ಕರ್ನಾಟಕ

karnataka

ETV Bharat / sports

ವಿಶ್ವಕಪ್​ ಟೂರ್ನಿಯಲ್ಲಿ ರಂಗೇರಿದ ಟ್ವಿಟರ್... ಧೋನಿಯೇ ಹೆಚ್ಚು ಚರ್ಚಿತ, ಕೊಹ್ಲಿಯೂ ಅಗ್ರಗಣ್ಯ! - undefined

ಎಲ್ಲ ವಿಚಾರಗಳಿಗೂ ವೇಗವಾಗಿ ಸ್ಪಂದಿಸುವ ಸಾಮಾಜಿಕ ಜಾಲತಾಣ ವಿಶ್ವಕಪ್​ ವೇಳೆಯೂ ಸಕ್ರಿಯವಾಗಿ ಕಾರ್ಯನಿರ್ವಹಿಸಿದೆ. ಅದರಲ್ಲೂ ವಿಶೇಷವಾಗಿ ಟ್ವಿಟರ್​ನಲ್ಲಿ ಈ ಬಾರಿ ನಡೆದ ಸಂವಹನ ಕಳೆದ ಆವೃತ್ತಿಯ ವಿಶ್ವಕಪ್​ಗಿಂತ ದ್ವಿಗುಣವಾಗಿದೆ.

ಟ್ವಿಟರ್

By

Published : Jul 17, 2019, 5:04 AM IST

Updated : Jul 17, 2019, 5:13 AM IST

ಹೈದರಾಬಾದ್:ಸುಮಾರು ಒಂದೂವರೆ ತಿಂಗಳುಗಳ ಕಾಲ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದ್ದ ವಿಶ್ವಕಪ್ ಟೂರ್ನಿಗೆ ಅದ್ಧೂರಿ ತೆರೆ ಬಿದ್ದಿದ್ದು, ಫ್ಯಾನ್ಸ್ ಸೋಲು-ಗೆಲುವಿನ ಬಗ್ಗೆ ತಮ್ಮದೇ ರೀತಿಯಲ್ಲಿ ವಿಮರ್ಶೆ ಮಾಡುತ್ತಿದ್ದಾರೆ.

ಎಲ್ಲ ವಿಚಾರಗಳಿಗೂ ವೇಗವಾಗಿ ಸ್ಪಂದಿಸುವ ಸಾಮಾಜಿಕ ಜಾಲತಾಣ ವಿಶ್ವಕಪ್​ ವೇಳೆಯೂ ಸಕ್ರಿಯವಾಗಿ ಕಾರ್ಯನಿರ್ವಹಿಸಿದೆ. ಅದರಲ್ಲೂ ವಿಶೇಷವಾಗಿ ಟ್ವಿಟರ್​ನಲ್ಲಿ ಈ ಬಾರಿ ನಡೆದ ಸಂವಹನ ಕಳೆದ ಆವೃತ್ತಿಯ ವಿಶ್ವಕಪ್​ಗಿಂತ ದ್ವಿಗುಣವಾಗಿದೆ.

ಈ ಬಾರಿಯ ವಿಶ್ವಕಪ್​ ವೇಳೆ ಬರೋಬ್ಬರಿ ಮೂರು ಕೋಟಿ ಹತ್ತು ಲಕ್ಷ ಟ್ವೀಟ್​ಗಳು ದಾಖಲಾಗಿವೆ. ಟೀಮ್ ಇಂಡಿಯಾದ ಬಗ್ಗೆ ಅತೀ ಹೆಚ್ಚಿನ ಟ್ವೀಟ್ ಮಾಡಲಾಗಿದೆ. ಎಂ.ಎಸ್​.ಧೋನಿ ಹಾಗೂ ವಿರಾಟ್ ಕೊಹ್ಲಿ ಅತೀ ಹೆಚ್ಚು ಟ್ವೀಟ್​ಗೊಳಗಾದ ನಾಯಕರಾಗಿದ್ದಾರೆ.

ಅತೀ ಹೆಚ್ಚು ಟ್ವೀಟ್​ಗೊಳಗಾದ ನಾಯಕರು

ಗೋಲ್ಡನ್​ ಟ್ವೀಟ್​..!

ಟೀಮ್ ಇಂಡಿಯಾ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಕ್ಯಾಮರ ಕಣ್ಣಿಗೆ ಬಿದ್ದು ಎಲ್ಲೆಡೆ ಸುದ್ದಿಯಾಗಿದ್ದ ಭಾರತೀಯ ಮೂಲದ ಚಾರುಲತಾ ಪಟೇಲ್​ರನ್ನು ಭೇಟಿ ಮಾಡಿದ ಕೊಹ್ಲಿ ಫೋಟೋವನ್ನು ವಿಶ್ವಕಪ್​​ನ ಗೋಲ್ಡನ್ ಟ್ವೀಟ್ ಎಂದು ಪರಿಗಣಿಸಲಾಗಿದೆ.

ಈ ಪಂದ್ಯಕ್ಕೆ ಅತೀ ಹೆಚ್ಚು ಟ್ವೀಟ್

ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ಅತೀ ಹೆಚ್ಚು ಟ್ವೀಟ್​ಗಳು ದಾಖಲಾಗಿವೆ. ನಂತರದ ಸ್ಥಾನದಲ್ಲಿ ವಿಶ್ವಕಪ್ ಫೈನಲ್ ಪಂದ್ಯವಿದ್ದರೆ ಮೂರನೇ ಸ್ಥಾನದಲ್ಲಿ ಭಾರತ-ನ್ಯೂಜಿಲ್ಯಾಂಡ್ ನಡುವಿನ ಸೆಮಿಫೈನಲ್​ ಪಂದ್ಯವಿದೆ.

ಅತೀ ಹೆಚ್ಚು ಟ್ವೀಟ್​ಗೊಳಗಾದ ಪಂದ್ಯಗಳು
Last Updated : Jul 17, 2019, 5:13 AM IST

For All Latest Updates

TAGGED:

ABOUT THE AUTHOR

...view details