ಲಂಡನ್:ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು ನ್ಯೂಜಿಲೆಂಡ್ ತಂಡಕ್ಕೆ ಆರಂಭಿಕ ಆಘಾತ ನೀಡಿದೆ.
ಕ್ರಿಕೆಟ್ ಕಾಶಿ ಲಂಡನ್ನ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು.

ಆರಂಭಿಕರಾಗಿ ಕಣಕ್ಕಿಳಿದ ಮಾರ್ಟಿನ್ ಗಪ್ಟಿಲ್ ಹಾಗೂ ಹೆನ್ರಿ ನಿಕೋಲ್ಸ್ ಉತ್ತಮವಾಗಿ ರನ್ ಪೆರಿಸುವಲ್ಲಿ ವಿಫಲವಾಗಿದ್ದಾರೆ. ತಂಡದ ಮೊತ್ತ ಕೇವಲ 29 ರನ್ ಆಗಿದ್ದಾಗ 19 ರನ್ ಗಳಿಸಿ ಆಡುತ್ತಿದ್ದ ಗಪ್ಟಿಲ್, ಇಂಗ್ಲೆಂಡ್ ವೇಗಿ ಕ್ರಿಸ್ ವೋಕ್ಸ್ಗೆ ವಿಕೆಟ್ ಒಪ್ಪಿಸಿದರು.
ಇದರಿಂದಾಗಿ ಕಿವೀಸ್ ಮೊದಲ ಆಘಾತಕ್ಕೆ ಒಳಗಾಯಿತು. ಪ್ರಸಕ್ತ ಸಾಲಿನ ವಿಶ್ವಕಪ್ನಲ್ಲಿ ಕೆಟ್ಟ ಫಾರ್ಮ್ ಮುಂದುವರಿಸಿದ ಗಪ್ಟಿಲ್ 18 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಸಿಕ್ಸರ್ ದಾಖಲಿಸಿದ್ದಾರೆ. 35 ರನ್ ಗಳಿಸಿದ ಹೆನ್ರಿ ನಿಕೋಲ್ಸ್ ಹಾಗೂ 16 ರನ್ನೊಂದಿಗೆ ನಾಯಕ ಕೇನ್ ವಿಲಿಯಮ್ಸನ್ ಬ್ಯಾಟಿಂಗ್ ಮುಂದುವರಿಸಿದ್ದಾರೆ.