ಬರ್ಮಿಂಗ್ಯಾಮ್:ವರ್ಲ್ಡ್ ಟೂರ್ನಿಯ ಇಂಗ್ಲೆಂಡ್ ವಿರುದ್ಧದ ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಹಲ್ ಕಳಪೆ ದಾಖಲೆಯೊಂದನ್ನು ಮಾಡಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ 337 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ. ಈ ಪಂದ್ಯದಲ್ಲಿ ಬುಮ್ರಾ ಹಾಗೂ ಪಾಂಡ್ಯ ಹೊರತುಪಡಿಸಿ ಉಳಿದೆಲ್ಲ ಬೌಲರ್ಗಳು ದುಬಾರಿ ಎನಿಸಿದರು. 10 ಓವರ್ ಬೌಲಿಂಗ್ ಮಾಡಿದ ಚಹಲ್ 88 ರನ್ ಬಿಟ್ಟುಕೊಟ್ಟರಲ್ಲದೆ ವಿಕೆಟ್ ಕಬಳಿಸುವಲ್ಲಿಯೂ ವಿಫಲರಾದರು.
ಹೀಗೆ 10 ಓವರ್ಗಳಲ್ಲಿ 88 ರನ್ ಗಳಿಸಿರುವುದು ಚಹಲ್ ಅವರ ವೃತ್ತಿಜೀವನದ ಅತಿ ಕಳಪೆ ಪ್ರದರ್ಶನವಾಗಿದೆ. ಅಲ್ಲದೆ ವಿಶ್ವಕಪ್ನಲ್ಲಿ ಭಾರತೀಯ ಬೌಲರ್ವೋರ್ವ ಇಷ್ಟೊಂದು ದುಬಾರಿ ಎನಿಸಿರುವುದು ಇದೇ ಮೊದಲಾಗಿದೆ. ಈ ಹಿಂದೆ 2003ರ ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ವೇಗಿ ಜಾವಗಲ್ ಶ್ರೀನಾಥ್ 10 ಓವರ್ಗಳಲ್ಲಿ 87 ರನ್ ಬಿಟ್ಟುಕೊಟ್ಟಿದ್ದು ದಾಖಲೆಯಾಗಿತ್ತು.
ಇನ್ನು ಈ ಪಂದ್ಯದಲ್ಲಿ ಟೀಂ ಇಂಡಿಯಾದ ಮತ್ತೋರ್ವ ಪ್ರಮುಖ ಸ್ಪಿನ್ನರ್ ಕುಲ್ದೀಪ್ ಯಾದವ್ 10 ಓವರ್ಗಳಲ್ಲಿ 72 ರನ್ ನೀಡಿ 1 ವಿಕೆಟ್ ಪಡೆದರು.