ಲಂಡನ್: ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ ರೋಚಕ ಫೈನಲ್ ಪಂದ್ಯ ರೋಚಕ ಘಟ ತಲುಪಿದ್ದು, ಇಂಗ್ಲೆಂಡ್ ಆರಂಭಿಕ ಆಘಾತದಿಂದ ಪಾರಾಗಿದೆ.
ಕುತೂಹಲ ಘಟದತ್ತ ವರ್ಲ್ಡ್‌ಕಪ್ ಫೈನಲ್ ಪಂದ್ಯ.. ಸ್ಟೋಕ್ಸ್, ಬಟ್ಲರ್ ಅರ್ಧಶತಕ.. -
ನ್ಯೂಜಿಲೆಂಡ್ ಒಡ್ಡಿರುವ 242 ರನ್ ಗೆಲುವಿನ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ಗೆ ಮೊದಲ ನಾಲ್ವರು ದಾಂಡಿಗರಾದ 'ಜೇಸನ್' ರಾಯ್ 17 (20), 'ಜಾನಿ' ರೋಟ್ 36 (55), 'ಜೋ' ರೂಟ್ 7 (30) ಹಾಗೂ ನಾಯಕ ಇಯಾನ್ ಮಾರ್ಗನ್ 5 (22) ಅವರು ತಂಡದ ಮೊತ್ತ ನೂರರ ಗಡಿ ದಾಟುವ ಮೊದಲೇ ಪೆವಿಲಿಯನ್ ಸೇರಿದ್ದರು.

ಇವರ ಬಳಿಕ ಬಂದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಬೆನ್ ಸ್ಟೋಕ್ಸ್ ಹಾಗೂ ವಿಕೆಟ್ ಕೀಪರ್ ಜೋಸ್ ಬಟ್ಲರ್ ಅವರು ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದರು. ಸ್ಟೋಕ್ಸ್ 50 (81) ರನ್ ಗಳಿಸಿದ್ದರೇ ಬಟ್ಲರ್ 59 (65) ರನ್ ಗಳಿಸಿ ಲಾಕಿ ಫರ್ಗುಸನ್ಗೆ ವಿಕೆಟ್ ಒಪ್ಪಿಸಿದರು.ಪ್ರಸ್ತುತ ತಂಡದ ಮೊತ್ತವು 44.5 ಓವರ್ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 196 ರನ್ ಗಳಿಸಿದೆ. ಐತಿಹಾಸಿಕ ವಿಶ್ವಕಪ್ ಗೆಲ್ಲಲು ಇಂಗ್ಲೆಂಡ್ ಇನ್ನೂ 31 ಎಸೆತಗಳಿಂದ 46 ರನ್ ಗಳಿಸಬೇಕಿದೆ.