ಕರ್ನಾಟಕ

karnataka

ETV Bharat / sports

ನಾಳಿನ ಪಂದ್ಯದ ನಂತರ ಏಕದಿನ ಕ್ರಿಕೆಟ್​ಗೆ ಇಮ್ರಾನ್​ ತಾಹಿರ್​ ನಿವೃತ್ತಿ! - ಕ್ರಿಕೆಟ್

ನಾಳೆ ನಡೆಯುವ ವಿಶ್ವಕಪ್​ ಟೂರ್ನಿಯ ಕೊನೆಯ ಲೀಗ್​ ಪಂದ್ಯದಲ್ಲಿ ಆಸ್ಟ್ರೆಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗುತ್ತಿದ್ದು, ಪಂದ್ಯದ ನಂತರ ಇಮ್ರಾನ್​ ತಾಹೀರ್​ ಏಕದಿನ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಲಿದ್ದಾರೆ.

ಇಮ್ರಾನ್​ ತಾಹಿರ್​ ನಿವೃತ್ತಿ

By

Published : Jul 5, 2019, 2:11 PM IST

ಲಂಡನ್: ನಾಳೆ ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ನಂತರ ದಕ್ಷಿಣ ಆಫ್ರಿಕಾದ ಸ್ಪಿನ್ನರ್​ ಇಮ್ರಾನ್ ತಾಹೀರ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​​ಗೆ ನಿವೃತ್ತಿ ಘೋಷಿಸಲಿದ್ದಾರೆ.

ನಿವೃತ್ತಿ ಬಗ್ಗೆ ಮಾತನಾಡಿರುವ ಅವರು, ನಾಳಿನ ಪಂದ್ಯದಲ್ಲಿ ಜಯಗಳಿಸುವ ಗುರಿ ಹೊಂದಿದ್ದೇವೆ. ಇದೇ ವೇಳೆ ನಾನು ನಿವೃತ್ತಿ ಪಡೆಯುತ್ತಿರೋದಕ್ಕೆ ಬೇಸರ ಕೂಡ ಇದೆ. ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯಗಳನ್ನ ಆಡಬೇಕು ಎಂಬುದು ನನ್ನ ಕನಸಾಗಿತ್ತು, ಇದಕ್ಕೆ ಸಹಕಾರ ನೀಡಿದ ಪ್ರತಿಯೋಬ್ಬರಿಗೂ ಧನ್ಯವಾದ ತಿಳಿಸುತ್ತೇನೆ.

ಬೇರೆ ದೇಶದಿಂದ ಬಂದರೂ ನನ್ನ ತಂಡಕ್ಕೆ ಆಯ್ಕೆ ಮಾಡಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು. ನನಗೆ ಎಲ್ಲಿಯವರೆಗೆ ಕ್ರಿಕೆಟ್​ ಆಡಬೇಕು ಎನಿಸುತ್ತದೊ ಅಲ್ಲಿಯವರೆಗೆ ನನ್ನ ಆಟವನ್ನ ಮುಂದುವರೆಸುತ್ತೇನೆ. ತಂಡದ ಭವಿಷ್ಯದ ಬಗ್ಗೆ ನನಗೆ ಯಾವುದೇ ಚಿಂತೆ ಇಲ್ಲ, ಸಾಕಷ್ಟು ಪ್ರತಿಭಾವಂತ ಯುವ ಆಟಗಾರು ತಂಡದಲ್ಲಿದ್ದಾರೆ ಎಂದು ಹೇಳಿದ್ದಾರೆ.

ಇಮ್ರಾನ್​ ತಾಹೀರ್ ಪಾಕಿಸ್ತಾನದಲ್ಲಿ ಜನಿಸಿ, ದಕ್ಷಿಣ ಆಫ್ರಿಕಾ ಮೂಲದ ಮಹಿಳೆಯನ್ನ ವಿವಾಹವಾಗಿದ್ದಾರೆ. 2011ರಲ್ಲಿ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್​ಗೆ ಪಾದರ್ಪಣೆ ಮಾಡಿದ್ದ ತಾಹೀರ್​ ಇಲ್ಲಿವರೆಗೆ 106 ಏಕದಿನ ಕ್ರಿಕೆಟ್​ ಪಂದ್ಯಗಳನ್ನ ಆಡಿದ್ದು 172 ವಿಕೆಟ್​ ಪಡೆದುಕೊಂಡಿದ್ದಾರೆ. ಪ್ರಸಕ್ತ ವಿಶ್ವಕಪ್​ ಟೂರ್ನಿಯಲ್ಲಿ ಎಂಟು ಪಂದ್ಯಗಳಿಂದ 10 ವಿಕೆಟ್ ಪಡೆದುಕೊಂಡಿದ್ದಾರೆ.

ABOUT THE AUTHOR

...view details