಾರತದ ವಿರುದ್ಧ ನಾಲ್ಕು ವಿಕೆಟ್ ಪಡೆದುಕೊಂಡಿದ್ದಾರೆ. ಆಫ್-ಬ್ರೇಕ್ ಬೌಲಿಂಗ್ ಮಾಡುವ ಎಡಗೈ ಬ್ಯಾಟರ್, 50-ಓವರ್ ಮಾದರಿಯಲ್ಲಿ ಉತ್ತಮ ದಾಖಲೆಯನ್ನು ಸಹ ಹೊಂದಿದ್ದಾರೆ. ಅವರು 41 ಪಂದ್ಯಗಳಲ್ಲಿ 41.03 ಸರಾಸರಿಯಲ್ಲಿ ಶತಕ ಮತ್ತು 9 ಅರ್ಧಶತಕಗಳೊಂದಿಗೆ 1,272 ರನ್ ಗಳಿಸಿದ್ದಾರೆ.
ಆಲ್-ರೌಂಡ್ ಬಲ:ಶ್ರೀಲಂಕಾ ಧನಂಜಯ ಡಿ ಸಿಲ್ವಾ ಅವರಂತಹ ಆಲ್-ರೌಂಡರ್‌ಗಳನ್ನು ಹೊಂದಿದೆ. ಇವರೆಲ್ಲ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕೊಡುಗೆ ನೀಡುವ ಸಾಧ್ಯತೆಯಿದೆ. ತಂಡಕ್ಕೆ ಸಮತೋಲನವನ್ನುಕಾಯ್ದುಕೊಳ್ಳಲು ಇದು ನೆರವಾಗಿದೆ.
ದೌರ್ಬಲ್ಯಗಳೇನು?:
ಅಸ್ಥಿರ ಪ್ರದರ್ಶನ:ಶ್ರೀಲಂಕಾ ಇತ್ತೀಚಿನ ದಿನಗಳಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸ್ಥಿರತೆಯ ಕೊರತೆಯಿಂದ ಬಳಲುತ್ತಿದೆ. ಒತ್ತಡದ ಸಂದರ್ಭಗಳಲ್ಲಿ ಸ್ಥಿರವಾಗಿ ಪ್ರದರ್ಶನ ನೀಡಲು ತಂಡ ವಿಫಲವಾಗಿದೆ.
ಹಿರಿಯರ ಮೇಲೆ ಅವಲಂಬನೆ:ತಂಡವು ಹಿರಿಯ ಆಟಗಾರರ ಮೇಲೆ ಹೆಚ್ಚು ಅವಲಂಬಿತವಾಗಿದೆ. ಜೊತೆಗೆ ಅವರು ಪ್ರದರ್ಶನ ನೀಡಲು ವಿಫಲವಾದರೆ, ಇದು ತುಲನಾತ್ಮಕವಾಗಿ ಅನನುಭವಿ ಆಟಗಾರರ ಮೇಲೆ ಅಪಾರ ಒತ್ತಡವನ್ನುಂಟು ಮಾಡುತ್ತದೆ. ಇಂತಹ ಸನ್ನಿವೇಶದಲ್ಲಿ ಹೊಸ ಆಟಗಾರರಿಗೆ ಸವಾಲಾಗಿ ಪರಿಣಮಿಸಲಿದೆ.