ಚೆಸ್ಟರ್ ಲೆ ಸ್ಟ್ರೀಟ್:ವಿಶ್ವಕಪ್ ಮಹಾಸಮರದಲ್ಲಿ ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಪಂದ್ಯ ನಡೆಯುತ್ತಿದೆ. ಈ ಪಂದ್ಯದ ವೇಳೆ ಜೇನುಹುಳುಗಳ ದಾಳಿ ನಡೆದಿದ್ದು, ಆಟಗಾರರು ಕೆಲಕಾಲ ದಂಗಾದರು.
ಲಂಕಾ -ದ. ಆಫ್ರಿಕಾ ಪಂದ್ಯದ ವೇಳೆ ಜೇನುಹುಳುಗಳ ಅಟ್ಯಾಕ್... ಮೈದಾನದಲ್ಲೇ ಮಲಗಿದ ಆಟಗಾರರು! - undefined
ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದ ವೇಳೆ ತಂಡಗಳ ಆಟಗಾರರು ಹಾಗೂ ಅಂಪೈರ್ಗಳು ಜೇನುನೊಣಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಕೆಲಕಾಲ ಮೈದಾನದಲ್ಲೇ ಮಲಗುವಂತಾಗಿತ್ತು.
ಇಂಗ್ಲೆಂಡ್ನ ಚೆಸ್ಟರ್ ಲೆ ಸ್ಟ್ರೀಟ್ನ ರಿವರ್ಸೈಡ್ ಗ್ರೌಂಡ್ನಲ್ಲಿ ನಡೆಯುತ್ತಿರುವ ಪಂದ್ಯದ 48ನೇ ಓವರ್ನಲ್ಲಿ ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಕ್ರಿಸ್ ಮೋರಿಸ್ ಬೌಲಿಂಗ್ ನಡೆಸುತ್ತಿದ್ದರು. ಓವರ್ನಲ್ಲಿ 5ನೇ ಎಸೆತದ ಬಳಿಕ ಏಕಾಏಕಿ ಜೇನುಹುಳುಗಳು ಮೈದಾನದತ್ತ ದಾಳಿ ನಡೆಸಿವೆ. ಇದರಿಂದ ವಿಚಲಿತರಾದ ಆಟಗಾರರು ಹಾಗೂ ಅಂಪೈರ್ ಮೈದಾನದಲ್ಲೇ ಮಲಗಿಕೊಂಡು ಜೇನುಹುಳುಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದರು. ಏಕಾಏಕಿ ಏನಾಗುತ್ತಿದೆ ಎಂದು ವೀಕ್ಷಕರು ಕಂಗಾಲಾಗುವಂತಾಗಿತ್ತು. ಇನ್ನು ಕೆಲ ಕ್ಷಣಗಳಲ್ಲೇ ಜೇನುಹುಳುಗಳು ಮೈದಾನದಿಂದ ಹೋದ ಬಳಿಕ ಪಂದ್ಯ ಮತ್ತೆ ಆರಂಭವಾಯಿತು. ಆಗ ಆಟಗಾರರು ಮತ್ತು ಪ್ರೇಕ್ಷಕರು ನಿಟ್ಟುಸಿರು ಬಿಟ್ಟರು.
ಇನ್ನು ಹೀಗೆ ಆಟದ ವೇಳೆ ಜೇನುಹುಳುಗಳು ದಾಳಿ ನಡೆಸುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಕೂಡ ಅನೇಕ ಬಾರಿ ಜೇನುಹುಳುಗಳು ಉಪಟಳ ನೀಡುರುವ ನಿದರ್ಶನಗಳಿವೆ. ಈ ಹಿಂದೆ ಜೋಹಾನ್ಸ್ಬರ್ಗ್ನಲ್ಲಿ ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳಿಗೆ ಇಂತಹುದೇ ಸ್ಥಿತಿ ಎದುರಾಗಿತ್ತು. ಆಗ ಒಂದು ಗಂಟೆಗೂ ಹೆಚ್ಚು ಕಾಲ ಪಂದ್ಯ ಸ್ಥಗಿತವಾಗಿತ್ತು.