ಕರ್ನಾಟಕ

karnataka

ETV Bharat / sports

ಟಿವಿ ಮುಂದೆ ಕುಳಿತರೆ ದೇವರೆಂದು ತಿಳಿದುಕೊಳ್ಳುತ್ತಾರೆ: ಅಖ್ತರ್​ಗೆ ಸರ್ಫರಾಜ್ ತಿರುಗೇಟು - undefined

ಕೆಲವರು ಟಿವಿ ಮುಂದೆ ಕುಳಿತರೆ ತಾವು ದೇವರೆಂದು ತಿಳಿದುಕೊಳ್ಳುತ್ತಾರೆ ಎಂದು ಪಾಕ್ ನಾಯಕ ಸರ್ಫರಾಜ್, ಮಾಜಿ ಆಟಗಾರ ಶೋಯೆಬ್ ಅಖ್ತರ್​ಗೆ ತಿರುಗೇಟು ಕೊಟ್ಟಿದ್ದಾರೆ.

ಖ್ತರ್​ಗೆ ಸರ್ಫರಾಜ್ ತಿರುಗೇಟು

By

Published : Jun 26, 2019, 4:22 PM IST

ಲಂಡನ್​:ಐಸಿಸಿ ವಿಶ್ವಕಪ್​ ಕ್ರಿಕೆಟ್​ ಟೂರ್ನಿಯಲ್ಲಿ ಭಾರತ ತಂಡದ ವಿರುದ್ಧ ಟಾಸ್​ ಗೆದ್ದರೂ, ಟೀಂ ಇಂಡಿಯಾವನ್ನ ಬ್ಯಾಟಿಂಗ್​ಗೆ ಆಹ್ವಾನಿಸಿ, ಪಾಕ್ ಸೋಲಿಗೆ ಮುನ್ನುಡಿ ಬರೆದಿತ್ತು. ಪಾಕಿಸ್ತಾನದ ಸೋಲಿಗೆ ತೀವ್ರ ಹತಾಶೆಗೊಳಗಾಗಿದ್ದ ಮಾಜಿ ಆಟಗಾರ ಶೋಯೆಬ್ ಅಖ್ತರ್​, ಸರ್ಫರಾಜ್​ನದ್ದು ಬುದ್ಧಿಹೀನ ನಾಯಕತ್ವ ಎಂದು ಜರಿದಿದ್ದರು.

ಅಖ್ತರ್​ಗೆ ತಿರುಗೇಟು ಕೊಟ್ಟಿರುವ ಪಾಕ್ ತಂಡದ ನಾಯಕ ಸರ್ಫರಾಜ್ ಅಹ್ಮದ್, 'ಅವರ ಕಣ್ಣಿಗೆ ನಾವು ಆಟಗಾರರಂತೆ ಕಾಣುತ್ತಿಲ್ಲ, ಕೆಲವರು ಟಿವಿ ಮುಂದೆ ಕುಳಿತರೆ ತಾವು ದೇವರೆಂದು ತಿಳಿದುಕೊಳ್ಳುತ್ತಾರೆ' ಎಂದು ತಿರುಗೇಟು ಕೊಟ್ಟಿದ್ದಾರೆ.

ನಾಯಕನೊಬ್ಬ ಏಕೆ ಇಷ್ಟೊಂದು ಬುದ್ಧಿ ಹೀನನಾಗಿದ್ದಾನೆ ಎನ್ನುವುದು ಅರ್ಥವಾಗುತ್ತಿಲ್ಲ. ಪಾಕಿಸ್ತಾನ ಚೇಸಿಂಗ್​ನಲ್ಲಿ ದುರ್ಬಲ ಎನ್ನುವ ವಿಚಾರ ತಿಳಿದಿರಲಿಲ್ಲವೇ..? ತಮ್ಮ ತಂಡದ ಶಕ್ತಿ ಬ್ಯಾಟಿಂಗ್ ಅಲ್ಲ ಬೌಲಿಂಗ್​ ಎನ್ನುವ ಸಾಮಾನ್ಯ ವಿಚಾರ ಗೊತ್ತಿದ್ದೂ ಚೇಸಿಂಗ್ ಮೊರೆ ಹೋಗಿದ್ದು, ನಿಜಕ್ಕೂ ಮೂರ್ಖತನ ಎಂದು ಅಖ್ತರ್ ತಮ್ಮ ಅಧಿಕೃತ ಯುಟ್ಯೂಬ್ ಚಾನೆಲ್​​ನಲ್ಲಿ ಹೇಳಿಕೊಂಡಿದ್ದರು.

ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಕಂಡಿರುವ ಪಾಕಿಸ್ತಾನ ತಂಡ ಸೆಮಿಫೈನಲ್​ ಆಸೆಯನ್ನ ಜೀವಂತವಾಗಿರಿಸಿಕೊಂಡಿದ್ದು, ಇಂದು ನ್ಯೂಜಿಲ್ಯಾಂಡ್​​​ ತಂಡದ ವಿರುದ್ಧ ಸೆಣೆಸಾಡುತ್ತಿದೆ.

For All Latest Updates

TAGGED:

ABOUT THE AUTHOR

...view details