ಹೈದರಾಬಾದ್: ವಿಶ್ವಕಪ್ ಟೂರ್ನಿಯಲ್ಲಿ ನಿನ್ನೆ ಇಂಗ್ಲೆಂಡ್ ವಿರುದ್ಧ ಭಾರತದ ಗೆಲುವಿಗೆ ಪಾಕಿಸ್ತಾನದಲ್ಲೂ ಕೂಡ ಅಭಿಮಾನಿಗಳಿಂದ ಪ್ರೋತ್ಸಾಹ ವ್ಯಕ್ತವಾಗಿತ್ತು. ಆದರೆ, ಟೀಂ ಇಂಡಿಯಾ ಸೋತ ಬಳಿಕ ಪಾಕ್ ಕ್ರಿಕೆಟರ್ಗಳಿಂದ ಭಾರೀ ಟೀಕೆ ವ್ಯಕ್ತವಾಗಿದೆ.
ಭಾರತ ತಂಡಕ್ಕೆ ಕ್ರೀಡಾ ಮನೋಭಾವವೇ ಇಲ್ಲ: ಪಾಕ್ ಮಾಜಿ ಕ್ರಿಕೆಟಿಗ ಗರಂ - undefined
ನಿನ್ನೆ ಇಂಗ್ಲೆಂಡ್ ವಿರುದ್ಧ ಸೋಲನುಭವಿಸಿದ ಟೀಂ ಇಂಡಿಯಾ ವಿರುದ್ಧ ಪಾಕ್ ಮಾಜಿ ಆಟಗಾರ ವಕಾರ್ ಯೂನಿಸ್ ಕಿಡಿಕಾರಿದ್ದಾರೆ.
ಟೀಂ ಇಂಡಿಯಾ ಸೋಲಿನಿಂದ ಕುಪಿತಗೊಂಡಿರುವ ಪಾಕ್ ಮಾಜಿ ಆಟಗಾರ ವಕಾರ್ ಯೂನಿಸ್, ಕೊಹ್ಲಿ ಪಡೆಗೆ 'ಕ್ರೀಡಾ ಮನೋಭಾವವೇ ಇಲ್ಲ ಎಂದು ಜರಿದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಯೂನಿಸ್, 'ಇಂಗ್ಲೆಂಡ್ ವಿರುದ್ಧದ ಪ್ರದರ್ಶನ ನಿಮ್ಮ ನೈಜ ಆಟವಲ್ಲ, ಪಾಕಿಸ್ತಾನ ಸೆಮಿಫೈನಲ್ ತಲುಪಿದರೂ, ತಲುಪದೇ ಇದ್ದರೂ ನನಗೆ ಏನೂ ಅನ್ನಿಸುವುದಿಲ್ಲ. ಆದರೆ ನಿಮ್ಮಂತಹ ಚಾಂಪಿಯನ್ ತಂಡದ ಕ್ರೀಡಾ ಮನೋಭಾವದ ಬಗ್ಗೆ ನಡೆದ ಪರೀಕ್ಷೆಯಲ್ಲಿ ನೀವು ಸೋತಿರಿ' ಎಂದು ಕಿಡಿಕಾರಿದ್ದಾರೆ.
ಇನ್ನು ಆಂಗ್ಲರ ವಿರುದ್ಧ 338 ರನ್ ಗುರಿ ಬೆನ್ನತ್ತಿದ್ದ ಭಾರತ 31 ರನ್ಗಳಿಂದ ಸೋಲನುಭವಿಸಿತ್ತು. ಈ ಪಂದ್ಯದಲ್ಲಿ ಇಂಗ್ಲೆಂಡ್ ಸೋತಿದ್ದರೆ ಪಾಕಿಸ್ತಾನ ತಂಡದ ಸೆಮಿಫೈನಲ್ ಹಾದಿ ಸುಲಭವಾಗುತ್ತಿತ್ತು. ಹೀಗಾಗಿ ಪಾಕ್ನ ಮಾಜಿ ಆಟಗಾರರು ಸೇರಿದಂತೆ ನೆರೆಯ ರಾಷ್ಟ್ರದಾದ್ಯಂತ ಭಾರತ ತಂಡದ ಗೆಲುವಿಗೆ ಬೆಂಬಲ ವ್ಯಕ್ತವಾಗಿತ್ತು. ಆದರೆ, ಟೀಂ ಇಂಡಿಯಾ ಸೋಲಿನಿಂದ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿತ್ತು.