ಮ್ಯಾಂಚೆಸ್ಟರ್: ವಿಕೆಟ್ ಪಡೆದಾಗಲೆಲ್ಲ ಮೂರು ಹೆಜ್ಜೆ ಮಾರ್ಚ್ ಫಾಸ್ಟ್ ಮಾಡಿ ಸೆಲ್ಯೂಟ್ ಹೊಡೆಯೋ ಮೂಲಕ ಸಂಭ್ರಮಾಚರಣೆ ನಡೆಸುತ್ತಿದ್ದ ವಿಂಡೀಸ್ ಆಟಗಾರ ಶೆಲ್ಡನ್ ಕಾಟ್ರೇಲ್ಗೆ ಟೀಂ ಇಂಡಿಯಾ ನಾಯಕ ವಿರಾಟ್ ಮತ್ತು ವೇಗಿ ಶಮಿ ತಿರುಗೇಟು ನೀಡಿದ್ದಾರೆ.
ನಿನ್ನೆ ಮ್ಯಾಂಚೆಸ್ಟರ್ನಲ್ಲಿ ನಡೆದಿದ್ದ ಭಾರತ- ವೆಸ್ಟ್ ಇಂಡೀಸ್ ನಡುವಿನ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಮೊಹ್ಮದ್ ಶಮಿ, ಕಾಟ್ರೇಲ್ ಬೌಲಿಂಗ್ನಲ್ಲಿ ಕೀಪರ್ಗೆ ಕ್ಯಾಚ್ ನೀಡಿ ಔಟ್ ಆದರು. ಈ ವೇಳೆ ಕಾಟ್ರೇಲ್ ಸೆಲ್ಯೂಟ್ ಮಾಡುವ ಮೂಲಕ ಶಮಿಯನ್ನ ಪೆವಿಲಿಯನ್ಗೆ ಕಳುಹಿಸಿದರು.