ಇಂಗ್ಲೆಂಡ್: ಭಾರತ ತಂಡದ ಮಾಜಿ ಕ್ರಿಕೆಟ್ ಆಟಗಾರರಾದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತು ವಿರೇಂದ್ರ ಸೆಹ್ವಾಗ್ ಜೊತೆ ಇರುವ ಫೋಟೋವನ್ನ ವಿರಾಟ್ ಹಂಚಿಕೊಂಡಿದ್ದಾರೆ.
'ಅಪೂರ್ವ ಸಂಗಮ' ಟ್ವಿಟರ್ನಲ್ಲಿ ಫೋಟೋ ಹಂಚಿಕೊಂಡ ವಿರಾಟ್! - undefined
ಸಚಿನ್ ತೆಂಡೂಲ್ಕರ್ ಮತ್ತು ವಿರೇಂದ್ರ ಸೆಹ್ವಾಗ್ ಜೊತೆ ಇರುವ ಫೋಟೋವನ್ನ ವಿರಾಟ್ ಹಂಚಿಕೊಂಡಿದ್ದಾರೆ. ಈ ಫೋಟೋ ಈಗ ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳ ಹಾಟ್ ಫೇವರಿಟ್ ಆಗಿದೆ.
'ಅಪೂರ್ವ ಸಂಗಮ'
ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಪ್ರಾರಂಭಕ್ಕೂ ಮೊದಲು ಸಚಿನ್ ಮತ್ತು ಸೆಹ್ವಾಗ್ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿಯನ್ನ ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಈ ವೇಳೆ ತೆಗೆದಿರುವ ಪೋಟೋವೊಂದನ್ನ ವಿರಾಟ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
2011ರ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್, ಸಚಿನ್ ಮತ್ತು ಸೆಹ್ವಾಗ್ ಜೊತೆ ಡ್ರಸ್ಸಿಂಗ್ ರೂಂ ಹಂಚಿಕೊಂಡಿದ್ದರು.